ಮಹಾರಾಷ್ಟ್ರ, : ಸಾರ್ವಜನಿಕ ಸ್ಥಳಗಳಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬ ಕನಿಷ್ಠ ಸಾಮಾಜಿಕ ಜವಾಬ್ದಾರಿಯ ಕೊರತೆಯನ್ನು ತೋರಿಸುವ ಘಟನೆ ಮಹಾರಾಷ್ಟ್ರದ ಕಲ್ಯಾಣ್ ಪ್ರದೇಶದ ಹೋಟೆಲ್‌ವೊಂದರಲ್ಲಿ ನಡೆದಿದೆ. ಫ್ಯಾಮಿಲಿ ಸೆಕ್ಷನ್‌ನಲ್ಲಿ ಊಟ ಮಾಡುತ್ತಿದ್ದ ಮಹಿಳೆಯೊಬ್ಬರು ಅಲ್ಲಿಯೇ ಮೂತ್ರ ವಿಸರ್ಜನೆ ಮಾಡಿದ ಘಟನೆ ಸ್ಥಳದಲ್ಲಿದ್ದ ಗ್ರಾಹಕರ ಆಕ್ರೋಶಕ್ಕೆ ಕಾರಣವಾಗಿದೆ.
ಮಾಹಿತಿಯ ಪ್ರಕಾರ, ಮಹಿಳೆ ತನ್ನ ಪರಿಚಯಸ್ಥರೊಂದಿಗೆ ಹೋಟೆಲ್‌ಗೆ ಆಗಮಿಸಿ ಫ್ಯಾಮಿಲಿ ಸೆಕ್ಷನ್‌ನಲ್ಲಿ ಊಟ ಮಾಡಿದ್ದರು. ಊಟದ ಬಳಿಕ ಆಕೆಯೊಂದಿಗೆ ಬಂದಿದ್ದವರು ಬಿಲ್ ಪಾವತಿಸಲು ಅಥವಾ ಇತರ ಕೆಲಸಕ್ಕಾಗಿ ಹೊರಗೆ ತೆರಳಿದ ವೇಳೆ, ಮಹಿಳೆ ಅಲ್ಲಿಯೇ ಕುಳಿತಿದ್ದ ಜಾಗದಲ್ಲೇ ಮೂತ್ರ ವಿಸರ್ಜನೆ ಮಾಡಲು ಆರಂಭಿಸಿದ್ದಾಳೆ ಎನ್ನಲಾಗಿದೆ.
ಈ ದೃಶ್ಯವನ್ನು ಕಂಡ ಮತ್ತೊಬ್ಬ ಮಹಿಳಾ ಗ್ರಾಹಕಿ ತಕ್ಷಣ ಆಕ್ಷೇಪ ವ್ಯಕ್ತಪಡಿಸಿ, “ಹೋಟೆಲ್‌ನಲ್ಲಿ ವಾಶ್‌ರೂಮ್ ಇದ್ದಾಗ ಊಟ ಮಾಡುವ ಸ್ಥಳದಲ್ಲೇ ಹೀಗೆ ಮಾಡುವುದು ಸರಿಯೇ?” ಎಂದು ಪ್ರಶ್ನಿಸಿದ್ದಾರೆ.
ಆದರೆ ತನ್ನ ತಪ್ಪನ್ನು ಒಪ್ಪಿಕೊಳ್ಳುವ ಬದಲು, ಆ ಮಹಿಳೆ ಪ್ರಶ್ನಿಸಿದವರ ಮೇಲೆಯೇ ಉದ್ಧಟವಾಗಿ ವರ್ತಿಸಿ, “ನನ್ನೊಂದಿಗೆ ಬಂದಿದ್ದ ವ್ಯಕ್ತಿಯೇ ಇಲ್ಲೇ ಮಾಡಲು ಹೇಳಿದ್ದರು” ಎಂದು ಸಮರ್ಥಿಸಿಕೊಳ್ಳಲು ಯತ್ನಿಸಿದ್ದಾಳೆ ಎನ್ನಲಾಗಿದೆ.
ಈ ಘಟನೆ ಹೋಟೆಲ್ ಸಿಬ್ಬಂದಿ ಹಾಗೂ ಇತರ ಗ್ರಾಹಕರಿಗೆ ತೀವ್ರ ಮುಜುಗರ ಉಂಟುಮಾಡಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ಅಸಭ್ಯ ವರ್ತನೆ ತೋರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ವ್ಯಕ್ತವಾಗಿದೆ.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮಹಿಳೆಯ ವರ್ತನೆಗೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.

