ಬೆಳ್ಮಣ್: ರಾಜ್ಯ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕೃತ ಸಂಸ್ಥೆ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ ನೇತೃತ್ವದಲ್ಲಿ ವಿಶ್ವ ವೈದ್ಯರ ದಿನಾಚರಣೆ ಅಂಗವಾಗಿ ನಂದಳಿಕೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ. ಶ್ವೇತಾ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ನಂದಳಿಕೆ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳಾದ ಫಾರ್ಮಸಿ ಅಧಿಕಾರಿಯಾಗಿರುವ ನಿಟ್ಟೆ ಸುಧಾಕರ ರಾವ್ ಮೂಡಿತ್ತಾಯ, ಅಣ್ಣು ಕುಮಾರ್, ಶುಶ್ರುಷಾಕಾಧಿಕಾರಿ ಪ್ರಮೀಳಾ, ಸಮುದಾಯ ಆರೋಗ್ಯಧಿಕಾರಿ ಶರ್ಮಿಳಾ, ಆಸ್ಪತ್ರೆ ಸಹಾಯಕರಾದ ರಂಜನ ಸುವರ್ಣ, ಜಯಲಕ್ಷ್ಮೀ, , ಆಶಾ ಕಾರ್ಯಕರ್ತೆಯರಾದ ವಿಶಾಲಾಕ್ಷಿ, ಸೌಮ್ಯ, ಶಾಂತಿ ಅವರನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್‌ನ ಅಧ್ಯಕ್ಷರಾದ ದಿನೇಶ್ ಪೂಜಾರಿ ಬೀರೊಟ್ಟು, ಸಂಚಾಲಕರಾದ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ, ಪೂರ್ವಾಧ್ಯಕ್ಷ ಸುರೇಶ್ ಕಾಸ್ರಬೈಲು, ಉಪಾಧ್ಯಕ್ಷ ಸತೀಶ್ ಅಬ್ಬನಡ್ಕ, ಕಾರ್ಯದರ್ಶಿ ಸಂಧ್ಯಾ ಶೆಟ್ಟಿ, ಜೊತೆ ಕಾರ್ಯದರ್ಶಿ ಅನ್ನಪೂರ್ಣ ಕಾಮತ್, ಸದಸ್ಯರಾದ ಸುರೇಶ್ ಅಬ್ಬನಡ್ಕ, ಹರಿಣಿ ಪೂಜಾರಿ, ಪುಷ್ಪ ಕುಲಾಲ್, ವೀಣಾ ಆಚಾರ್ಯ, ಯೋಗೀಶ್ ಆಚಾರ್ಯ, ಪ್ರದೀಪ್ ಸುವರ್ಣ, ಶಾಂತರಾಮ್ ಕುಲಾಲ್, ಕೀರ್ತನ್ ಮೊದಲಾದವರಿದ್ದರು.