ಹೆಬ್ರಿ ತಾಲೂಕು ರೆಡ್ ಕ್ರಾಸ್ ಸೊಸೈಟಿ – ಪೂರ್ವಭಾವಿ ಸಭೆ

0
12


ಹೆಬ್ರಿ : ಹೆಬ್ರಿ ತಾಲೂಕಿನಲ್ಲಿ ನೂತನವಾಗಿ ರೆಡ್ ಕ್ರಾಸ್ ಸೊಸೈಟಿಯನ್ನು ಸ್ಥಾಪಿಸುವ ಉದ್ದೇಶದಿಂದ ಹೆಬ್ರಿ ಶ್ರೀ ಅನಂತ ಪದ್ಮನಾಭ ಸನ್ನಿಧಿ ಸಭಾ ಭವನದಲ್ಲಿ ಜು. 18 ರಂದು ಪೂರ್ವಭಾವಿ ಸಭೆ ನಡೆಯಿತು.
ಜಿಲ್ಲಾ ರೆಡ್ ಕ್ರಾಸ್ ಸೊಸೈಟಿಯ ಮಾರ್ಗದರ್ಶನದಲ್ಲಿ ವೀಣಾ ಆರ್. ಭಟ್ ವರಂಗ ಇವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ವರಂಗ ವೀಣಾ ಆರ್. ಭಟ್ ರವರನ್ನು ಮೂರು ವರ್ಷದ ಅವಧಿಗೆ ಹೆಬ್ರಿ ತಾಲೂಕು ಮಟ್ಟದ ರೆಡ್ ಕ್ರಾಸ್ ಸೊಸೈಟಿ ಚೇರ್ಮನ್ ಆಗಿ ಸರ್ವಾನುಮತದಿಂದ ಆಯ್ಕೆಮಾಡಲಾಯಿತು.


ಸಂಸ್ಥೆಯ ಸ್ಥಾಪನೆ ಬಗ್ಗೆ ಮಾಹಿತಿ ನೀಡಲು ಜಿಲ್ಲೆಯಿಂದ ಆಗಮಿಸಿದ ಜಿಲ್ಲಾ ಚೇರ್ಮೇನ್ ಡಾ. ಅಶೋಕ್ ಕುಮಾರ್ ವೈ. ಜಿ ಮತ್ತು ಕಾರ್ಯದರ್ಶಿ ಡಾ. ಗಣನಾಥ ಎಕ್ಕಾರ್ ರವರು ಸಂಸ್ಥೆಯ ಬಗ್ಗೆ ಮಾಹಿತಿ ನೀಡಿ, ಭಾರತೀಯ ರೆಡ್ ಕ್ರಾಸ್ ಸೊಸೈಟಿ ಭಾರತದ ಪ್ರಮುಖ ಸ್ವಯಂಪ್ರೇರಿತ, ಮಾನವೀಯ ಸೇವಾ ಸಂಸ್ಥೆಯಾಗಿದೆ. ಸಮಾಜ ಕಲ್ಯಾಣವನ್ನು ಉತ್ತೇಜಿಸುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದರು. ಕನಿಷ್ಠ ಪಕ್ಷ 50 ಮಂದಿಯನ್ನು ತಾಲೂಕಿನಲ್ಲಿ ಸಂಸ್ಥೆಗೆ ಸದಸ್ಯರನ್ನಾಗಿ ಸೇರಿಸಿ, ಎಲ್ಲರ ಸಹಕಾರ ಪಡೆದು ಮುಂದಿನ ದಿನಗಳಲ್ಲಿ ನೂತನವಾಗಿ ಆದಷ್ಟು ಬೇಗ ರೆಡ್ ಕ್ರಾಸ್ ಸೊಸೈಟಿ ಸ್ಥಾಪನೆಯಾಗಲಿ ಎಂದು ಹೇಳಿದರು. ಅವರು
ನೂತನವಾಗಿ ಆಯ್ಕೆಯಾದ ಸಂಸ್ಥೆಯ ಚೇರ್ಮನ್ ವೀಣಾ ಆರ್ ಭಟ್, ವೈಸ್ ಚೇರ್ಮನ್ ಡಾ. ವಿದ್ಯಾಧರ ಹೆಗ್ಡೆ, ಕಾರ್ಯದರ್ಶಿಯಾಗಿ ಆಯ್ಕೆಯಾದ ಪ್ರಶಾಂತ್ ಪೈ ಮುದ್ರಾಡಿ. ಕೋಶಾಧಿಕಾರಿಯಾಗಿ ಆಯ್ಕೆಯಾದ ಪ್ರಕಾಶ ಶೆಟ್ಟಿ ಕಲ್ಲಿಲು, ಇವರಿಗೆ ಶುಭ ಹಾರೈಸಿದರು.
ನೂತನ ಚೇರ್ಮನ್ ಆಗಿ ಆಯ್ಕೆಯಾದ ವೀಣಾ ಆರ್. ಭಟ್ ಸ್ವಾಗತಿಸಿ, ಕಾರ್ಯದರ್ಶಿ ಪ್ರಶಾಂತ್ ಪೈ ವಂದಿಸಿದರು. ತಾಲೂಕಿನ ವಿವಿಧ ಗ್ರಾಮಗಳ ಗಣ್ಯರು ಭಾಗವಹಿಸಿ ರೆಡ್ ಕ್ರಾಸ್ ಸೊಸೈಟಿಯ ಸದಸ್ಯರಾಗಲು ಬಯಸಿದರು. ಕಬ್ಬಿನಾಲೆ ರಾಮಚಂದ್ರ ಭಟ್ ಸಹಕರಿಸಿದರು.