“ಶಿವಗಿರಿ ಯಾತ್ರೆ ಕೈಗೊಂಡಾಗಲೇ ನಾರಾಯಣ ಗುರುಗಳ ತತ್ತ್ವದ ನಿಜರೂಪ ಕಣ್ಣಿಗೆ ಕಾಣುತ್ತದೆ” ಹರೀಶ್ ಪೂಜಾರಿ ಬಾಕಿಲ

0
8

ಮಾಣಿ : ಯುವವಾಹಿನಿ (ರಿ.) ಮಾಣಿ ಘಟಕದ ವತಿಯಿಂದ ಹಮ್ಮಿಕೊಂಡಿರುವ ‘ಮನೆಮನೆಗೆ ಗುರುತತ್ತ್ವ ಸಂದೇಶ’ ಕಾರ್ಯಕ್ರಮದ ಅಂಗವಾಗಿ ಸೆ. 26ರಂದು ಸೀತಾ ಗುಜುರುಕ್ ಕಡೇಶಿವಾಲ ಅವರ ಮನೆಯಲ್ಲಿ ಗುರುತತ್ತ್ವ ಸಂದೇಶ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಘಟಕದ ಮಾಜಿ ಅಧ್ಯಕ್ಷ ಹರೀಶ್ ಪೂಜಾರಿ ಬಾಕಿಲ, “ನಾರಾಯಣ ಗುರುಗಳ ತತ್ತ್ವ, ಆದರ್ಶ ಹಾಗೂ ಸಾಮಾಜಿಕ ಪರಿವರ್ತನೆಯ ಸಂದೇಶವನ್ನು ಆಳವಾಗಿ ಅರಿಯಲು ಶಿವಗಿರಿ ಯಾತ್ರೆ ಒಂದು ಅಪೂರ್ವ ಅವಕಾಶ. ಶಿವಗಿರಿ ಕ್ಷೇತ್ರಕ್ಕೆ ಭೇಟಿ ನೀಡಿದಾಗ ಗುರುಗಳ ವಿಚಾರಧಾರೆ, ಜೀವನ ಸಂದೇಶ ಹಾಗೂ ಸಮಾಜ ಪರಿವರ್ತನೆಯ ಆಶಯಗಳ ನಿಜರೂಪವನ್ನು ಕಣ್ಣಾರೆ ಕಾಣಲು ಸಾಧ್ಯವಾಗುತ್ತದೆ” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಘಟಕದ ಮಾಜಿ ಅಧ್ಯಕ್ಷ ರಮೇಶ್ ಪೂಜಾರಿ ಮು ಜಲ, ರಾಜೇಶ್ ಕೊಟ್ಯಾನ್, ಜನಾರ್ದನ ಕೊಡಂಗೆ, ಲೋಕೇಶ್, ಬಾಲಕೃಷ್ಣ ಶೇರಾ, ಸತೀಶ್, ಸುಧಾ, ಸೀತಾ ವಿದ್ಯಾಧರ ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಘಟಕದ ಅಧ್ಯಕ್ಷ ಗಣೇಶ್ ಪೂಜಾರಿ ಕೊಡಾಜೆ ಸ್ವಾಗತಿಸಿದರು. ನಾರಾಯಣ ಗುರುತತ್ತ್ವ ಪ್ರಚಾರ ಹಾಗೂ ಅನುಷ್ಠಾನ ನಿರ್ದೇಶಕ ಶ್ರೀಧರ ಪೂಜಾರಿ ಮುಜಾಲ ವಂದಿಸಿದರು. ಡಾ. ತ್ರಿವೇಣಿ ರಮೇಶ್ ಕಾರ್ಯಕ್ರಮ ನಿರೂಪಿಸಿದರು.