ಮುಂಬಯಿ: ಅಜೆಕಾರು ಕಲಾಭಿಮಾನಿ ಬಳಗದ ರಜತಪರ್ವದ ಅಂಗವಾಗಿ ಮುಂಬಯಿಯ ಬಂಟರ ಭವನದಲ್ಲಿ ನಡೆದ ‘ಮುಂಬಯಿ ಯಕ್ಷಗಾನ ಸಮ್ಮೇಳನ–2026’ರಲ್ಲಿ ‘ಯಕ್ಷಗಾನ ಮುಂಬೆಳಗು’ ಎಂಬ ವಿಶೇಷ ಕೃತಿ ಸಂಪುಟ ಬಿಡುಗಡೆಗೊಂಡಿದೆ.
ಯಕ್ಷಗಾನ ಕಲೆಯ ಶ್ರೀಮಂತಿಕೆ, ಪರಂಪರೆ ಹಾಗೂ ಸಾಹಿತ್ಯಿಕ ವೈಶಿಷ್ಟ್ಯಗಳನ್ನು ದಾಖಲಿಸುವ ಉದ್ದೇಶದೊಂದಿಗೆ ಪ್ರಕಟಿಸಲಾದ ಈ ಕೃತಿ ಸಂಪುಟದ ಪ್ರಧಾನ ಸಂಪಾದಕರಾಗಿ ಭಾಸ್ಕರ ರೈ ಕುಕ್ಕುವಳ್ಳಿ ಕಾರ್ಯನಿರ್ವಹಿಸಿದ್ದಾರೆ. ಅಜೆಕಾರು ಕಲಾಭಿಮಾನಿ ಬಳಗ, ಮುಂಬಯಿ ಇದರ ಪ್ರಕಟಣೆಯ ಹೊಣೆ ಹೊತ್ತಿದ್ದು, ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರು ಪ್ರಕಾಶಕರಾಗಿದ್ದಾರೆ.

ಒಟ್ಟು 704 ಪುಟಗಳನ್ನು ಹೊಂದಿರುವ ಈ ಕೃತಿ ಸಂಪುಟದ ಬೆಲೆ ₹750 ಆಗಿದೆ. ಯಕ್ಷಗಾನದ ಅಭಿಮಾನಿಗಳು, ಕಲಾವಿದರು, ಸಂಶೋಧಕರು ಹಾಗೂ ಸಾಹಿತ್ಯಾಸಕ್ತರಿಗೆ ಈ ಕೃತಿ ಉಪಯುಕ್ತ ಆಕರವಾಗಲಿದೆ.

ಅಜೆಕಾರು ಕಲಾಭಿಮಾನಿ ಬಳಗದ ರಜತಪರ್ವದ ಸಂದರ್ಭದಲ್ಲಿ ಪ್ರಕಟಗೊಂಡಿರುವ ಈ ಸಂಪುಟವು ಯಕ್ಷಗಾನ ಕ್ಷೇತ್ರದ ದಾಖಲೀಕರಣ ಮತ್ತು ಕಲಾಪರಂಪರೆಯ ಉಳಿವಿಗೆ ಮಹತ್ವದ ಕೊಡುಗೆಯಾಗಿದೆ.
ಕೃತಿ ಸಂಪುಟದ ಪ್ರತಿಗಳಿಗಾಗಿ ಸಂಪರ್ಕಿಸಿ:
ಅಜೆಕಾರು ಬಾಲಕೃಷ್ಣ ಶೆಟ್ಟಿ
📞 9821880089, 9869176737

