ಅಲಯನ್ಸ್ ಕ್ಲಬ್ ಉಡುಪಿ ಚಿಟ್ಪಾಡಿ ಮತ್ತು ಅಲಯನ್ಸ್ ಕ್ಲಬ್ ಮಂಗಳೂರು,ವಿಶ್ವ ತುಳುವೆರೆಂಕುಲು ಕುಡ್ಲ ಎಗೆ ಉಡುಪಿಯ ಜಂಟಿ ಆಶ್ರಯದಲ್ಲಿ ಹಾವಂಜೆ ಕಂಬಳಿ ಬೆಟ್ಟು ದೊಡ್ಡ ಮನೆಯಲ್ಲಿ 24-7-2026 ಶುಕ್ರವಾರ ಬೆಳಗ್ಗೆ ಗಂಟೆ 10 ಕ್ಕೆ” ಕೃಷಿ ಉತ್ತೇಜನ” ಕಾರ್ಯಕ್ರಮ ಅಡಿಯಲ್ಲಿ ಹಡಿಲು ಬಿದ 5 ಎಕರೆ ಗದ್ದೆ ನೇಜಿ ಕೀಳುವ, ನೇಜಿ ನೆಡುವ ಮತ್ತು ಕೃಷಿ ವಿವಿದ ಮಾಹಿತಿಯೊಂದಿಗೆ ಹಿರಿಯ ಕೃಷಿಕರಾದ ಕಂಬಳಿ ಬೆಟ್ಟು ದೊಡ್ಡಮನೆಯ 92 ವಯಮೀತಿಯ. ಅಂಬಾ ಭಾಸ್ಕರ ಶೆಟ್ಟಿ ( 92) ಯವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

ಅಲಯನ್ಸ್ ಕ್ಲಬ್ ಮಂಗಳೂರು ಅಧ್ಯಕ್ಷ , ವಿಶ್ವ ತುಳುವೆರೆಂಕುಲು ಕುಡ್ಲ ಸ್ಥಾಪಕರಾದ ಅಲೈ ಜಿ ಕೆ ಹರಿಪ್ರಸಾದ ರೈ ಕಾರಮೊಗರು, ಅಲಯನ್ಸ್ ಕ್ಲಬ್ ಉಡುಪಿ ಚಿಟ್ಪಾಡಿ ಅಧ್ಯಕ್ಷ ವಿಶ್ವ ತುಳುವೆರೆಂಕುಲು ಎಗೆ ಉಡುಪಿಯ ಅಲೈ ಸುರೇಖಾ ಶೆಟ್ಟಿ, ಕಾರ್ಯದರ್ಶಿ ಜ್ಯೋತಿ ಆರ್ ಶೆಟ್ಟಿ, ಕೋಶಾಧಿಕಾರಿನ ನಿತೀನ್ ಶೆಟ್ಟಿ, ಪವನ್ ಶೆಟ್ಟಿ, ಸುರೇಶ್ ಶೆಟ್ಟಿ, ಗೀತಾ ಶೆಟ್ಟಿ ಸಂತೋಷ್, ಸಂಕೇಶ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

