ದಕ್ಷಿಣ ಕನ್ನಡ ವರ್ತಕರ ವಿವಿಧೋದ್ದೇಶ ಸರ್ಕಾರಿ ಸಂಘವು 2003ರಲ್ಲಿ ಬಂಟ್ವಾಳದಲ್ಲಿ ಸ್ಥಾಪನೆಗೊಂಡಿತು. ಬಂಟ್ವಾಳದಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಸಂಘವು 14 ಶಾಖೆಗಳನ್ನು ಪ್ರಸ್ತುತ ಹೊಂದಿರುತ್ತದೆ. ಮೂಡುಬಿದಿರೆಯ ಅಲಂಗಾರಿನಲ್ಲಿ ಕಾರ್ಯಾಚರಿಸುತ್ತಿದ್ದ ಸಂಘದ ಶಾಖೆಯನ್ನು ಸಪ್ಟೆಂಬರ್ 26ರಂದು ಜೈನಪೇಟೆಯ ಬಡಗು ಬಸದಿಯ ಎದುರಿನ ವಾಣಿಜ್ಯ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು.
ಸ್ಥಳಾಂತರಿತ ಶಾಖೆಯ ಉದ್ಘಾಟನೆಯನ್ನು ಉದ್ಯಮಿ ಶ್ರೀಪತಿ ಭಟ್ ದೀಪ ಬೆಳಗಿ ಉದ್ಘಾಟಿಸಿ ವರ್ತಕರಿಗೆ ಅತಿ ಅಗತ್ಯದ ಹಣಕಾಸಿನ ಸೌಲಭ್ಯಗಳನ್ನು ಮಾಡಿಕೊಡುವುದರಿಂದ ಸಂಘವು ಉತ್ತಮವಾಗಿ ಬೆಳೆಯಲು ಸಾಧ್ಯವಿದೆ ಎಂದರು. ಈ ಸಂದರ್ಭದಲ್ಲಿ ಉದ್ಯಮಿ ನಾರಾಯಣ ಪಿ ಎಂ, ಮಹೇಂದ್ರ ವರ್ಮಾ ಜೈನ್ ಮಾತನಾಡಿ ಅಭಿವೃದ್ಧಿಗೊಳ್ಳುತ್ತಿರುವ ನಗರಕ್ಕೆ ಇಂತಹ ಸಹಕಾರಿ ಸಂಘವು ಅತಿ ಅಗತ್ಯ ಎಂದರು. ಶ್ವೇತಾ ಜೈನ್ ಹಾಗೂ ಇತರರು ಹಾಜರಿದ್ದರು.

ಅಧ್ಯಕ್ಷ ಎಂ ಸುಭಾಷ್ ಚಂದ್ರ ಜೈನ್ ಸ್ವಾಗತಿಸಿದರು. ನಿರ್ದೇಶಕ ಡಾಕ್ಟರ್ ಸುದೀಪ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು. ಹಲವಾರು ನಿರ್ದೇಶಕರುಗಳು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಜಿತ್ ಕುಮಾರ್, ಶಾಖಾ ಪ್ರಬಂಧಕಿ, ಹಾಗೂ ಇತರರು ಹಾಜರಿದ್ದರು.
.

