ಮಂಗಳೂರು ಸಹಾಯಕ ಪೊಲೀಸ್ ಆಯುಕ್ತ ನಜ್ಮಾ ಫಾರೂಕಿ ಅವರಿಗೆ ಗೌರವ ಸನ್ಮಾನ

0
5

ಪೊಲೀಸ್ ಇಲಾಖೆಯಲ್ಲಿ ದಕ್ಷ ಮತ್ತು ನಿಷ್ಠಾವಂತ ಸೇವೆಗಾಗಿ ನೀಡುವ ಕರ್ನಾಟಕ ಸರ್ಕಾರದ 2026-27 ನೇ ಸಾಲಿನ ಮುಖ್ಯಮಂತ್ರಿ ಪದಕ ಗೌರವಕ್ಕೆ ಭಾಜನರಾದ ಮಂಗಳೂರು ನಗರ ಸಂಚಾರಿ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ನಜ್ಮಾ ಫಾರೂಕಿ ಅವರಿಗೆ ಮೂಲ್ಕಿ ನಾಗರಿಕ ಹಿತರಕ್ಷಣಾ ಸಮಿತಿ ವತಿಯಿಂದ ಗೌರವ ಸನ್ಮಾನ ಕಾರ್ಯಕ್ರಮವು ಮಂಗಳವಾರ ಸಂಜೆ ಮೂಲ್ಕಿಯ ಪುನರೂರು ಸಭಾಭವನದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷ ವಹಿಸಿದ ಧರ್ಮದರ್ಶಿ ಹರಿಕೃಷ್ಣ ಪುನರೂರು ಮಾತನಾಡಿ, ಪೊಲೀಸ್ ಇಲಾಖೆಯಲ್ಲಿ ದಕ್ಷ ಮತ್ತು ನಿಷ್ಠಾವಂತ ಅಧಿಕಾರಿಗಳ ಸೇವೆಯನ್ನು ಪರಿಗಣಿಸಿ, ಸಾರ್ವಜನಿಕವಾಗಿ ಅವರಿಗೆ ನೀಡುವ ಅಭಿನಂದನೆಗಳು ಅದು ನಮ್ಮೆಲ್ಲರ ಕರ್ತವ್ಯ” ಎಂದು ನಜ್ಮಾ ಫಾರೂಕಿ ಅವರ ಪ್ರಾಮಾಣಿಕ ಸೇವೆಯ ಬಗ್ಗೆ ಗೌರವ ವ್ಯಕ್ತಪಡಿಸಿದರು.

ಪ್ರಾಸ್ತಾವಿಕ ಭಾಷಣ ಮಾಡಿದ ಮನ್ಸೂರ್ ಮುಲ್ಕಿ ಅವರು ರಾಷ್ಟ್ರೀಯ ಹೆದ್ದಾರಿ 66’ರ ಮುಲ್ಕಿ, ಹಳೆಯಂಗಡಿ ಹಾಗೂ ಪಾವಂಜೆ ಪರಿಸರದಲ್ಲಿನ ಟ್ರಾಫಿಕ್ ಸಮಸ್ಯೆಗಳ ಬಗ್ಗೆ ಸಂಚಾರಿ ಇಲಾಖೆಯ ಗಮನಕ್ಕೆ ತಂದರು.

ವೇದಿಕೆಯಲ್ಲಿ, ರಾಮಚಂದ್ರ ನಾಯಕ್ ಕೊಲ್ನಾಡು ಗುತ್ತು, ಹಳೆಯಂಗಡಿ ಪಿ.ಸಿ.ಎ ಬ್ಯಾಂಕಿನ ಅಧ್ಯಕ್ಷ ಸತೀಶ್ ಭಟ್ ಕೊಳುವೈಲು, ಸುನಿಲ್ ಆಳ್ವ, ಹರೀಶ್ ಪುತ್ರನ್, ರಾಮದಾಸ್ ನಾಯಕ್, ಶ್ರೀಮತಿ ಶ್ವೇತ ಪಳ್ಳಿ ಮೂಲ್ಕಿ, ಸತೀಶ್ ಅಂಚನ್, ಮಂಗಳೂರು ಉತ್ತರ ಸಂಚಾರಿ ಪೊಲೀಸ್ ಠಾಣೆಯ ಅಧಿಕಾರಿ ಶಿವಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ಮುಲ್ಕಿ ನಾಗರಿಕ ಹಿತ ರಕ್ಷಣಾ ಸಮಿತಿಯ ಸಂಚಾಲಕರಾದ ವಿನೋದ್ ಬೆಳ್ಳಾಯರು ಅತಿಥಿಗಳನ್ನು ಸ್ವಾಗತಿಸಿ, ಮನ್ಸೂರ್ ಮುಲ್ಕಿ ಅವರು ವಂದಿಸಿದರು.

ಕಾರ್ಯಕ್ರಮದಲ್ಲಿ ನ್ಯಾಯವಾದಿ ರವೀಶ್ ಕಾಮತ್, ರಮೇಶ್ ಅಂಗಡಿಗ, ಸಾಧು ಅಂಚನ್, ಮುಲ್ಕಿ ನಗರಸಭೆ ಸದಸ್ಯ ಪುತ್ತುಬಾವ, ಶೈಲೇಶ್ ಮೂಲ್ಕಿ, ಅಶೋಕ್ ಜನನಿ, ಸದಾಶಿವ ಹೊಸದುರ್ಗ, ಸಾಮಾಜಿಕ ಕಾರ್ಯಕರ್ತರಾದ ಅದ್ದಿ ಬೊಳ್ಳೂರು, ನಂದಾ ಪಾಯಸ್, ರೇಷ್ಮಾ ಹಳೆಯಂಗಡಿ ಮತ್ತಿತರರು ಉಪಸ್ಥಿತರಿದ್ದರು.

ವರದಿ : ಅದ್ದಿ ಬೊಳ್ಳೂರು

LEAVE A REPLY

Please enter your comment!
Please enter your name here