ಮೂಡುಬಿದಿರೆ: ಹಿಂದೂ ಜಾಗರಣ ವೇದಿಕೆ ಮೂಡುಬಿದಿರೆ ತಾಲೂಕು ಪ್ರಖಂಡ ನೇತೃತ್ವದಲ್ಲಿ ಹಕ್ಕೋತ್ತಾಯ ಅಗ್ರಹಿಸಿ ಅಹೋರಾತ್ರಿ ಧರಣಿಯು ನಾಳೆ ಎ. 25 ರಂದು ಸಂಜೆ 6.30 ಗಂಟೆಯಿಂದ ಮೂಡುಬಿದಿರೆ ಪೋಲಿಸ್ ಠಾಣೆಯ ಎದುರು ನಡೆಯಲಿದೆ.
ಮೂಡಬಿದಿರೆಯ ಬೆಳುವಾಯಿಯ ಹಿಂದೂ ಮುಖಂಡರೊಬ್ಬರ ಮನೆಯಿಂದ ದನ ಕದ್ದ ಅರೋಪಿಗಳಲ್ಲಿ ಒರ್ವನನ್ನು ಮಾತ್ರ ಬಂಧಿಸಿದ್ದು ಬಾಕಿ ಇರುವ ಆರೋಪಿಗಳನ್ನ ಬಂಧಿಸಬೇಕು, ಆನೆಗುಡ್ಡೆ ಪರಿಸರದ ಅಮಾಯಕನೊರ್ವನ ಕಾಲು ಕಡಿದು ಕೊಲೆಯತ್ನ ಮಾಡಿದ ಆರೋಪಿಗಳ ಪತ್ತೆ ಹಚ್ಚುವಲ್ಲಿ ಪೊಲೀಸ್ ವೈಫಲ್ಯ, ಮೂಡುಬಿದಿರೆ ಪರಿಸರದ ಬಡ ರಿಕ್ಷಾ ಚಾಲಕರನ್ನು ಹಾಗೂ ವಾಹನ ಸವಾರರನ್ನು ಪರಿಶೀಲನೆ ನೆಪದಲ್ಲಿ ಅಲ್ಲಲ್ಲಿ ನಿಲ್ಲಿಸಿ ಅವರಿಂದ ಹಣ ವಸೂಲಿ ಮಾಡುತ್ತಿರುವ ಇಲಾಖೆಯ ಕಾರ್ಯವೈಖರಿ ಪ್ರಶ್ನಿಸಿ ಅಹೋರಾತ್ರಿ ಪ್ರತಿಭಟನೆ ನಡೆಸುವುದಾಗಿ ಎಂದು ಹಿಂದೂ ಜಾಗರಣ ವೇದಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.