ಬಿ.ಸಿ. ರೋಡ್ ಚಲೋ ಪ್ರತಿಭಟನೆಗೆ ‘ಹಿಂಜಾವೇ’ ಬೆಂಬಲ ಘೋಷಣೆ

0
21

ಮಂಗಳೂರು/ಬಂಟ್ವಾಳ : ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಬಂಟ್ವಾಳ ಪ್ರಖಂಡದ ವತಿಯಿಂದ ಇದೇ ತಿಂಗಳ 28 ರಂದು ಹಮ್ಮಿಕೊಳ್ಳಲಾಗಿರುವ ‘ಬಿ.ಸಿ. ರೋಡ್ ಚಲೋ’ ಪ್ರತಿಭಟನಾ ಆಂದೋಲನಕ್ಕೆ ಹಿಂದು ಜಾಗರಣ ವೇದಿಕೆ ದಕ್ಷಿಣ ಕನ್ನಡ ಜಿಲ್ಲಾ ಘಟಕವು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಸಂಘಟನೆಯ ಪ್ರಮುಖರು, ಬಂಟ್ವಾಳದಲ್ಲಿ ನಡೆಯಲಿರುವ ಪ್ರತಿಭಟನಾ ಆಂದೋಲನಕ್ಕೆ ಹಿಂದು ಜಾಗರಣ ವೇದಿಕೆಯು ಪೂರ್ಣ ಬೆಂಬಲ ನೀಡಲಿದ್ದು, ಸಂಘಟನೆಯ ಕಾರ್ಯಕರ್ತರು ಹಾಗೂ ಹಿಂದು ಸಮಾಜವು ಇದರಲ್ಲಿ ಸಕ್ರಿಯವಾಗಿ ಭಾಗವಹಿಸಲಿದೆ ಎಂದು ತಿಳಿಸಿದ್ದಾರೆ.

“ದಕ್ಷಿಣ ಕನ್ನಡ ಜಿಲ್ಲೆಯು ಎಂದೆಂದಿಗೂ ಹಿಂದುತ್ವದ ಭದ್ರಕೋಟೆಯಾಗಿದೆ. ಈ ಒಗ್ಗಟ್ಟನ್ನು ಒಡೆಯಲು ಯತ್ನಿಸುವ ಯಾವುದೇ ಶಕ್ತಿಗಳ ವಿರುದ್ಧ ಹಿಂದೂ ಸಮಾಜವು ಒಗ್ಗಟಾಗಿ ಹೋರಾಡಲಿದೆ,” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಇದೇ 28 ರಂದು ಬಿ.ಸಿ. ರೋಡ್‌ನಲ್ಲಿ ನಡೆಯಲಿರುವ ಈ ಬೃಹತ್ ಪ್ರತಿಭಟನೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸಮಸ್ತ ಹಿಂದೂ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಆಂದೋಲನವನ್ನು ಯಶಸ್ವಿಗೊಳಿಸಬೇಕೆಂದು ಹಿಂದು ಜಾಗರಣ ವೇದಿಕೆ ಕರೆ ನೀಡಿದೆ.