ಗ್ಯಾರೆಂಟಿ ಅನುಷ್ಠಾನದಿಂದ ಜನರಿಗೆ ನೆಮ್ಮದಿಯ ಬದುಕು-ಅರುಣ್ ಕುಮಾರ್ ಶೆಟ್ಟಿ

0
8

ಕರ್ನಾಟಕ ಸರ್ಕಾರದ ಮಹತ್ವಕಾಂಕ್ಷಿ ಜನಪರ ಪಂಚ ಗ್ಯಾರಂಟಿ ಯೋಜನೆಯು ಬಡಜನರ ಕಣ್ಣೀರು ಒರೆಸುವ ಕೆಲಸವನ್ನು ಮಾಡಿದೆ. ಮೂಡುಬಿದಿರೆ ತಾಲೂಕಿನಲ್ಲಿ 19,657 ಗ್ರಹ ಲಕ್ಷ್ಮೀ ಫಲಾನುಭವಿಗಳು, 22,901 ಪಡಿತರ ಚೀಟಿ ಅನ್ನ ಭಾಗ್ಯ ಯೋಜನೆ ಅಡಿ, 28,725 ಉಚಿತ ವಿದ್ಯುತ್ ಗ್ರಹ ಜ್ಯೋತಿ, 322 ಯುವನಿಧಿ ಫಲಾನುಭವಿಗಳು ತಾಲೂಕಿನಲ್ಲಿದ್ದಾರೆ. ಶಕ್ತಿ ಯೋಜನೆಯಲ್ಲಿ ಸರಕಾರಿ ಬಸ್ಸಿನಲ್ಲಿ ಉಚಿತ ಪ್ರಯಾಣ ಮಹಿಳೆಯರು ಪಡೆಯುತ್ತಿದ್ದಾರೆ. ಮೂಡುಬಿಗೆರೆ ತಾಲೂಕಿಗೆ ಗೃಹಲಕ್ಷ್ಮಿಯಲ್ಲಿ 114 ಕೋಟಿ ಹಣ ಖಾತೆಗೆ ಜಮಯಿಯಾಗಿದ್ದು ಒಂದು ಕಂತಿನ ಸುಮಾರು ನಾಲ್ಕು ಕೋಟಿ ಹಣ ದೀಪಾವಳಿ ಬಹುಮಾನ ರೂಪದಲ್ಲಿ ಬರಲಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಪಂಚ ಗ್ಯಾರಂಟಿ ಯೋಜನೆಯ ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.

ಗ್ಯಾರೆಂಟಿ ಅನುಷ್ಠಾನದಿಂದ ಮಹಿಳೆಯರು ದೇವಸ್ಥಾನಗಳನ್ನು ಸುತ್ತಿದ್ದ ಪರಿಣಾಮವಾಗಿ ಭಕ್ತರ ಸಂಖ್ಯೆ ಹೆಚ್ಚಾಗಿದೆ ಎಂದು ಧರ್ಮಸ್ಥಳ ಧರ್ಮಾಧಿಕಾರಿಗಳು ತಿಳಿಸಿರುವುದನ್ನು ಅರುಣ್ ಕುಮಾರ್ ಉಲ್ಲೇಖಿಸಿದ್ದಾರೆ. ಗ್ರಹಲಕ್ಷ್ಮಿ ಹಣದಿಂದ ಮಕ್ಕಳ ಶಾಲಾ ಶುಲ್ಕ ಕಟ್ಟಲು, ಔಷಧೂಪಚಾರಕ್ಕಾಗಿ ಮಹಿಳೆಯರು ಬಳಸುತ್ತಿದ್ದಾರೆ ಇದರಿಂದ ಜನರು ನೆಮ್ಮದಿಯ ಜೀವನವನ್ನು ಸಾಗಿಸುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದರು. ಆದರೆ ವಿರೋಧ ಪಕ್ಷದವರು ಜನರ ದಾರಿ ತಪ್ಪಿಸುತ್ತಿದ್ದು ಪಂಚ ಗ್ಯಾರಂಟಿಯನ್ನು ದೋಷಿಸುತ್ತಿರುವುದು ಖೇದಕರ.

ಹಲವಾರು ಕೋಟಿಗಳ ಕಾಮಗಾರಿಯೂ ಕೂಡ ನಡೆಯುತ್ತಿದೆ. ಅಭಿವೃದ್ಧಿ ಚಟುವಟಿಕೆಗಳು ನಿಲ್ಲಲಿಲ್ಲ. ವಿರೋಧ ಪಕ್ಷದವರು ಜನಾಕ್ರೋಶ ಪ್ರತಿಭಟನೆಯ ಬದಲು ರೈತರ ಸಾಲ ಮನ್ನಾ ಮಾಡಿ, ಗ್ಯಾಸ್, ರಸಗೊಬ್ಬರ ಇತ್ಯಾದಿಗಳ ಬೆಲೆಯನ್ನು ಇಳಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು.
ಪತ್ರಿಕಾಗೋಷ್ಠಿ ಸಂದರ್ಭ ಗ್ಯಾರಂಟಿ ಸಮಿತಿಯ ಸದಸ್ಯರುಗಳಾದ ಶಿವಾನಂದ ಪಾಂಡ್ರು, ಶೌಕತ್ ಅಲಿ, ಬಾಲಕೃಷ್ಣ ದೇವಾಡಿಗ, ಶಕುಂತಲಾ ದೇವಾಡಿಗ, ರಜನಿ, ಪ್ರಭಾಕರ ದರೆಗುಡ್ಡೆ, ಮಾಜಿ ಪುರಸಭಾ ಸದಸ್ಯ ಕೊರಗಪ್ಪ ಹಾಜರಿದ್ದರು.

ವರದಿ ರಾಯಿ ರಾಜ ಕುಮಾರ್