ಕಾವೂರು ಬಂಟರ ಸಂಘದ ಬಂಟರ ಭವನ ಉದ್ಘಾಟನೆ

0
5

ಪೂರ್ವ ಸಿದ್ಧತಾ ಸಭೆ, ಸಂಘಟಿತರಾಗಿ ಕಾರ್ಯ ನಿರ್ವಹಿಸಿ ಯಶಸ್ವಿಗೊಳಿಸೋಣ : ಆನಂದ ಶೆಟ್ಟಿ ಅಡ್ಯಾರ್

ಮಂಗಳೂರು : ಕಾವೂರಿನ ಮಾಲಾಡಿಕೋರ್ಟ್ ಮುಖ್ಯ ರಸ್ತೆಯಲ್ಲಿ ಸುಮಾರು 10 ಕೋಟಿ ವೆಚ್ಚದಲ್ಲಿ ರೂಪುಗೊಳ್ಳಲಿರುವ ಕಾವೂರು ಬಂಟರ ಭವನದ ನಿರ್ಮಾಣ ಕಾಮಗಾರಿಕೆ ಅಂತಿಮ ಹಂತದಲ್ಲಿದ್ದು ಜನವರಿ 20, 2027ರಂದು ಉದ್ಘಾಟನೆ ನಡೆಯಲಿದೆ. ಇದರ ಪೂರ್ವ ಸಿದ್ಧತಾ ಸಭೆಯು ಸಂಘದ ಅಧ್ಯಕ್ಷ ಆನಂದ ಶೆಟ್ಟಿ ಅಡ್ಯಾ‌ರ್ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಆನಂದ ಶೆಟ್ಟಿ ಅಡ್ಯಾರ್ ಉದ್ಘಾಟನಾ ಸಮಾರಂಭವನ್ನು ನಾವೆಲ್ಲರೂ ಸಂಘಟಿತರಾಗಿ ಜೊತೆಗೂಡಿ ಕಾರ್ಯ ನಿರ್ವಹಿಸುವ ಮೂಲಕ ಯಶಸ್ವಿಗೊಳಿಸಬೇಕಾಗಿದೆ. ಕಟ್ಟಡ ನಿರ್ಮಾಣ ಸಮಿತಿಯ ಅಧ್ಯಕ್ಷ ಮುಗೋಡಿ ಡಿ. ಸುಧಾಕರ ಶೆಟ್ಟಿಯವರು ಕಳೆದ 2 ವರ್ಷಗಳಿಂದ ಸಂಕೀರ್ಣದ ನಿರಂತರ ಕಾಮಗಾರಿಕೆ ನಡೆಸಿದ್ದರಿಂದ ಇದು ಸಾಧ್ಯವಾಯಿತು ಎಂದು ಶ್ಲಾಘಿಸಿದರು.

ಕಟ್ಟಡ ನಿರ್ಮಾಣ ಸಮಿತಿಯ ಅಧ್ಯಕ್ಷ ಮುಗೋಡಿ ಡಿ. ಸುಧಾಕರ ಶೆಟ್ಟಿ ಮಾತನಾಡಿ ರೂಪುಗೊಳ್ಳಲಿರುವ ಬಂಟರ ಭವನವು ಸುಮಾರು 1,300 ಆಸನವುಳ್ಳ ಹವಾ ನಿಯಂತ್ರದ ಸಭಾಂಗಣ ಮತ್ತು ಪ್ರತ್ಯೇಕ ಊಟೋಪಚಾರದ ವ್ಯವಸ್ಥೆ ಒಳಗೊಂಡಿದ್ದು, ವಾಹನ ನಿಲುಗಡೆ, ಪೂಜಾ ಮಂದಿರ ಇನ್ನಿತರ ಸೌಲಭ್ಯವನ್ನು ಒಳಗೊಂಡಿದೆ ಎಂದ ಅವರು ಬಂಟ ಸಮುದಾಯದವರು ಈ ಮಹತ್ಕಾರ್ಯಕ್ಕೆ ಕೈಜೋಡಿಸಬೇಕೆಂದು ವಿನಂತಿಸಿದರು.

ನಿಕಟಪೂರ್ವ ಅಧ್ಯಕ್ಷ ಎಂ.ಎಸ್. ಶೆಟ್ಟಿ ಸರಪಾಡಿ ಮಾತನಾಡಿ ಕಾವೂರು ಬಂಟರ ಸಂಘವು ಬೆಳೆದು ಬಂದ ರೀತಿ-ನೀತಿ ವಿವರಿಸಿ ಸಮಾಜ ಬಾಂಧವರ ಸಹಕಾರಕ್ಕೆ ಈ ಸಂದರ್ಭದಲ್ಲಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಶ್ರೀಮತಿ ಪ್ರೇಮಾ ಕೆ. ಶೆಟ್ಟಿ, ಚಿಪ್ಪಾರುಗುತ್ತು ಇವರು ಕಟ್ಟಡ ನಿರ್ಮಾಣಕ್ಕೆ 1 ಲಕ್ಷ ನಗದನ್ನು ಕಟ್ಟಡ ನಿರ್ಮಾಣ ಸಮಿತಿಯ ಅಧ್ಯಕ್ಷರ ಡಿ. ಸುಧಾಕರ ಶೆಟ್ಟಿ ಇವರಿಗೆ ಹಸ್ತಾಂತರಿಸಿದರು.

ವೇದಿಕೆಯಲ್ಲಿ ಬಂಟರ ಭವನದ ಮತ್ತು ಕಟ್ಟಡ ಸಮಿತಿಯ ಪದಾಧಿಕಾರಿಗಳಾದ ವಿಠಲ್ ಆಳ್ವ, ಲಕ್ಷ್ಮೀನಾರಾಯಣ ಶೆಟ್ಟಿ, ಶಂಭು ಶೆಟ್ಟಿ, ರೇಖಾ ವಿ. ಶೆಟ್ಟಿ, ಸುಧಾಕರ ಆಳ್ವ, ಅವಿನಾಶ್ ನಾಯಕ್ ಉಪಸ್ಥಿತರಿದ್ದರು.

ಪ್ರಧಾನ ಕಾರ್ಯದರ್ಶಿ ಸುಧಾಕರ ಆಳ್ವ ಪ್ರಸ್ತಾಪಿಸಿ, ಕೋಶಾಧಿಕಾರಿ ಶಂಭು ಶೆಟ್ಟಿ ಲೆಕ್ಕಪತ್ರ ಮಂಡಿಸಿದರು. ಪ್ರಧಾನ ಕಾರ್ಯದರ್ಶಿ ಅವಿನಾಶ್ ನಾಯಕ್ ಧನ್ಯವಾದಗೈದರು.

LEAVE A REPLY

Please enter your comment!
Please enter your name here