ಮೂಡುಬಿದಿರೆ : ರೋಟರಿ ಕ್ಲಬ್ ಮೂಡುಬಿದಿರೆ ಮಿಡ್ ಟೌನ್ ಪವರ್ ಫ್ರೆಂಡ್ಸ್ ಹಾಗೂ ಊರಿನ ದಾನಿಗಳ ಸಹಕಾರದಿಂದ ಮಾರೂರು ಗ್ರಾಮದ ಗುಡ್ಡಲಂಗಡಿ ಪ್ರದೇಶದ ಬಡ ಕುಟುಂಬಕ್ಕಾಗಿ ನೂತನವಾಗಿ ನಿರ್ಮಿಸಲಾದ ಮನೆಯ ಹಸ್ತಾಂತರ ಸಮಾರಂಭವು ಜುಲೈ 8ರಂದು ಸಂಜೆ 3.30 ಗಂಟೆಗೆ ನಡೆಯಲಿದೆ.
ಸಮಾಜಸೇವೆಯ ಸಂಕಲ್ಪ, ದಾನಿಗಳ ಉದಾರ ಸಹಕಾರ ಹಾಗೂ ವಿವಿಧ ಸಂಘಟನೆಗಳ ಸೇವಾಭಾವದ ಫಲವಾಗಿ ಈ ಮನೆ ನಿರ್ಮಾಣಗೊಂಡಿದ್ದು, ಫಲಾನುಭವಿ ಕುಟುಂಬಕ್ಕೆ ಗೌರವಯುತ ಜೀವನ ನಡೆಸಲು ನೆರವಾಗುವ ಮಹತ್ವದ ಹೆಜ್ಜೆಯಾಗಿದೆ.

