ಅಧಿಕ ಮಾಸದ ಪ್ರಯುಕ್ತ 33 ದೇವರ ಹಾಡುಗಳ ಸಾಮೂಹಿಕ ಪಾರಾಯಣ ಸಮರ್ಪಣೆ
ಉಡುಪಿ ಜಗದ್ಗುರು ಶ್ರೀಮಧ್ವಾಚಾರ್ಯರ ಮೂಲಮಹಾಸಂಸ್ಥಾನ, ಶ್ರೀ ರಾಘವೇಂದ್ರ ಮಠದ ಹಾಗೂ ಮಂತ್ರಾಲಯ ದಾಸಸಾಹಿತ್ಯ ಪ್ರಾಜೆಕ್ಟಿನ ಜಂಟಿ ಆಶ್ರಯದಲ್ಲಿ
ಶ್ರೀ ಶ್ರೀಸುಬುಧೇಂದ್ರತೀರ್ಥಶ್ರೀಪಾದಂಗಳವರ ಪರಮಾನುಗ್ರಹದಿಂದ ಉಡುಪಿಯ ರಾಜಬೀದಿಯಲ್ಲಿರುವ ಶ್ರೀರಾಘವೇಂದ್ರ ಸ್ವಾಮಿಗಳವರ ಮಠದಲ್ಲಿ 04-06-2026 ರಂದು ಮಧ್ಯಾಹ್ನ 2-30 ಕ್ಕೆ 33 ದೇವರ ಹಾಡುಗಳ ಸಾಮೂಹಿಕ ಪಾರಾಯಣ ಸಮರ್ಪಣೆ ಕಾರ್ಯಕ್ರಮ ನೆಡೆಯಲಿದೆ.
ಮಂತ್ರಾಲಯ ದಾಸಸಾಹಿತ್ಯದ ಪ್ರಧಾನ ಸಂಚಾಲಕರಾದ ಸುಳಾದಿ ಹನುಮೇಶಾಚಾರ್ ಅವರ ನೇತೃತ್ವದಲ್ಲಿ ನಡೆಯಲಿದ್ದು, ಎಲ್ಲರೂ ಏಕಕಾಲದಲ್ಲಿ ಏಕಕಂಠದಲ್ಲಿ ಪಾರಾಯಣ ಸಮರ್ಪಣೆ ಮಾಡಲಿದ್ದು ಬಳಿಕ ರಾಜಬೀದಿಯಲ್ಲಿ ಭಜನೆಯೊಂದಿಗೆ ಪ್ರದಕ್ಷಿಣೆ ನೆಡೆಯಲಿದೆ .
ಈ ಕಾರ್ಯದಲ್ಲಿ ಹೆಚ್ಚಿನ ಮಂಡಳಿಯ ಸದಸ್ಯರು ಪಾಲ್ಗೊಳ್ಳುವಂತೆ ಮಠದ ವ್ಯವಸ್ಥಾಪಕರಾದ ಶ್ರೀಜಯತೀರ್ಥ ಆಚಾರ್ಯ ಮತ್ತು ಮಂತ್ರಾಲಯ ದಾಸಸಾಹಿತ್ಯದ ಜಿಲ್ಲಾ ಸಂಚಾಲಕರಾದ ಉಡುಪಿಯ ಕಮಲಾವತಿ ಯವರು ಪ್ರಕಟಣೆಯಲ್ಲಿ ತಿಳಿಸಿದರು.
