ಮಂಗಳೂರು : ನಗರದ ಕಣಚೂರು ವೈದ್ಯಕೀಯ ಶಿಕ್ಷಣ ಮಹಾವಿದ್ಯಾಲಯದ ವೈದ್ಯಕೀಯ ಶಾಸ್ತç ವಿಭಾಗದ ಆಶ್ರಯದಲ್ಲಿ ಸ್ನಾತಕೋತ್ತರ ವೈದ್ಯಕೀಯ ಶಾಸ್ತç ಶಿಕ್ಷಣ ವಿಧ್ಯಾರ್ಥಿಗಳಿಗಾಗಿ 4ನೇ ವಾರ್ಷಿಕ ರಾಜ್ಯ ಮಟ್ಟದ ಅಂತರ ವೈದ್ಯಕೀಯ ಕಾಲೇಜು ರಸ ಪ್ರಶ್ನೆ “ಕಿಮ್ಸ್ ಪಿ.ಜಿ. ಮೆಡಿಕ್ವಿಜ್ – 2025” ಸ್ಪರ್ದಾಕೂಟವನ್ನು ಶನಿವಾರ ತಾ. 17.05.2025 ರಂದು ಬೆ. 10.00 ಗಂಟೆಗೆ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಕರ್ನಾಟಕ ರಾಜ್ಯದಲ್ಲಿ ಕಾರ್ಯಾಚರಿಸುತ್ತಿರುವ ವೈದ್ಯಕೀಯ ಶಿಕ್ಷಣ ಮಹಾ ವಿದ್ಯಾಲಯದ ಪ್ರಾಂಶುಪಾಲರು ತಮ್ಮ ಕಾಲೇಜಿನ ವೈದ್ಯಕೀಯ ಶಾಸ್ತç ವಿಭಾಗದ ಸ್ನಾತಕೋತ್ತರ ವೈದ್ಯಕೀಯ ವಿಧ್ಯಾರ್ಥಿಗಳನ್ನು ಒಳಗೊಂಡ ತಂಡದ ಹೆಸರುಗಳನ್ನು ಸ್ಪರ್ಧಾಕೂಟದಲ್ಲಿ ಭಾಗವಹಿಸಲು ನೋಂದಾಯಿಸಬಹುದು. ಈ ಸ್ಪರ್ಧಾಕೂಟವು ಕೇವಲ ಆಂತರಿಕ ವೈದ್ಯಕೀಯ ಶಾಸ್ತç ವಿಷಯದ ಬಗ್ಗೆ ಸೀಮಿತಗೊಂಡಿದೆ.
ಕಣಚೂರು ವೈದ್ಯಕೀಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಹಾಜಿ ಯು.ಕೆ. ಮೋನು ರವರು ಮಖ್ಯ ಅತಿಥಿಯಾಗಿ ಪಾಲ್ಗೊಂಡು ಸ್ಪರ್ಧಾ ವಿಜೇತರಿಗೆ ಆಕರ್ಷಕ ಪ್ರಶಸ್ತಿ, ಬಹುಮಾನ ಹಾಗೂ ಪ್ರಶÀಸ್ತಿ ಪ್ರಮಾಣ ಪತ್ರವನ್ನು ಪ್ರಧಾನ ಮಾಡಲಿರುವರು. ಕಾರ್ಯನಿರ್ವಾಹಕ ನಿರ್ದೇಶಕ ಡಾ. ಅಬ್ದುಲ್ ರೆಹಮಾನ್, ಪ್ರಾಂಶುಪಾಲರಾದ ಪ್ರೋ. ಡಾ. ಶಹನವಾಜ್ ಮಣಿಪಾಡಿ, ವೈದ್ಯಕೀಯ ಅಧೀಕ್ಷಕರಾದ ಪ್ರೊ. ಡಾ. ಹರೀಶ್ ಶೆಟ್ಟಿ, ಮುಖ್ಯ ಆಡಳಿತ ಅಧಿಕಾರಿಯಾದ ಡಾ. ರೋಹನ್ ಮೋನಿಸ್ ಮತ್ತು ಕಣಚೂರು ಆರೋಗ್ಯ ವಿಜ್ಞಾನ ಸಂಸ್ಥೆ ಸಮಿತಿಯ ಅಧ್ಯಕ್ಷರಾದ ಪ್ರೊ. ಡಾ. ಮೊಹಮ್ಮದ್ ಇಸ್ಮಾಯಿಲ್ ಹಾಗೂ ಸದಸ್ಯರಾದ ಪ್ರೊ. ಡಾ. ಎಂ. ವಿ. ಪ್ರಭು ಗೌರವ ಅತಿಥಿಗಳಾಗಿ ಪಾಲ್ಗೊಳ್ಳಲಿರುವರು.
ಹೆಚ್ಚಿನ ಮಾಹಿತಿ/ವಿವರಗಳಿಗಾಗಿ ಸ್ಪರ್ಧಾಕೂಟದ ಸಂಘಟಕರಾದ ಹಾಗೂ ವೈದ್ಯಕೀಯ ಶಾಸ್ತç ವಿಭಾಗದ ಮುಖ್ಯಸ್ಥರಾದ ಪ್ರೊ. ಡಾ. ದೇವದಾಸ್ ರೈ, 98450 81145, ಇವರನ್ನು ಸಂಪರ್ಕಿಸಬಹುದು.