ಕೊಕ್ಕರ್ಣೆ 34 ಕುದಿಯಲ್ಲಿ ಕರ್ಣಾಟಕ ಬ್ಯಾಂಕಿನ 991ನೇ ಶಾಖೆ ಮತ್ತು ಎಟಿಎಂ ಉದ್ಘಾಟನೆ

0
1

ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕೊಕ್ಕರ್ಣೆ ಸಮೀಪದ 34 ಕುದಿ ಗ್ರಾಮದಲ್ಲಿ ಕರ್ಣಾಟಕ ಬ್ಯಾಂಕಿನ 991ನೇ ಶಾಖೆ ಹಾಗೂ ಎಟಿಎಂ ಉದ್ಘಾಟನಾ ಸಮಾರಂಭ ನವೆಂಬರ್ 24ರಂದು ನಡೆಯಿತು.

34 ಕುದಿಯ ಕಿಣಿ ಸೆಂಟರ್‌ನ ನೆಲಮಹಡಿಯಲ್ಲಿ ನೂತನವಾಗಿ ಆರಂಭಗೊಂಡಿರುವ ಈ ಶಾಖೆಯನ್ನು ನಾಡೋಜ ಡಾ. ಜಿ. ಶಂಕರ್ ಪ್ರಮೋಟರ್‌, ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್‌ ಇವರು ಶಖೆಯನ್ನು ಉದ್ಘಾಟಿಸಿದರು. ಎಟಿಎಂ ಬಾಲಕೃಷ್ಣ ಅಲ್ಸೆ ಎಸ್‌. ಬ್ಯಾಂಕಿನ ಡೈರೆಕ್ಟರ್‌ ಎಟಿಎಂ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ಯಾಂಕಿನ ಚೀಫ್ ಜನರಲ್ ಮ್ಯಾನೇಜರ್ ಚಂದ್ರಶೇಖರ್ ವಹಿಸಿದರು.

ಶ್ರೀರಾಮಚಂದ್ರ ವೈದ್ಯ ಸಹಾಯಕ ಪ್ರಧಾನ ವ್ಯವಸ್ಥಾಪಕರು, ಪ್ರಾದೇಶಿಕ ಕಚೇರಿ, ಉಡುಪಿ ಪ್ರಸ್ತಾವಿಕ ಭಾಷಣವನ್ನು ನೇರವೇರಿಸಿದರು. ಪ್ರಕಾಶ್ ರಾಮ್, ಶಾಖಾ ವ್ಯವಸ್ಥಾಪಕರು, 34 ಕುದಿ ಶಾಖೆ ಇವರು ಧನ್ಯವಾದ ಸಮರ್ಪಿಸಿದರು.