ಬಿಜೆಪಿ ಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಯುತ ಬಿ.ಎಲ್.ಸಂತೋಷ್ ರವರಿಂದ ಶ್ರೀ ಕೃಷ್ಣ ದರ್ಶನ ಪಡೆದರು.ತದನತರ ಗೋ ಶಾಲೆಗೆ ತೆರಳಿ ಗೋ ಸೇವೆ ಮಾಡಿ ಗೀತಮಂದಿರದಲ್ಲಿ ಪರ್ಯಾಯ ಉಭಯ ಶ್ರೀಪಾದರಿಂದ ಅನುಗ್ರಹ ಪ್ರಸಾದ ಸ್ವೀಕಾರ ಮಾಡಿದರು.
ಪೂಜ್ಯ ಪರ್ಯಾಯ ಪುತ್ತಿಗೆ ಶ್ರೀಪಾದರು ಸಂತೋಷರವರ ದೇಶ ಸೇವೆಯ ಕಾರ್ಯವನ್ನು ಮೆಚ್ಚಿ ಶ್ರೀಕೃಷ್ಣಾನುಗ್ರವನ್ನು ಪ್ರದಾನ ಮಾಡಿದರು
ಕೋಟಿ ಗೀತಾ ಲೇಖನ ಯಜ್ಞ ಅಭಿಯಾನದ ವಿವರವನ್ನು ಪಡೆದುಕೊಂಡ ಸಂತೋಷರವರು ಶ್ರೀಗಳಿಗೆ ವಿಶೇಷ ಅಭಿನಂದನೆಯನ್ನು ಸಲ್ಲಿಸಿದರು.
ಬಳಿಕ ಗೀತಾ ಮಂದಿರದಲ್ಲಿ ಭಾರತ್ ಮೇಳ ದ ಅಂಗವಾಗಿ ನಡೆಯುವ ವಿಶೇಷ ವಿಶ್ವರೂಪ ದ ಪ್ಲಾನಿಟೋರಿಯಂ ಪ್ರದರ್ಶನ ದ ಉದ್ಘಾಟನೆ ಸನ್ಮಾನ್ಯ ಬಿ ಎಲ್ ಸಂತೋಷ್ ರವರಿಂದ ನಡೆಯಿತು. ಶ್ರೀಕೃಷ್ಣ ಮಹಿಮೆಯ ಸಂಕ್ಷಿಪ್ತ ಚಿತ್ರವನ್ನು ನೋಡಿ ಸಂತಸ ವ್ಯಕ್ತಪಡಿಸಿದರು.