ಉಜಿರೆ: ಬೆಳ್ತಂಗಡಿ ತಾಲ್ಲೂಕಿನ ಪೆರಾಡಿಯಲ್ಲಿರುವ ಬೆಳ್ಳಿಬೀಡು ಬಸದಿಯಲ್ಲಿ ಧಾಮಸಂಪ್ರೋಕ್ಷಣಾ ಪೂರ್ವಕ ಪ್ರತಿಷ್ಠಾ ಮಹೋತ್ಸವವು ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಮೇ 8 ರಿಂದ 12ರ ವರೆಗೆ ನಡೆಯಲಿದೆ ಎಂದು ಬಸದಿಯ ಅನುವಂಶೀಯ ಆಡಳಿತ ಮೊಕ್ತೇಸರ ಕೆ. ಹೇಮರಾಜ್ ಬೆಳ್ಳಿಬೀಡು ತಿಳಿಸಿದ್ದಾರೆ.
ಕಾರ್ಕಳ ಜೈನಮಠದ ಪೂಜ್ಯ ಲಲಿತಕೀರ್ತಿ ಭಟ್ಟಾರಕಸ್ವಾಮೀಜಿ ಮತ್ತು ಮೂಡಬಿದ್ರೆ ಜೈನಮಠದ ಪೂಜ್ಯ ಚಾರುಕೀರ್ತಿ ಭಟ್ಟಾರಕಸ್ವಾಮೀಜಿಯವರ ದಿವ್ಯಉಪಸ್ಥಿತಿ ಮತ್ತು ಮಾರ್ಗದರ್ಶನದಲ್ಲಿ ಧಾರ್ಮಿಕ ವಿಧಿ-ವಿಧಾನಗಳು ನಡೆಯಲಿವೆ. ಮೇ 8: ಗುರುವಾರ: ಇಂದ್ರಪ್ರತಿಷ್ಠೆ, ತೋರಣಮುಹೂರ್ತ, ವಿಮಾನಶುದ್ಧಿ, ಮುಖವಸ್ತç ಉದ್ಘಾಟನೆ ಅಪರಾಹ್ನ ನಾಂದಿಮAಗಲ ಪೂಜಾ ವಿಧಾನ, ಕ್ಷೇತ್ರಪಾಲ ಪ್ರತಿಷ್ಠೆ, ನವಕಲಶಾಭಿಷೇಕ. ಮೇ 9: ಶುಕ್ರವಾರ: ವಾಸ್ತುಪೂಜಾ ವಿಧಾನ, ನವಗ್ರಹಮಹಾಶಾಂತಿ, ಯಕ್ಷಪ್ರತಿಷ್ಠೆ, ಧ್ವಜಾರೋಹಣ, ಶ್ರೀಬಲಿ ವಿಧಾನ
ಮೇ 10: ಶನಿವಾರ: ನಾಗಪ್ರತಿಷ್ಠೆ, ಆಶ್ಲೇಷಬಲಿ, ಕಲ್ಯಾಣಮಂದಿರ ಆರಾಧನೆ.
ಮೇ 11: ಆದಿತ್ಯವಾರ: ಬ್ರಹ್ಮಯಕ್ಷಾರಾಧನೆ, ಪದ್ಮಾವತಿದೇವಿ ಪ್ರತಿಷ್ಠೆ, ದೇವರಿಗೆ 108 ಕಲಶಗಳಿಂದ ಅಭಿಷೇಕ
ಮೇ. 12: ಸೋಮವಾರ: ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿಯ ಪ್ರತಷ್ಠಾ ಮಹೋತ್ಸವ.
ಅಪರಾಹ್ನ: ಕಲಿಕುಂಡಯAತ್ರಾರಾಧನೆ, ಅಗ್ರೋದಕಮೆರವಣಿಗೆ, ದೇವರಿಗೆ 216 ಕಲಶಗಳಿಂದ ಅಭಿಷೇಕ, ಮಹಾಪೂಜೆ.