ದಿನಾಂಕ 24- 07- 2026 ರ ಶುಕ್ರವಾರ ಕರ್ನಾಟಕ ಪಬ್ಲಿಕ್ ಸ್ಕೂಲ್ ಬಿದ್ಕಲ್ ಕಟ್ಟೆ ( ಪ್ರೌಢ ಸ್ಕೂಲ್ ) ಇಲ್ಲಿ ರಾಜ್ಯ ಕಾನೂನು ಸೇವೆ ಗಳ ಪ್ರಾಧಿಕಾರ ಉಡುಪಿ ಇದರ ಮತ್ತು ಶಿವ ಶಾಂತಿ ಲಯನ್ಸ್ ಕ್ಲಬ್ ಮೊಳಹಳ್ಳಿ ಇದರ ಜಂಟಿ ಆಶ್ರಯ ದಲ್ಲಿ “ಮಾನವ ಕಳ್ಳ ಸಾಗಣೆ ಜಾಗ್ರತಿ ಶಿಬಿರ “ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮದ ಅಧ್ಯಕ್ಷ ರಾದ ಕಾಲೇಜಿನ ಉಪ ಪ್ರಿನ್ಸಿಪಾಲರಾದ ಹಾಗೂ ಶಿವಶಾಂತಿ ಲಯನ್ಸ್ ಕ್ಲಬ್ ಮೊಳಹಳ್ಳಿ ಇದರ ಅಧ್ಯಕ್ಷರಾದ ಎಂ ಕರುಣಾಕರ ಶೆಟ್ಟಿ ವಹಿಸಿದರು. ಈ ಕಾರ್ಯಕ್ರಮ ಉದ್ಘಾಟನೆ ಯನ್ನು Sdmc ಉಪಾಧ್ಯಕ್ಷರಾದ ಗೌತಮ್ ಶೆಟ್ಟಿ ಉದ್ಘಾಟಿಸಿದರು.

ಈ ಕಾರ್ಯಕ್ರಮದಲ್ಲಿ 400 ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು. ನಂತರ ಸಂಪನ್ಮೂಲ ವ್ಯಕ್ತಿ ಯಾಗಿ ಆಗಮಿಸಿದ ರಾಘವೇಂದ್ರ ಎಸ್. ವಕೀಲರು ಹಾಗೂ ಕಾನೂನು ನೆರವು ಅಭಿರಕ್ಷಕರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಉಡುಪಿ ಇವರು ಬಹಳ ಸರಳವಾಗಿ ವಿದ್ಯಾರ್ಥಿಗಳಿಗೆ ಮಾನವ ಕಳ್ಳ ಸಾಗಾಣಿಕೆಯ ಬಗ್ಗೆ ಮಾಹಿತಿ, ವಿದ್ಯಾರ್ಥಿಗಳಿಗೆ ಆಮಿಶ ತೋರಿಸಿ ಕದ್ದೋವೈದು ವೇಶ್ಯವಾಟಿಕೆ, ಬಾಲಕಾರ್ಮಿಕ ಪದ್ಧತಿಗೆ ದೂಡುವಾ ಸ0ಭವ ವಿದ್ದು ಜಾಗ್ರತಿ ವಹಿಸುವಂತೆ ಸಲಹೆ, ವಿದ್ಯಾರ್ಥಿಗಳ ಹಕ್ಕುಗಳು ಮತ್ತು ನೆರವಿಗಾಗಿ ಇರುವ ಕಾನೂನಿನ ಬಗ್ಗೆ, ಅಪ್ರಾಪ್ತ ವಯಸ್ಸಿನ ಮಕ್ಕಳನ್ನು ಲೈ0ಗಿಕ ಶೋಷಣೆಗೆ ಒಳಪಡಿಸುವ ವ್ಯಕ್ತಿಯ ಬಗ್ಗೆ ಜಾಗ್ರತೆ ಅರಿವು, ಪೋಕ್ಸೋ ಕಾಯ್ದೆ ಮತ್ತು ದೌರ್ಜನ್ಯಕ್ಕೆ ಒಳಗಾದ ಮಗುವಿನ ರಕ್ಷಣೆ ಮತ್ತು ದೌರ್ಜನ್ಯ ಎಸಗಿದ ವ್ಯಕ್ತಿಯನ್ನು ಶಿಕ್ಷಿಸಲು ಇರುವ ಕಾನೂನು ಬಗ್ಗೆ ಮಾಹಿತಿ ನೀಡಿದರು.

ಮುಖ್ಯ ಅತಿಥಿಗಳಾಗಿ ಶಿವಶಾಂತಿ ಮೊಳಹಳ್ಳಿ ಲಯನ್ಸ್ ಕ್ಲಬ್ ಕಾರ್ಯದರ್ಶಿ ಯಾದ ಬಾಲಕೃಷ್ಣ ಶೆಟ್ಟಿ, ಮೋಹನ್ ದಾಸ್ ಶೆಟ್ಟಿ, ರಮೇಶ್ ಶೆಟ್ಟಿ, ಮಾಜಿ ಅಧ್ಯಕ್ಷ ರಾದ ದಿನಪಾಲ್ ಶೆಟ್ಟಿ,ಕಾನೂನು ಸೇವಾ ಪ್ರಾಧಿಕಾರ ಉಡುಪಿ ಇದರ ಪ್ಯಾರ ಲೀಗಲ್ ಸ್ವಯಂ ಸೇವಕ ರಾದ ರಕ್ಷಿತ್ ಕುಮಾರ್ ಉಪಸ್ಥಿತರಿದ್ದರು.
ಈ ಕಾರ್ಯಕ್ರಮ ವನ್ನು ದೈಹಿಕ ಶಿಕ್ಷಕ ಕರುಣಾಕರ ಪೂಜಾರಿ ಸ್ವಾಗತಿಸಿದರು ನಿರೂಪಣೆ ಯನ್ನು ನಾಗರಾಜ್, ಮತ್ತು ಶಾಲಾ ಶಿಕ್ಷಕಿ ಹೆಲನ್ ಶಾಲೆಟ್ ವಂದಿಸಿದರು.
ಕಾನೂನು ಸೇವಾ ಪ್ರಾಧಿಕಾರ ಉಡುಪಿ ಇದರ ವತಿಯಿಂದ KPS BIDKALKATTE ಮಕ್ಕಳಿಗೆ 400 ಕ್ಕೂ ಅಧಿಕ ಮಕ್ಕಳು ಭಾಗವಹಿಸಿದ್ದರು.

