ಇಳಂತಿಲ : ವಿಪರೀತ ಮಳೆಗೆ ಗುಡ್ಡ ಕುಸಿದು ವಾಹನ ಸಂಚಾರಕ್ಕೆ ಅಡಚಣೆ

0
22

ಇಳಂತಿಲ : ಇಳಂತಿಲ ಗ್ರಾಮದ ಹಾರಕೆರೆ ಎಂಬಲ್ಲಿ ವಿಪರೀತ ಮಳೆಗೆ ಬೃಹತ್ ಗಾತ್ರದಲ್ಲಿ ಗುಡ್ಡ ಕುಸಿದು ಮುಖ್ಯರಸ್ತೆ ವಾಹನ ಸಂಚಾರಕ್ಕೆ ರಸ್ತೆ ಸಂಪೂರ್ಣವಾಗಿ ಬಂದ್ ಆಗಿತ್ತು.
ಇಳಂತಿಲ ಪಂಚಾಯತ್ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರಾದ ತಿಮ್ಮಪ್ಪ ಗೌಡರವರು ಸ್ಥಳಕ್ಕೆ ಭೇಟಿ ನೀಡಿ ಹಿಟಾಚಿ ಮೂಲಕ ಸ್ಥಳದಲ್ಲಿದ್ದ ಮಣ್ಣು ತೆರವು ಕಾರ್ಯ ಹಾಗೂ ಆ ಸ್ಥಳದ ಡಾಮಾರು ರಸ್ತೆಯಲ್ಲಿ ಕೆಸರಿದ್ದ ಕಾರಣ ದ್ವಿಚಕ್ರ, ತ್ರಿಚಕ್ರ ವಾಹನಕ್ಕೆ ಅಡಚಣೆ ಉಂಟಾಗಿತ್ತು ಇದನ್ನು ಗಮನಿಸಿ ಟ್ಯಾಂಕರ್ ನಲ್ಲಿ ನೀರು ಹಾಯಿಸಿ ರಸ್ತೆಯನ್ನು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಈ ಸಂದರ್ಭದಲ್ಲಿ ಪಂಚಾಯತ್ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಸಹಕರಿಸಿದರು.
ಈ ಕಾರ್ಯಕ್ಕೆ ನಾಗರಿಕರಿಂದ ಮೆಚ್ಚುಗೆ ವ್ಯಕ್ತವಾಯಿತು.
ವಿಪರ್ಯಾಸ ಎಂದರೆ ಹಾನಿ ಸಂಭವಿಸಿದ ಸ್ಥಳಕ್ಕೆ ಇಳಂತಿಲ ಗ್ರಾಮ ಪಂಚಾಯತ್ ಅಧ್ಯಕ್ಷರು, ಅಥವಾ ಸದಸ್ಯರಾಗಲಿ ಭೇಟಿ ನೀಡದೆ ಇರುವುದು ನಾಗರಿಕರ ಕೆಂಗಣ್ಣಿಗೆ ಗುರಿಯಾಗಿದೆ.

LEAVE A REPLY

Please enter your comment!
Please enter your name here