ಬಂಟ್ವಾಳ : ಅಕ್ರಮ ಕೋಳಿ ಅಂಕ ನಡೆಯುತ್ತಿದ್ದ ಸ್ಥಳಕ್ಕೆ ವಿಟ್ಲ ಪೊಲೀಸರು ದಾಳಿ ನಡೆಸಿದ ಘಟನೆ ವೀರಕಂಭಗ್ರಾಮದ ಪಾತ್ರತೋಟ ಎಂಬಲ್ಲಿ ಭಾನುವಾರ ನಡೆದಿದೆ. ದಾಳಿ ವೇಳೆ ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಇತರರು ಪರಾರಿಯಾಗಿದ್ದಾರೆ. ಬಂಧಿತ ಆರೋಪಿಗಳನ್ನು ಇದ್ದಿದು ನಿವಾಸಿ ಉಮೇಶ (38), ಅನಂತಾಡಿ ನಿವಾಸಿ ಅಣ್ಣು (38) ಹಾಗೂ ವೀರಕಂಭ ನಿವಾಸಿ ಉಮೇಶ್ (30) ಎಂದು ಹೆಸರಿಸಲಾಗಿದೆ.

