ಕುಂದಾಪುರ : ಗ್ರಾಹಕರಿಗೆ ಗುಣಮಟ್ಟದ ಸೇವೆ ಹಾಗೂ ಉತ್ಪನ್ನಗಳನ್ನು ಒದಗಿಸುವ ಉದ್ದೇಶದಿಂದ ಕುಂದಾಪುರದ ಚಿಕ್ಕನ್ ಸಾಲ್ ರಸ್ತೆಯಲ್ಲಿ ನೂತನವಾಗಿ ಆರಂಭಗೊಳ್ಳುತ್ತಿರುವ ‘ಕುಂದಾಪುರ ಸ್ಯಾನಿಟರಿ’ ಮಳಿಗೆಯ ಶುಭಾರಂಭ ಸಮಾರಂಭ ನವೆಂಬರ್ 15ರಂದು ಬೆಳಿಗ್ಗೆ 9.30ಕ್ಕೆ ನಡೆಯಲಿದೆ.
ಈ ಶುಭಾರಂಭ ಸಮಾರಂಭವು ಹಲವು ಗಣ್ಯರ ಉಪಸ್ಥಿತಿಯಲ್ಲಿ ನಡೆಯಲಿದ್ದು, ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಶ್ರೀನಿವಾಸ ಪೂಜಾರಿ, ಕುಂದಾಪುರ ವಿಧಾನ ಸಭಾ ಕ್ಷೇತ್ರದ ಶಾಸಕ ಕಿರಣ್ ಕೊಡ್ಗಿ , ಬೈಂದೂರು ವಿಧಾನ ಸಭಾ ಕ್ಷೇತ್ರದ ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ, ಬೈಂದೂರು ಮಾಜಿ ಶಾಸಕರಾದ ಬಿ.ಎಂ. ಸುಕುಮಾರ್ ಶೆಟ್ಟಿ ಹಾಗೂ ಕೆ. ಗೋಪಾಲ ಪೂಜಾರಿ ಭಾಗವಹಿಸಲಿದ್ದಾರೆ.
ಅಲ್ಲದೆ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಅಧ್ಯಕ್ಷ ಬಾಬು ಶೆಟ್ಟಿ, ಜನಸೇವಾ ಟ್ರಸ್ಟ್ ಗಿಳಿಯಾರಿನ ಪ್ರವರ್ತಕ ವಸಂತ್ ಗಿಳಿಯಾರು ಹಾಗೂ ಕಟ್ಟಡದ ಮಾಲಕ ಎಸ್.ಎಂ. ನದೀಮ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿರಲಿದ್ದಾರೆ.
ಕುಂದಾಪುರ ಸ್ಯಾನಿಟರಿ ಮತ್ತು ಕೆ. ಲೈಟ್ಸ್ನ ಮಾಲಕರಾದ ಕೃಷ್ಣ ಪೂಜಾರಿ ಕಾನ್ಕಿ ಹಾಗೂ ಕುಂದಾಪುರ ಸ್ಯಾನಿಟರಿ ಮತ್ತು ಆಧಿಶಕ್ತಿ ಎಂಟರ್ಪ್ರೈಸಸ್ ಯರೂಕೋಣೆಯ ಮಾಲಕರಾದ ಪುನೀತ್ ಶೆಟ್ಟಿ ಕಾನ್ಕಿ ಅವರು ಗ್ರಾಹಕರು, ಹಿತೈಷಿಗಳು ಹಾಗೂ ಸಾರ್ವಜನಿಕರನ್ನು ಆತ್ಮೀಯವಾಗಿ ಆಹ್ವಾನಿಸಿದ್ದಾರೆ.

