
ಮಡಿಕೇರಿ : ನಗರದ ಚಾಮುಂಡೇಶ್ವರಿ ನಗರದ 22 ವರ್ಷದ ಯುವಕ ಯೋಗೇಶ್ ಅವರ ಅಂಗಾಂಗ ದಾನ ಪ್ರಕ್ರಿಯೆ ಆರಂಭವಾಗಿದೆ. ಮಡಿಕೇರಿಯ ವೈದ್ಯಕೀಯ ವಿಜ್ಞಾನ ಬೋಧಕ ಆಸ್ಪತ್ರೆಯ ಶಸ್ತ್ರಚಿಕಿತ್ಸಾ ಘಟಕದಲ್ಲಿ ಅಂಗಾಂಗ ದಾನ ಪ್ರಕ್ರಿಯೆ ನಡೆಯುತ್ತಿದೆ. ಮೈಸೂರಿನ ಮಣಿಪಾಲ್ ಆಸ್ಪತ್ರೆಯ ವೈದ್ಯಕೀಯ ತಂಡದ ಜೊತೆಗೆ ಮಡಿಕೇರಿ ಆಸ್ಪತ್ರೆಯ ಡೀನ್ ಡಾ. ಲೋಕೇಶ್, ಡಿಎಸ್ಎಂ ಡಾ. ನಂಜುಂಡ, ಡಾ. ಸೋಮಶೇಖರ್, ಡಾ. ನಿಶಿದ್ ಜೋಸೆಫ್ ಹಾಗೂ ಡಾ. ವಿನೋದ ಕುಮಾರಿ ಸೇರಿದಂತೆ ವೈದ್ಯಕೀಯ ಸಿಬ್ಬಂದಿ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದಾರೆ.
ಒಂದೆಡೆ ಮಗನ ಅಂಗಾಂಗ ದಾನದ ಮೂಲಕ ಹಲವರ ಬದುಕಿಗೆ ಬೆಳಕಾಗುತ್ತಿರುವ ಸಾರ್ಥಕತೆ, ಮತ್ತೊಂದೆಡೆ ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಕುಟುಂಬದ ಈ ಮಾನವೀಯ ನಿರ್ಧಾರಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ವರದಿ: ಪ್ರಿತುನ್ ಪೂವಣ್ಣ
