ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ಮಕ್ಕಳ ಮೂಳೆ ಮಜ್ಜೆ ಕಸಿ ಮತ್ತು ಜೀವಕೋಶ ಚಿಕಿತ್ಸಾ ಘಟಕ (BHIM) ಉದ್ಘಾಟನೆ

0
30

ಮಣಿಪಾಲ : ವಿಶೇಷ ಮಕ್ಕಳ ಆರೋಗ್ಯ ಸೇವೆಗಳನ್ನು ಮುನ್ನಡೆಸುವ ಮಹತ್ವದ ಹೆಜ್ಜೆಯಾಗಿ, ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜು (ಕೆಎಂಸಿ) ಮತ್ತು ಆಸ್ಪತ್ರೆಯ ಮಕ್ಕಳ ಆಂಕೊಲಾಜಿ ವಿಭಾಗವು ಮಕ್ಕಳ ಮೂಳೆ ಮಜ್ಜೆ ಕಸಿ ಮತ್ತು ಜೀವಕೋಶ ಚಿಕಿತ್ಸಾ ವಿಭಾಗ, ಹೆಮಟಾಲಜಿ ಮತ್ತು ಇಮ್ಯುನೊಲಾಜಿ (BHIM) ಘಟಕವನ್ನು ಉದ್ಘಾಟಿಸಿ ವಿಶ್ವ ಸಿಕಲ್ ಸೆಲ್ (ಕುಡಗೋಲು ಕೋಶ) ಜಾಗೃತಿ ದಿನವನ್ನು ಆಚರಿಸಿತು. ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಶಾರದಾ ಮಾಧವ ಪೈ ಸ್ಮಾರಕ ಹೊರರೋಗಿ ವಿಭಾಗದ ಆವರಣದಲ್ಲಿ ಇಂದು ಉದ್ಘಾಟನಾ ಸಮಾರಂಭ ನಡೆಯಿತು.

ಹೊಸದಾಗಿ ಸ್ಥಾಪಿಸಲಾದ ಘಟಕವು ಮೂಳೆ ಮಜ್ಜೆಯ ಕಸಿ ಮತ್ತು ಸೆಲ್ಯೂಲಾರ್ ಥೆರಪಿ ಚಿಕಿತ್ಸೆಯಂತಹ ಸುಧಾರಿತ ಚಿಕಿತ್ಸೆಗಳ ಅಗತ್ಯವಿರುವ ಮಕ್ಕಳಿಗೆ ಸಂಕೀರ್ಣ ರಕ್ತ ಶಾಸ್ತ್ರ , ಇಮ್ಯುನೊಲಾಜಿ ಮತ್ತು ಆಂಕೊಲಾಜಿಕಲ್ ಅಸ್ವಸ್ಥತೆಗಳನ್ನು ಹೊಂದಿರುವ ಮಕ್ಕಳಿಗೆ ಸಮಗ್ರ ಆರೈಕೆಯನ್ನು ಒದಗಿಸುತ್ತದೆ. ಈ ಉಪಕ್ರಮವು ಕೆಎಂಸಿ, ಮಣಿಪಾಲ್ ಮತ್ತು ಕಸ್ತೂರ್ಬಾ ಆಸ್ಪತ್ರೆಗಳು ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸುವ ಮತ್ತು ಮಾರಣಾಂತಿಕ ರಕ್ತದ ಅಸ್ವಸ್ಥತೆಗಳು, ರೋಗನಿರೋಧಕ ಕೊರತೆಗಳು ಮತ್ತು ಕ್ಯಾನ್ಸರ್‌ಗಳಿಂದ ಬಳಲುತ್ತಿರುವ ಮಕ್ಕಳಿಗೆ ಫಲಿತಾಂಶಗಳನ್ನು ಸುಧಾರಿಸುವ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.

ಮುಖ್ಯ ಅತಿಥಿಯಾಗಿ ಮಣಿಪಾಲದ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ನ ಕುಲಪತಿ ಡಾ. ಶರತ್ ಕೆ. ರಾವ್ ಅವರು ಉದ್ಘಾಟನೆಯನ್ನು ನೆರವೇರಿಸಿದರು. ಅವರು ತಮ್ಮ ಮಾತನಾಡುತ್ತಾ, “ನಮ್ಮ ಪ್ರದೇಶ ಮತ್ತು ದೇಶದ ನಿರಂತರವಾಗಿ ಹೆಚ್ಚುತ್ತಿರುವ ಆರೋಗ್ಯ ಸೇವಾ ಅಗತ್ಯಗಳನ್ನು ಸಮರ್ಥವಾಗಿ ಪೂರೈಸಲು ಕ್ಲಿನಿಕಲ್ ಪರಿಣತಿ, ಸಂಶೋಧನೆ ಮತ್ತು ಶಿಕ್ಶಣವನ್ನು ಸಮನ್ವಯಗೊಳಿಸುವ ಉನ್ನತ ಮಟ್ಟದ ವಿಶೇಷಾ ಶ್ರೇಷ್ಟತಾ ಕೇಂದ್ರಗಳನ್ನು ಅಭಿವೃದ್ದಿಪಡಸುವುದು ಅತ್ಯಂತ ಅಗತ್ಯವಾಗಿದೆ” ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಮಾತನಾಡಿದ ಮಕ್ಕಳ ಆಂಕೊಲಾಜಿ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ. ವಾಸುದೇವ ಭಟ್ ಕೆ ಅವರು ಗಣ್ಯರನ್ನು ಸ್ವಾಗತಿಸಿದರು ಮತ್ತು ಅವರು ಮಾತನಾಡಿ , “ಹೆಚ್ಚು ತರಬೇತಿ ಪಡೆದ ಆರೋಗ್ಯ ವೃತ್ತಿಪರ ತಂಡದ ಜೊತೆಗೆ ಆರ್ಥಿಕ ಬೆಂಬಲ ನೀಡುವ ದಾನಿಗಳ ಸಹಕಾರ ಮತ್ತು ಅತ್ಯಾಧುನಿಕ ತಂತ್ರಜ್ಞಾನದಿಂದ ಬೆಂಬಲಿತವಾದ ಬಹುಶಿಸ್ತೀಯ, ರೋಗಿ-ಕೇಂದ್ರಿತ ಆರೈಕೆಯನ್ನು ನೀಡುವ ಗುರಿಯನ್ನು ಈ ಘಟಕ ಹೊಂದಿದೆ” ಎಂದು ಹೇಳಿದರು.

