ಮೂಡುಬಿದಿರೆ: ಜನಸೇವೆಯೇ ಜನಾರ್ಧನ ಸೇವೆ ಎಂಬಂತೆ ಇಂದು ಆರದಿರಲಿ ಬದುಕು ಆರಾಧನ ತಂಡದ ಜೂನ್ ತಿಂಗಳ 99 ನೇ ಯೋಜನೆಯ ಸಹಾಯ ಹಸ್ತ ವನ್ನು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಎಕ್ಕಾರು ನಿವಾಸಿಯಾದ ವಿನೋದ್ ಅವರು ಆ್ಯಕ್ಸಿಡೆಂಟ್ ಆಗಿ ತಲೆಗೆ ತೀವ್ರ ಪೆಟ್ಟು ಬಿದ್ದು ಚಿಕಿತ್ಸೆ ಪಡೆದು ಈಗ ತಾನೆ ಚೇತರಿಸಿಕೊಂಡಿದ್ದು ಅವರು ಕಡು ಬಡವರಾಗಿದ್ದು ಅವರ ಕಷ್ಟ ಅರಿತ ನಮ್ಮ ತಂಡ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಕಟೀಲಿನ ಸನ್ನಿ ಧಾನದಲ್ಲಿ 25 ಸಾವಿರ ರೂಪಾಯಿ ಸಹಾಯ ಹಸ್ತ ನೀಡಲಾಯಿತು.
ಈ ಸಂದರ್ಭದಲ್ಲಿ ತಂಡದ ನಿರ್ದೇಶಕಿ ಪದ್ಮಶ್ರೀ ಭಟ್ ನಿಡ್ಡೋಡಿ, ಸದಸ್ಯರಾದ ದೀನ್ ರಾಜ್ ಬಸವರಾಜ ಮಂತ್ರಿ ಅರುಣ್ ಅಜೆಕಾರು ಮಲ್ಲಿಕಾ ಸುಕೇಶ್ ಆಶಾ ಸುರೇಂದ್ರ ಸುನೀತ ಮೂಡುಬಿದಿರೆ ಭಾಸ್ಕರ ದೇವಾಡಿಗ, ಅಭಿಷೇಕ್ ಶೆಟ್ಟಿ ಐಕಳ, ಗಣೇಶ್ ಪೈ . ಡಾ.ನಾಗರಾಜ ಶೆಟ್ಟಿ ಅಂಬೂರಿ, ಧನಂಜಯ ಶೆಟ್ಟಿ. ನಿಲೇಶ್ ಕಟೀಲು, ಪ್ರವೀಣ್ ಬಂಗೇರ, ಶ್ರೀಕಾಂತ ಭಟ್ ಪೊನ್ನ ಗಿರಿ, ಪ್ರಭಾಕರ ಮಂಗಳೂರು, ದಯಾನಂದ ಮಡ್ಕೇಕರ್, ಬೀಮಯ್ಯ ಸುಳ್ಯ. ಅಗರಿ ರಾಘವೇಂದ್ರ ಸರ್, ಭಾಸ್ಕರ ದೇವಸ್ಯ. ದಿನೇಶ್ ಸಿದ್ದಕಟ್ಟೆ. ನಾಗರಾಜ ಸಾಲ್ಯನ್ ಉಪಸ್ಥಿತರಿದ್ದರು.