ವಿದ್ಯಾರ್ಥಿವೇದಿಕೆಯ ಉದ್ಘಾಟನೆ ಮತ್ತು ಪ್ರತಿಭಾ ದಿನಾಚರಣೆ

0
8

ಹೆಬ್ರಿ : ಸರಕಾರಿ ಪ್ರಥಮ ದರ್ಜೆ ಕಾಲೇಜು ಹೆಬ್ರಿ ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಹೆಬ್ರಿ ಇದರ ವತಿಯಿಂದ 2026-2027 ನೇ ಸಾಲಿನ ವಿದ್ಯಾರ್ಥಿವೇದಿಕೆಯ ಉದ್ಘಾಟನೆ ಹಾಗೂ ಪ್ರತಿಭಾ ದಿನಾಚರಣೆ ಕಾರ್ಯಕ್ರಮವು ಒ.28 ರಂದು ಕಾಲೇಜು ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಉದ್ಯಮಿಯಾದ ಪ್ರಕೃತಿ ಪ್ರಿಯ ಗುಡ್ಡಿ ಕೆ. ಸುಧಾಕರ ಹೆಗ್ಡೆ ನೆರವೇರಿಸಿ ಮಾತನಾಡಿ ವಿದ್ಯಾರ್ಥಿಗಳು ಪ್ರತಿಭಾವಂತರಾಗಿ ಸಾಧಕನಾಗಬೇಕಾದರೆ ಶಿಕ್ಷಣದ ಜೊತೆಯಲ್ಲಿ ಇಂತಹ ವಿದ್ಯಾರ್ಥಿ ವೇದಿಕೆಯ ಮೂಲಕ ಸಾಧ್ಯವಾಗುತ್ತದೆ. ಅದಕ್ಕಾಗಿ ನಾಯಕತ್ವ ಗುಣಗಳಾದ ಇಚ್ಚಾಶಕ್ತಿ, ಆತ್ಮಸ್ಥೈರ್ಯ, ಪರಿಶ್ರಮ ಮೊದಲಾದ ಗುಣಗಳನ್ನು ಹೊಂದಿರಬೇಕು.ಆ ಮೂಲಕ ನಿಮ್ಮ ಹೆತ್ತವರಿಗೆ, ಊರಿಗೆ, ವಿದ್ಯಾ ಸಂಸ್ಥೆಗೆ ಕೀರ್ತಿ ತರುವಂತಹ ಸಾಧನೆ ಮಾಡಿ ಎಂದು ಹೇಳಿದರು.

ವೇದಿಕೆಯಲ್ಲಿ ಅತಿಥಿಗಳಾಗಿ ಆಗಮಿಸಿದ ಇದೇ ಕಾಲೇಜಿನ ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕರಾದ ದಾನಿ ಅರುಣ ಶೆಟ್ಟಿ, ಸಿ. ಡಿ. ಸಿ. ಸದಸ್ಯರಾದ ರಾಮಕೃಷ್ಣ ಭಟ್, ಶಶಿಧರ ಶೆಣೈ ಹೆಬ್ರಿ, ನಿವೃತ್ತ ಶಿಕ್ಷಕಿ ಶ್ಯಾಮಲಾ ಶೆಟ್ಟಿ, ಜನಾರ್ಧನ ಎಚ್, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷರಾದ ಶಂಕರ ಸೇರಿಗಾರ್,ಐ. ಕ್ಯೂ, ಎ, ಸಿ ಸಂಚಾಲಕರಾದ ಡಾ. ಗಣೇಶ್ , ಸಾಂಸ್ಕೃತಿಕ ವೇದಿಕೆಯ ಸಂಚಾಲಕರಾದ ಜ್ಯೋತಿ, ಪೋಷಕರ ವೇದಿಕೆಯ ಅಧ್ಯಕ್ಷರಾದ ಪ್ರಿಯದರ್ಶಿನಿ ಹಾಗೂ ಕಾಲೇಜು ಸಾಂಸ್ಕೃ ತಿಕ ವೇದಿಕೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ವಿದ್ಯಾಧರ ಎಸ್. ಹೆಗ್ಡೆ. ಮಾತನಾಡಿ ವಿದ್ಯಾರ್ಥಿಗಳ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಹಾಗೂ ವಿದ್ಯಾರ್ಥಿಗಳಲ್ಲಿ ನಾಯಕತ್ವಗುಣ ಹೊಂದಿ, ಪ್ರಜಾಪ್ರಭುತ್ವದ ತತ್ವಗಳನ್ನು ಪಾಲಿಸುವ ಉದ್ದೇಶದಿಂದ ಕಾಲೇಜಿನಲ್ಲಿ ಸರಕಾರದ ಆದೇಶದಂತೆ ನಮ್ಮ ಕಾಲೇಜಿನಲ್ಲಿ ವಿದ್ಯಾರ್ಥಿ ವೇದಿಕೆಯನ್ನು ಸ್ಥಾಪಿಸಲಾಗಿದೆ. ವಿದ್ಯಾರ್ಥಿಗಳು ಮುಂದಿನ ಅವಧಿಯಲ್ಲಿ ವೇದಿಕೆಯ ಮೂಲಕ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯಶಸ್ವಿ ಕಾಣಬೇಕು. ಸಂಘಟನೆಯ ಎಲ್ಲಾ ಪಧಾಧಿಕಾರಿಗಳನ್ನು ಅಭಿನಂದಿಸುತ್ತೇನೆ ಎಂದು ಹೇಳಿದರು.

ಪ್ರತಿಭಾ ವೇದಿಕೆಯ ಪದಾಧಿಕಾರಿಗಳಿಗೆ ಮತ್ತು ಸದಸ್ಯರಿಗೆ ಪ್ರತಿಜ್ಞಾ ವಿಧಿ ಭೋಧಿಸಲಾಯಿತು. 2025-2026 ನೇ ಸಾಲಿನಲ್ಲಿ ಶಿಕ್ಷಣದಲ್ಲಿ ಅತೀ ಹೆಚ್ಚು ಅಂಕ ಗಳಿಸಿ ಸಾಧನೆಮಾಡಿದ ಕಾಲೇಜಿನ ಹ ಲವು ಮಂದಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ದಾನಿ ಅರುಣ ಕುಮಾರ್ ಶೆಟ್ಟಿ ಕೊಡಮಾಡಿದ ಪ್ರೋತ್ಸಾಹ ಧನವನ್ನು ಈ ಸಂಧರ್ಭದಲ್ಲಿ ನೀಡಲಾಯಿತು.ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಸುಷ್ಮಾ ಕೆ. ರಾವ್ ಸ್ವಾಗತಿಸಿ, ವಿದ್ಯಾರ್ಥಿಗಳಾದ ಅಕ್ಷತಾ ಮತ್ತು ಪ್ರಜ್ಞಾ, ನಿರೂಪಿಸಿದರು. ವಿದ್ಯಾರ್ಥಿ ಆಕಾಶ್ ವಂದಿಸಿದರು.
ಭೋಧಕ ಮತ್ತು ಭೋಧಕೇತರ ಸಿಬ್ಬಂಧಿ, ಕಾಲೇಜು ಅಭಿವೃದ್ಧಿ ಸಮಿತಿ ಪದಾಧಿಕಾರಿಗಳು, ವಿದ್ಯಾರ್ಥಿ, ವಿದ್ಯಾರ್ಥಿನಿಯರು ಇದ್ದರು.