ಐಸಿಎಐ ಉಡುಪಿ ಶಾಖೆ (SIRC)ಯು ; ಸಹಕಾರ ಸಂಘಗಳ ಲೆಕ್ಕಪರಿಶೋಧನೆ ಕಾರ್ಯಗಾರ

0
3

ಐಸಿಎಐ ಉಡುಪಿ ಶಾಖೆ (SIRC)ಯು 2026ರ ಜೂನ್ 6 ರಂದು ಸಹಕಾರ ಸಂಘಗಳ ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಷಯಗಳ ಕುರಿತು ಸಿಪಿಇ (CPE) ಸೆಮಿನಾರನ್ನು ಯಶಸ್ವಿಯಾಗಿ ಆಯೋಜಿಸಿತು.

ಕಾರ್ಯಕ್ರಮದಲ್ಲಿ ಸಹಕಾರ ಸಂಘಗಳ ಕಾಯ್ದೆಯಲ್ಲಿ ಇತ್ತೀಚೆಗೆ ನಡೆದ ತಿದ್ದುಪಡಿಗಳು, ಅವುಗಳ ಲೆಕ್ಕಪರಿಶೋಧನೆ ಹಾಗೂ ಲೆಕ್ಕಪರಿಶೋಧನಾ ವರದಿಗಳ ಮೇಲಿನ ಪರಿಣಾಮಗಳ ಕುರಿತು ಸಿಎ. ಬಿ. ವಿ. ರವೀಂದ್ರನಾಥ್, ಸಾಗರ ಅವರು ಸವಿಸ್ತಾರವಾಗಿ ಉಪನ್ಯಾಸ ನೀಡಿದರು. ಅಲ್ಲದೆ, ಸಹಕಾರ ಸಂಘಗಳಿಗೆ ಅನ್ವಯವಾಗುವ ಜಿಎಸ್‌ಟಿ ಹಾಗೂ ಆದಾಯ ತೆರಿಗೆಗೆ ಸಂಬಂಧಿಸಿದ ಪ್ರಮುಖ ಅಂಶಗಳ ಕುರಿತು ಸಿಎ. ಅನಿಲ್ ಭಾರವಾಜ್, ಬೆಂಗಳೂರು ಅವರು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಸದಸ್ಯರು ಮತ್ತು ವೃತ್ತಿಪರರು ವಿಷಯಗಳ ಪ್ರಾಯೋಗಿಕ ಅಂಶಗಳ ಕುರಿತು ಅಮೂಲ್ಯವಾದ ತಿಳುವಳಿಕೆಯನ್ನು ಪಡೆದುಕೊಂಡರು.
ಶಾಖೆಯ ಅಧ್ಯಕ್ಷರಾದ ಸಿಎ. ಎಂ. ರಾಘವೇಂದ್ರ ಮೊಗೆರಾಯ ಅವರು ಸ್ವಾಗತಿಸಿದರು. ಕಾರ್ಯದರ್ಶಿ ಸಿಎ. ಕೆ. ಲಕ್ಷ್ಮೀಶ ರಾವ್ ಕಾರ್ಯಕ್ರಮವನ್ನು ನಿರ್ವಹಿಸಿದರು. ಉಪಾಧ್ಯಕ್ಷರಾದ ಸಿಎ. ಅಶ್ವತ್ ಜೆ. ಶೆಟ್ಟಿ ಮಾಜಿ ಅಧ್ಯಕ್ಷೆ ಹಾಗೂ ಖಜಾಂಚಿಯಾದ ಸಿಎ. ಅರ್ಚನಾ ಆರ್. ಮೈಯ್ಯ ಮತ್ತು ಸದಸ್ಯರಾದ ಸಿಎ. ಸೋನಿತ್ ಎಸ್. ಶೆಟ್ಟಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here