ಹಿಮಾಲಯನ್ ಯೋಗಿ ಅಘೋರಿ ಚಿದಂಬರ್ ಯೋಗಿ ಅವರಿಗೆ “ಕರ್ನಾಟಕ ಅಚೀವರ್ಸ್ ಅವಾರ್ಡ್” ಪ್ರಶಸ್ತಿ ಪ್ರದಾನ

0
140

ದಾವಣಗೆರೆ : ಆಧ್ಯಾತ್ಮಿಕತೆ ಮತ್ತು ಚೈತನ್ಯ ಚಿಕಿತ್ಸಾ ಕ್ಷೇತ್ರದಲ್ಲಿ ಮಹತ್ತರ ಕೊಡುಗೆ ನೀಡಿದ ಹಿನ್ನೆಲೆಯಲ್ಲಿ, ಹಿಮಾಲಯನ್ ಯೋಗಿ ಅಘೋರಿ ಚಿದಂಬರ್ ಅವರಿಗೆ ಪ್ರತಿಷ್ಠಿತ “ಕರ್ನಾಟಕ ಅಚೀವರ್ಸ್ ಅವಾರ್ಡ್” ಅನ್ನು `ಚಿತ್ರ ಸಂತೆ’ಯು ಆಯೋಜಿಸಿದ ಭವ್ಯ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು.
‘ಮಹಾವತಾರ್ ಬಾಬಾಜಿ’ ಅವರ ಮಾರ್ಗ ದರ್ಶನದಲ್ಲಿ ಸ್ಥಾಪಿತವಾದ ಚಂಡಿಕಾಶ್ರಮದ ಮೂಲಕ, ಯೋಗಿ ಚಿದಂಬರ್ ಅವರು ನಿರಂತರ ಯೋಗ ಸಾಧನೆ, ಧ್ಯಾನ ಶಿಬಿರಗಳು, ಉಚಿತ ಚಿಕಿತ್ಸಾ ಶಿಬಿರಗಳು, ಮತ್ತು *ಕಾಸ್ಮಿಕ ಹೀಲಿಂಗ್ ಥೆರಪಿಯ ಮೂಲಕ ನೂರಾರು ಜನರಿಗೆ ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಆರೋಗ್ಯವನ್ನು ಒದಗಿಸಿದ್ದಾರೆ.
12ಎ ಮತ್ತು 80ಜಿ ಮಾನ್ಯತೆ ಪಡೆದ ಓಂ ಚಂಡಿಕಾ ಸೇವಾ ಟ್ರಸ್ಟ್ ಮೂಲಕ ಗ್ರಾಮೀಣ ಮತ್ತು ನಗರ ಪ್ರದೇಶಗಳ ಜನತೆಗೆ ದೀರ್ಘಕಾಲೀನ ಕಾಯಿಲೆಗಳು, ಡಯಾಬಿಟಿಸ್, ಮಾನಸಿಕ ಒತ್ತಡ ಇತ್ಯಾದಿಗಳ ನಿವಾರಣೆಗೆ ಸೇವೆ ಸಲ್ಲಿಸುತ್ತಿದ್ದಾರೆ. ಸಿನಿಮಾ ನಟಿ ಹರ್ಷಿಕ ಪೊನ್ನಚ್ಚ ಪ್ರಶಸ್ತಿ ಪ್ರಧಾನ ಮಾಡಿದರು.

LEAVE A REPLY

Please enter your comment!
Please enter your name here