ಮೊಸರು ಕುಡಿಕೆ ಉತ್ಸವದ ಸಮಾರೋಪದಲ್ಲಿ ವಿದ್ಯಾರ್ಥಿನಿಯರಿಗೆ ಪ್ರೋತ್ಸಾಹ ಧನ

0
6

ಬೆಳಾಲು: ಸೆ 06 ಮೈತ್ರಿ ಯುವಕ ಮಂಡಲ (ರಿ.)ಬೆಳಾಲು. ಇದರ ಸಹಯೋಗದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ 22ನೇ ವರ್ಷದ ಮೊಸರು ಕುಡಿಕೆ ಉತ್ಸವದ ಸಮಾರೋಪ ಸಮಾರಂಭ ಕಾರ್ಯಕ್ರಮ ಸೆ. 06 ರಂದು ಯುವಕ ಮಂಡಲದ ವಠಾರದಲ್ಲಿ ನೆರವೇರಿತು.

ಮುಖ್ಯ ಅತಿಥಿಗಳಾದ ಶ್ರೀಮತಿ ಡೈನಾ ಪ್ರವೀಣ್ ವಿಜಯ್ ಪಾರಳ ಇವರು ಬೆಳಾಲು ಗ್ರಾಮದ ಕಡುಬಡತನದಲ್ಲಿರುವ ಇಬ್ಬರು ಪ್ರಾಥಮಿಕ ಶಾಲಾ ವಿದ್ಯಾರ್ಥಿನಿಯರ ವಿದ್ಯಾಭ್ಯಾಸಕ್ಕೆ ತಮ್ಮ ವೈಯಕ್ತಿಕ ನೆಲೆಯಲ್ಲಿ ಪ್ರೋತ್ಸಾಹ ಧನ ಸಹಾಯವನ್ನು ಹಸ್ತಾಂತರ ಮಾಡಿದರು.ಈ ಸಂದರ್ಭದಲ್ಲಿ ಎಸ್.ಕೆ.ಡಿ.ಆರ್.ಡಿ.ಪಿ ಬಜಪೆ ವಲಯ ಯೋಜನಾಧಿಕಾರಿಗಳಾದ ಗಿರೀಶ್. ಎಂ, ಜುಬೈರ್ ಅನಂತೋಡಿ, ಬೆಳಾಲು, ಮೈತ್ರಿ ಯುವಕ ಮಂಡಲ ಅಧ್ಯಕ್ಷರಾದ ನವನೀತ್ ಗೌಡ, ಯುವಕ ಮಂಡಲ ಗೌರವ ಸಲಹೆಗಾರರಾದ ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷರಾದ ಜತ್ತನ್ನ ಗೌಡ,ಗೌರವಾಧ್ಯಕ್ಷರಾದ ನಿತಿನ್ ಮೋನಿಸ್, ಕಾರ್ಯದರ್ಶಿ ಕಿರಣ್ ಸುವರ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು.