ಹುಂಚದಕಟ್ಟೆ: ಚೌಡೇಶ್ವರಿ ಪರಿವಾರ ದೇವಾಲಯ ಷಷ್ಠಿ ದೀಪೋತ್ಸವ, ಜಾತ್ರೆ ಮಹೋತ್ಸವ

0
135

ತೀರ್ಥಹಳ್ಳಿ : ತಾಲೂಕಿನ ಹುಂಚದಕಟ್ಟೆ ಗ್ರಾಮ ವ್ಯಾಪ್ತಿಯ ಶ್ರೀ ಕ್ಷೇತ್ರ ರಾಮನಸರ ನಾಗದೇವತೆ, ಚೌಡೇಶ್ವರಿ ಪರಿವಾರ ದೇವತೆಗಳ 20ನೇ ವರ್ಷದ ಸುಬ್ರಮಣ್ಯ ಷಷ್ಠಿ ದಿಪೋತ್ಸವ ಮತ್ತು ಜಾತ್ರ ಮಹೋತ್ಸವ ನವೆಂಬರ್ 26ರಂದು ನಡೆಯಲಿದೆ.ಅಂದು ಬೆಳಿಗ್ಗೆ 9 ಗಂಟೆಗೆ ಶ್ರೀ ನಾಗದೇವತೆಗೆ ವಿಶೇಷ ಹೂವಿನ ಅಲಂಕಾರದಲ್ಲಿ ಗಣಪತಿ ಹೋಮ, ಕಲಾಹೋಮ, 108 ಕಲಶಾಭೀಷೇಕ, ಪರಿವಾರ ದೇವತೆಗಳಿಗೆ ವಿಶೇಷ ಪೂಜೆ ನಡೆಯಲಿದೆ. 12ಗಂಟೆಗೆ ಗಣಪತಿ ಹೋಮ, ಕಲಾಹೋಮ ಪೂರ್ಣಾಹುತಿ ಜರುಗಲಿದೆ.

ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕು ಸತೇನಹಳ್ಳಿ ಶ್ರೀ ಶಿವಾಲಿ ಬಸವೇಶ್ವರ ಮೂಕಪ್ಪ ಸ್ವಾಮಿ ಪವಾಡ ದರ್ಶನ ನಡೆಯಲಿದೆ. ಪತ್ರಿಕೆ ಹೊಸನಗರ ತಾಲೂಕು ಶ್ರೀಕ್ಷೇತ್ರ ವಸವೆ ಶ್ರೀ ವನದುರ್ಗಾ ಪರಮೇಶ್ವರಿ ಅಮ್ಮನವರ ಪಲ್ಲಕ್ಕಿ, ಶ್ರೀ ಕ್ಷೇತ್ರ ಸುತ್ತೆ ಶ್ರೀ ಗಡಿದುರ್ಗಿ ಅಮ್ಮನವರ ಪಲ್ಲಕ್ಕಿ, ತೀರ್ಥಹಳ್ಳಿ ತಾಲೂಕು ಶ್ರೀ ಕ್ಷೇತ್ರ ರಂಜದಕಟ್ಟೆ ಶ್ರೀ ಚಾಮುಂಡೇಶ್ವರಿ ಹೊನ್ನಮ್ಮ ಮತ್ತು ಗುಳ್ಳೆ ಮಾರಿಯಮ್ಮ ಪಲ್ಲಕ್ಕಿ, ಶ್ರೀ ಕ್ಷೇತ್ರ ಮೇಲಿನ ಹೊನ್ನಾನಿ ಹುಣಸವಳ್ಳಿ ಬನ್ನಿ ಮಹಾಕಾಳಿ ಅಮ್ಮನವರು, ಶಿವಮೊಗ್ಗ ಶ್ರೀ ಕ್ಷೇತ್ರ ಚೋರಡಿ ಹಾಲ್ ಕುಣಿ ಶ್ರೀ ಚಂಡಿಕೇಶ್ವರಿ ಅಮ್ಮನವರ ಪಲ್ಲಕ್ಕಿ ಉತ್ಸವ ನಡೆಯಲಿದೆ. ರಾತ್ರಿ 7 ಗಂಟೆಯಿಂದ ಆಶ್ಲೇಷಬಲಿ ಮಹಾಮಂಗಳಾರತಿ ಮತ್ತು ದೀಪೋತ್ಸವ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 1:30 ರಿಂದ ರಾತ್ರಿ 2 ಗಂಟೆಯವ ರೆಗೂ ಅನ್ನ ಸಂತರ್ಪಣೆ ನಡೆಯಲಿದೆ. ಪೂಜಾ ವಿಧಿವಿಧಾನಗಳನ್ನು ಗುರುಗಳಾದ ಮುರಳಿಧರ ಕೆದ್ದಾಯ ಹೆಗ್ಡೆಕೆರೆ, ಅರ್ಚಕರಾದ ಸುರೇಶ್ ಭಟ್, ಶಂಕರ ಭಟ್ ಮತ್ತು ರಮೇಶ್ ಭಟ್ ದೇವಸ್ಥಾನ ಸಿಬ್ಬಂದಿಗಳು ನೆರವೇರಿಸುವರು. ರಾತ್ರಿ 8 ಗಂಟೆಗೆ ಆಕರ್ಷಕಹಸಿರುಪಟಾಕಿಸಿಡಿಮದ್ದುಪ್ರದರ್ಶನ ನಡೆಯಲಿದೆ. ರಾತ್ರಿ 10 ಗಂಟೆ ಯಿಂದ ಬೆಳಗಿನ ಗಂಟೆವರೆಗೆ ಶ್ರೀಅನಂತ ಪದ್ಮನಾಬದಶಾವತಾರ ಯಕ್ಷಗಾನ ಮೇಳ ಪೆರ್ಡೂರು ಇವರಿಂದ ನಾಗವಲ್ಲಿ ಕಥಾಹಂದರದ ಯಕ್ಷಗಾನ ನಡೆಯ ಲಿದೆ ಎಂದು ದೇವಸ್ಥಾನ ವ್ಯವಸ್ಥಾಪಕರಾದ ಸುನಂದಮ್ಮ, ನಾಗರಾಜ್, ಚಂದ್ರಶೇಖರ್ (ಪುಟ್ಟ), ಮನ್ಮಥ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here