ಭಕ್ತಿಭಾವದ ಸಂಭ್ರಮದಲ್ಲಿ ಕಂಗೊಳಿಸಿದ ಹೆಜಮಾಡಿ ಆಲಡೆ: ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿ ಧ್ವಜಸ್ತಂಭ ಮೆರವಣಿಗೆ

0
14

ಹೆಜಮಾಡಿ : ಚೆಂಡೆ, ಕುಣಿತ, ಭಜನೆ ಹಾಗೂ ಕುಂಭಕಲಶದ ವೈಭವದೊಂದಿಗೆ ಸಾಗಿದ ಭವ್ಯ ಮೆರವಣಿಗೆ ಭಕ್ತರ ಮನಸೂರೆಗೊಂಡಿತು.

ಹೆಜಮಾಡಿ ಆಲಡೆಯ ಶ್ರೀ ಬ್ರಹ್ಮಲಿಂಗೇಶ್ವರ ಹಾಗೂ ಅಬ್ಬಗ-ದಾರಗ ಕ್ಷೇತ್ರದ ಜೀರ್ಣೋದ್ಧಾರದ ಅಂಗವಾಗಿ ಧ್ವಜಸ್ತಂಭದ ಭವ್ಯ ಮೆರವಣಿಗೆಯು ಪಡುಬಿದ್ರಿ ಬೀಡಿನಿಂದ ಆರಂಭಗೊಂಡು ಶ್ರೀ ಕ್ಷೇತ್ರದವರೆಗೆ ಅತ್ಯಂತ ವಿಜೃಂಭಣೆಯಿಂದ ನಡೆಯಿತು.

ಚೆಂಡೆ ವಾದನ, ಸಾಂಪ್ರದಾಯಿಕ ಕುಣಿತ, ಭಜನಾ ಸಂಕೀರ್ತನೆ ಹಾಗೂ ಕುಂಭಕಲಶದೊಂದಿಗೆ ಸಾವಿರಾರು ಭಕ್ತರು ಶ್ರದ್ಧಾ-ಭಕ್ತಿಯಿಂದ ಮೆರವಣಿಗೆಯಲ್ಲಿ ಪಾಲ್ಗೊಂಡು ಧಾರ್ಮಿಕ ಸಂಭ್ರಮಕ್ಕೆ ಸಾಕ್ಷಿಯಾದರು. ಭಕ್ತಿಭಾವ, ಸಂಪ್ರದಾಯ ಮತ್ತು ಸಾಂಸ್ಕೃತಿಕ ವೈಭವದ ಸಂಗಮವಾಗಿ ನಡೆದ ಈ ಮೆರವಣಿಗೆಯು ಕ್ಷೇತ್ರದ ಜೀರ್ಣೋದ್ಧಾರ ಕಾರ್ಯಕ್ಕೆ ಮತ್ತಷ್ಟು ಮೆರುಗು ನೀಡಿತು.

ಶ್ರೀ ಕ್ಷೇತ್ರದ ಬ್ರಹ್ಮಕಲಶೋತ್ಸವದ ಧಾರ್ಮಿಕ ಕಾರ್ಯಕ್ರಮಗಳು ಫೆಬ್ರವರಿ 15 ರಿಂದ ಫೆಬ್ರವರಿ 22 ರವರೆಗೆ ನಡೆಯಲಿದ್ದು, ಫೆಬ್ರವರಿ 18 ರಂದು ಬ್ರಹ್ಮಕಲಶೋತ್ಸವ ಹಾಗೂ ಫೆಬ್ರವರಿ 20 ರಂದು ಅಯನೋತ್ಸವ ಜರುಗಲಿದೆ ಎಂದು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಪುಷ್ಪರಾಜ್ ಎಸ್. ಶೆಟ್ಟಿ ಅವರು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಆಲಡೆಯ ಆಡಳಿತ ಮೊಕ್ತೇಸರ ಸುರೇಶ್ ಶೆಟ್ಟಿ, ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಶಿವರಾಮ ಶೆಟ್ಟಿ, ಪ್ರಧಾನ ಅರ್ಚಕ ಶ್ರೀನಿವಾಸ್ ಭಟ್, ಶ್ರೀಕಾಂತ್ ಭಟ್, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ದಯಾನಂದ ಹೆಜಮಾಡಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಶಶಿಕಾಂತ್ ಪಡುಬಿದ್ರೆ, ಆಲಡೆಯ ಮುಕ್ತೇಸರ ಹೇಮಾನಂದ ಪುತ್ರನ್, ಪ್ರಬೋಧ್ ಚಂದ್ರ ಹೆಜಮಾಡಿ, ಪದ್ಮನಾಭ ಸುವರ್ಣ, ವಸಂತ ದೇವಾಡಿಗ, ಶರಣ್ ಕುಮಾರ್, ಮಾಧವ ಹೆಜಮಾಡಿ, ದೊಂಬ ಪೂಜಾರಿ, ಜಿನರಾಜ್ ಬಂಗೇರ, ಸತೀಶ್ ಕೋಟ್ಯಾನ್, ಅರುಣ್ ಶೆಟ್ಟಿ, ರವಿ ಕುಂದರ್, ಹೆಜಮಾಡಿ ಪಂಚಾಯತ್ ಮಾಜಿ ಅಧ್ಯಕ್ಷೆ ರೇಷ್ಮಾ ಎ. ಮೆಂಡನ್, ಪಡುಬು ಪಂಚಾಯತ್ ಮಾಜಿ ಅಧ್ಯಕ್ಷೆ ಶಶಿಕಲಾ ಯಶವಂತ್, ಹರೀಶ್ ದೇವಾಡಿಗ, ವಿನೋದ್ ದೇವಾಡಿಗ, ಸುಭಾಷ್ ಜಿ. ಸಾಲಿಯಾನ್, ಪ್ರಸನ್ನ ಹೆಜಮಾಡಿ, ನಿತಿನ್ ಕೋಡಿ, ಸಂಜೀವ ಟಿ., ಗಿರಿಧರ್ ಪೂಜಾರಿ, ಮೋಹನ್ ಸುವರ್ಣ, ಪರಮೇಶ್ವರ್, ರಾಜು ಹೆಜಮಾಡಿ, ಸುಂದರ ಆಚಾರ್ಯ, ರಾಜೇಶ್ ಆಚಾರ್ಯ, ರವೀಂದ್ರ ಹೆಜಮಾಡಿ, ಹಿತೇಶ್ ಭಂಡಾರಿ, ಸುರೇಖಾ ಶೆಟ್ಟಿ, ಸುಧೀಸ್ ಶೆಟ್ಟಿ, ವಸಂತ ಹೆಜಮಾಡಿ ಮೊದಲಾದವರು ಉಪಸ್ಥಿತರಿದ್ದರು.