ಘಟಕದ ಉಸ್ತುವಾರಿ ಮತ್ತು ಮಕ್ಕಳ ಆಂಕೊಲಾಜಿ ವಿಭಾಗದ ಸಹ ಪ್ರಾಧ್ಯಾಪಕಿ ಡಾ. ಅರ್ಚನಾ ಎಂ.ವಿ. ಅವರು , ಹೊಸ ಘಟಕದ ದೃಷ್ಟಿಕೋನವನ್ನು ವಿವರಿಸಿದರು, ಸಮಗ್ರ ಮೂಳೆ ಮಜ್ಜೆ ಕಸಿ ಸೇವೆಗಳು, ಸೆಲ್ಯುಲಾರ್ ಚಿಕಿತ್ಸೆಗಳು ಮತ್ತು ದೀರ್ಘಕಾಲೀನ ಅನುಸರಣಾ ಆರೈಕೆಯನ್ನು ಒದಗಿಸುವಲ್ಲಿ ಅದರ ಪಾತ್ರವನ್ನು ಒತ್ತಿ ಹೇಳಿದರು. ಜಾಗೃತಿ, ಆರಂಭಿಕ ರೋಗನಿರ್ಣಯ ಮತ್ತು ಸುಧಾರಿತ ಚಿಕಿತ್ಸಾ ಆಯ್ಕೆಗಳ ಮೂಲಕ ಆನುವಂಶಿಕ ರಕ್ತ ಅಸ್ವಸ್ಥತೆಗಳನ್ನು ಪರಿಹರಿಸುವ ಸಂಸ್ಥೆಯ ಬದ್ಧತೆಯನ್ನು ಬಲಪಡಿಸುವ ಮೂಲಕ, ವಿಶ್ವ ಸಿಕಲ್ ಸೆಲ್ ಜಾಗೃತಿ ದಿನದ ಜೊತೆಯಲ್ಲಿ ಘಟಕವನ್ನು ಪ್ರಾರಂಭಿಸುವ ಮಹತ್ವದ ಕುರಿತು ಅವರು ಮಾತನಾಡಿದರು .

ಈ ಕಾರ್ಯಕ್ರಮದಲ್ಲಿ ಮಾಹೆ ಮಣಿಪಾಲದ ಬೋಧನಾ ಆಸ್ಪತ್ರೆಗಳ ಮುಖ್ಯ ಸಿ ಓ ಓ ಡಾ. ಸುಧಾಕರ್ ಕಂಟಿಪುಡಿ; ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಡೀನ್ ಡಾ. ಅನಿಲ್ ಕೆ. ಭಟ್ ಸೇರಿದಂತೆಮಾಹೆ ಮತ್ತು ಕಸ್ತೂರ್ಬಾ ಆಸ್ಪತ್ರೆಯ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು .

ಭೀಮ್ (BHIM) ವಿಭಾಗದ ಸ್ಥಾಪನೆಯು ಕಸ್ತೂರ್ಬಾ ಆಸ್ಪತ್ರೆಯಲ್ಲಿ ಮಕ್ಕಳ ಆರೋಗ್ಯ ರಕ್ಷಣೆಯಲ್ಲಿ ಒಂದು ಪ್ರಮುಖ ಮೈಲಿಗಲ್ಲನ್ನು ಗುರುತಿಸುತ್ತದೆ ಮತ್ತು ಇದು ಮುಂದುವರಿದ ಮಕ್ಕಳ ರಕ್ತಶಾಸ್ತ್ರ, ರೋಗನಿರೋಧಕ ಶಾಸ್ತ್ರ, ಮೂಳೆ ಮಜ್ಜೆಯ ಕಸಿ ಮತ್ತು ಸೆಲ್ಯುಲಾರ್ ಥೆರಪಿ ಸೇವೆಗಳಿಗೆ ಪ್ರಾದೇಶಿಕ ಉಲ್ಲೇಖ ಕೇಂದ್ರವಾಗಿ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ, ಇದು ಕರ್ನಾಟಕ ಮತ್ತು ಅದರಾಚೆಗಿನ ಮಕ್ಕಳು ಮತ್ತು ಕುಟುಂಬಗಳಿಗೆ ಪ್ರಯೋಜನವನ್ನು ನೀಡುತ್ತದೆ. ವಿಭಾಗದ ಸಹ ಪ್ರಾಧ್ಯಾಪಕಿ ಡಾ. ಎಮಿನ್ ರಹಿಮಾನ್ ಧನ್ಯವಾದ ಅರ್ಪಿಸಿದರು , ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಸ್ವಾತಿ ಪಿ.ಎಂ. ಕಾರ್ಯಕ್ರಮ ನಿರೂಪಿಸಿದರು .

LEAVE A REPLY

Please enter your comment!
Please enter your name here