
ದಾವಣಗೆರೆ : ದಾವಣಗೆರೆಯ ಆಧ್ಯಾತ್ಮ ಪರಂಪರೆಯ ಕ್ರಿಯಾತ್ಮಕ ಸಂಸ್ಥೆ ಶ್ರೀ ಗಾಯತ್ರಿ ಪರಿವಾರದ ಆಶ್ರಯದಲ್ಲಿ ಪ್ರತೀ ತಿಂಗಳು ಹುಣ್ಣಿಮೆಯಂದು ನಿರಂತರ 26 ವರ್ಷಗಳಿಂದ ನಡೆದು ಬಂದ ಶ್ರೀ ಗಾಯತ್ರಿ ಪೂಜೆ ಉಪಾಸನೆ ಈ ತಿಂಗಳ ಅನಂತ ಪೂರ್ಣಿಮೆ ಪ್ರಯುಕ್ತ ನಗರದ ಜಯದೇವ ವೃತ್ತದಲ್ಲಿರುವ ಶ್ರೀ ಶಂಕರಮಠದ ಸಭಾಂಗಣದಲ್ಲಿ ನಡೆದ ಈ ಧಾರ್ಮಿಕ ಸೇವೆ ಪೂಜೆ ಯಶಸ್ವಿಯಾಗಿ ನಡೆಯಿತು ಎಂದು ಪರಿವಾರದ ಪ್ರಧಾನ ಕಾರ್ಯದರ್ಶಿ ಸಾಲಿಗ್ರಾಮ ಗಣೇಶ್‌ಶೆಣೈ ತಿಳಿಸಿದ್ದಾರೆ.
ಬಿ. ವೀರಭದ್ರಪ್ಪ ಪಾರ್ವತಮ್ಮ ದಂಪತಿಗಳು ಈ ಹುಣ್ಣಿಮೆಯ ಪೂಜೆ ಸಲ್ಲಿಸಿದರು.
ಶ್ರೀ ಗಾಯಿತ್ರಿ ಪರಿವಾರದ ಅಧ್ಯಕ್ಷರಾದ ವಾಸುದೇವ ಲಕ್ಷö್ಮಣ್ ರಾಯ್ಕರ್, ಗೌರವ ಅಧ್ಯಕ್ಷರಾದ ಡಾ|| ಸುಶೀಲಮ್ಮ, ಡಾ|| ರಮೇಶ್ ಪಾಟೀಲ್, ಕೆ.ಹೆಚ್. ಮಂಜುನಾಥ್, ಸಂಚಾಲಕರಾದ ಭಾವನ್ನಾರಾಯಣ, ಸಮಿತಿ ಸದಸ್ಯರಾದ ಸತೀಶ್ ಆರ್.ಎಂ., ವಿ.ಕೃಷ್ಣಮೂರ್ತಿ, ಸತ್ಯನಾರಾಯಣ ಮೂರ್ತಿ, ವಾಸು ವೀರಭದ್ರರಾವ್, ಶಿವಕುಮಾರ್, ಗುರುಮೂರ್ತಿ, ಭಾಗ್ಯ ಪಿಸಾಳೆ ಮುಂತಾದವರು ಉಪಸ್ಥಿತರಿದ್ದರು.
