ನಾರಾವಿ : ನಾರಾವಿ ವಲಯ ಹೆಗ್ಗಡೆ ಬಾಂಧವರಿಂದ “ಹೆಗ್ಗಡೆ ಸಂಗಮ–2026” ಕಾರ್ಯಕ್ರಮವು ಆಗಸ್ಟ್ 9, ಭಾನುವಾರ ರಂದು ನಾರಾವಿಯ ಶ್ರೀ ಮಹಾದೇವಿ ಮಂದಿರ, ಬಿರ್ಮೊಟ್ಟು ನಾರಾವಿಯಲ್ಲಿ ನಡೆಯಲಿದೆ.
ಕಾರ್ಯಕ್ರಮವು ಬೆಳಿಗ್ಗೆ 9 ಗಂಟೆಗೆ ಆರಂಭವಾಗಲಿದ್ದು ಬಾಬು ಹೆಗ್ಡೆ (ಡೊಂಕುಬೆಟ್ಟು, ನಾರಾವಿ) ಹಾಗೂ ರವೀಂದ್ರ ಹೆಗ್ಡೆ (ಉಚ್ಚೂ ರು) ಅವರು ದೀಪ ಪ್ರಜ್ವಲನೆ ನೆರವೇರಿಸಲಿದ್ದಾರೆ. ಬಳಿಕ ಮನೋರಂಜನಾ ಕ್ರೀಡಾ ಕಾರ್ಯಕ್ರಮ, ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.
ಮಧ್ಯಾಹ್ನ 12 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾರಾವಿ ವಲಯ ಹೆಗ್ಗಡೆ ಸಂಘದ ಅಧ್ಯಕ್ಷರಾದ ಸದಾನಂದ ಹೆಗ್ಡೆ (ಬನ್ನಡ್ಕ) ವಹಿಸಲಿದ್ದಾರೆ.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಕ್ಷೇತ್ರದ ಶಾಸಕ ಹರೀಶ್ ಪೂಂಜ, ದಕ್ಷಿಣ ಕನ್ನಡ ಜಿಲ್ಲಾ ಹೆಗ್ಗಡೆ ಸಮಾಜ ಸಂಘದ ಅಧ್ಯಕ್ಷ ವಿ. ಪ್ರಭಾಕರ ಹೆಗ್ಡೆ (ಹಟ್ಟಾಜೆಗುತ್ತು), ಶ್ರೀ ವೀರಮಾರುತಿ ದೇವಸ್ಥಾನ, ಕೋಟೆಬಾಗಿಲಿನ ಆಡಳಿತ ಮೊಕ್ತಸರರಾದ ಕೆ. ಶ್ಯಾಮ ಹೆಗ್ಡೆ ಹಾಗೂ ನಾರಾವಿ ವಲಯ ಹೆಗ್ಗಡೆ ಮಹಿಳಾ ಸಂಘದ ಅಧ್ಯಕ್ಷೆ ನವ್ಯ ಪ್ರವೀಣ್ ಹೆಗ್ಡೆ ಭಾಗವಹಿಸಲಿದ್ದಾರೆ.
ದಿವಾಕರ ಹೆಗ್ಡೆ ,ನಿವೃತ್ತ ಪ್ರೌಢ ಶಾಲಾ ಮುಖ್ಯ ಶಿಕ್ಷಕರು,ಮಯೂರ,ಮರೋಡಿ,ಸುಜಯ ಹೆಗ್ಡೆ ಖ್ಯಾತ ಯಕ್ಷಗಾನ ಭಾಗವತರು,ಪಾರೊಟ್ಟು,ಕುತ್ತೂರು.ಅರುಣ ಹೆಗ್ಡೆ ,ಪ್ರಶಸ್ತಿ ಪುರಸ್ಕೃತರು ,ಅರುಣೋದಯ,ಕುತ್ಲೂರು ಇವರಿಗೆ ಸನ್ಮಾನಿಸಿ ಗೌರವಿಸಲಾಗುವುದು.
ನಾರಾವಿ ವಲಯ ಹೆಗ್ಗಡೆ ಸಂಘದ ಅಧ್ಯಕ್ಷ ಸದಾನಂದ ಹೆಗ್ಡೆ ಹಾಗೂ ಮಹಿಳಾ ಸಂಘದ ಅಧ್ಯಕ್ಷೆ ನವ್ಯ ಪ್ರವೀಣ್ ಹೆಗ್ಡೆ ಅವರು ಸಮಾಜದ ಎಲ್ಲಾ ಬಂಧುಗಳು ಸಕುಟುಂಬ ಸಮೇತರಾಗಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದ್ದಾರೆ.
ಬೆಳಿಗ್ಗೆ 9ರಿಂದ 10 ಗಂಟೆಯವರೆಗೆ ಉಪಹಾರದ ವ್ಯವಸ್ಥೆ ಹಾಗೂ ಮಧ್ಯಾಹ್ನ 1ರಿಂದ 2 ಗಂಟೆಯವರೆಗೆ ಭೋಜನದ ವ್ಯವಸ್ಥೆ ಕಲ್ಪಿಸಲಾಗಿದೆ.

