
ಇಂದಿರಾ ಗಾಂಧಿಯಿಂದಾಗಿ ದೇಶ ಸುಭದ್ರವಾಗಿದೆ : ಎಂ.ಎ.ಗಫೂರ್.
ಹೆಬ್ರಿ : ಇಂದಿರಾ ಗಾಂಧಿಯವರು ಅಂದು ಭದ್ರ ಬುನಾದಿ ಹಾಕಿಕೊಟ್ಟ ಕಾರಣ ನಮ್ಮ ದೇಶ ಇಂದು ಸುಭದ್ರವಾಗಿದೆ, ಅವರು ವ್ಯಕ್ತಿಯಲ್ಲ, ಮಹಾಶಕ್ತಿ, ದೇಶಕ್ಕಾಗಿ ಹಲವಾರು ಶಾಶ್ವತ ಕೊಡುಗೆ ನೀಡಿದ್ದಾರೆ. ಆದರೆ ಇಂದಿರಾ ಗಾಂಧಿಯವರನ್ನು ಸ್ಮರಿಸುವ ಕೆಲಸ ಆಡಳಿತ ನಡೆಸುವವರು ಕಡಿಮೆ ಮಾಡುತ್ತಿರುವುದು ದುರಂತ ಎಂದು ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ.ಗಫೂರ್ ಹೇಳಿದರು.
ಹೆಬ್ರಿಯ ಚೈತನ್ಯ ಸಭಾಭವನದಲ್ಲಿ ಬುಧವಾರ ನಡೆದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಜನ್ಮ ದಿನದ ಸಂಭ್ರಮಾಚರಣೆಯ ಸಲುವಾಗಿ ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ ಮಾತನಾಡಿದರು.

ದೇಶವನ್ನು ಕಟ್ಟಿ ಬೆಳೆಸಿದ ಜವಾಹರಲಾಲ್ ನೆಹರು, ಇಂದಿರಾ ಗಾಂಧಿ ಸಹಿತ ಯಾವ ರಾಷ್ಟ್ರ ನಾಯಕರನ್ನು ಸ್ಮರಣೆಯನ್ನು ಆಳುವವರು ನಡೆಸದಿರುವುದು ನೋವಿನ ಸಂಗತಿ, ಆದರೆ, ಅವರು ದೇಶಕ್ಕೆ ನೀಡಿದ ಸೇವೆ ತ್ಯಾಗ ಬಲಿದಾನವನ್ನು ಮರೆಮಾಚಲು ಯಾರಿಂದಲೂ ಅಸಾಧ್ಯ ಎಂದ ಗಫೂರ್ ಅವರು ಆದರ್ಶ ಪ್ರಾಮಾಣಿಕ ಜನನಾಯಕರಾಗಿದ್ದ ಗೋಪಾಲ ಭಂಡಾರಿಯವರ ಸೇವೆಯನ್ನು ಸ್ಮರಿಸಿ ಅವರ ಸ್ಮರಣೆ ನಡೆಸುತ್ತಿರುವುದು ಮುಂದಿನ ಜನತೆಗೆ ದಾರಿದೀಪ ಎಂದರು.
೨೦ ಅಂಶದ ಕಾರ್ಯಕ್ರಮದಿಂದ ಲೋಕದ ಕಲ್ಯಾಣವಾಗಿದೆ : ರಾಜ್ಯದ ಶ್ರೀನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ಮಾತನಾಡಿ ಗೋಪಾಲ ಭಂಡಾರಿಯವರ ಆದರ್ಶ ವ್ಯಕ್ತಿತ್ವ ನಮಗೆಲ್ಲ ದಾರಿದೀಪವಾಗಿದೆ, ಗೋಪಾಲ ಭಂಡಾರಿಯವರು ನಿತ್ಯ ಸ್ಮರಣಿಯರು ಎಂದು. ಇಂದಿರಾ ಗಾಂಧಿಯವರ ಉಳುವವನೆ ಹೊಲದೊಡೆಯ ಕಾರ್ಯಕ್ರಮದಿಂದ ಇಂದು ಸಣ್ಣ ಸಮುದಾಯದವರು ತಲೆಎತ್ತಿ ಸ್ವಾಭಿಮಾನದ ಬದುಕು ನಡೆಸುವಂತಾಗಿದೆ. ಬಿಜೆಪಿಯವರು ಟೀಕೆ ಮಾಡುತ್ತಾರೆ. ಇಂದಿರಾ ಗಾಂಧಿಯವರ ತುರ್ತು ಪರಿಸ್ಥಿತಿಯ ಆಡಳಿತದಿಂದ ಬಡವರ ಸಹಿತ ಜನಸಾಮಾನ್ಯರಿಗೆ ಯಾವೂದೇ ತೊಂದರೆಯಾಗಿಲ್ಲ. ಬದುಕಿಗಾಗಿ ಪ್ರಯೋಜನವಾಗಿದೆ. ೨೦ ಅಂಶದ ಕಾರ್ಯಕ್ರಮದಿಂದ ಲೋಕದ ಕಲ್ಯಾಣವಾಗಿದೆ ಎಂದರು.
ಹೆಬ್ರಿ ಗೋಪಾಲ ಭಂಡಾರಿ ಅಭಿಮಾನಿ ವೇದಿಕೆ ಮತ್ತು ಸಾಮಾಜಿಕ ಸೇವಾ ಟ್ರಸ್ಟ್ ಹೆಬ್ರಿ ಕಾರ್ಕಳ ಅಧ್ಯಕ್ಷರಾದ ಮುಖಂಡ ನೀರೆ ಕೃಷ್ಣ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ ಜನಸೇವೆಗೆ ತನ್ನ ಬದುಕನ್ನೇ ಮುಡಿಪಾಗಿಟ್ಟ ಗೋಪಾಲ ಭಂಡಾರಿಯವರ ಹೆಸರಿನ ಸೇವಾ ಟ್ರಸ್ಟ್ ಪ್ರತಿವರ್ಷವೂ ಸೇವಾ ಕಾರ್ಯಕ್ರಮ, ಇಂದಿರಾ ಗಾಂಧಿಯವರ ಸ್ಮರಣೆಯ ಸಹಿತ ಕೆಲವು ಕಾರ್ಯಕ್ರಮಗಳನ್ನು ನಡೆಸಲಿದೆ. ಗೋಪಾಲ ಭಂಡಾರಿಯವರು ಜನಮಾನಸದಲ್ಲಿ ಶಾಶ್ವತವಾಗಿ ನೆಲೆಯಾಗಿದ್ದಾರೆ ಎಂದರು.
ಗೋಪಾಲ ಭಂಡಾರಿಯವರ ಪುತ್ಥಳಿಗೆ ಮಾಲಾರ್ಪಾಣೆ ಮಾಡಿ ಗೌರವಿಸಲಾಯಿತು. ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಜನ್ಮ ದಿನದ ಸಂಭ್ರಮಾಚರಣೆಯ ನಿವೃತ್ತ ತಹಶೀಲ್ಧಾರ್ ಕಾರ್ಕಳ ಮಾಳದ ಶಾಂತಾರಾಮ ಚಿಪ್ಳೂಣಕರ್ ಅವರು ಇಂದಿರಾ ಗಾಂಧಿಯವರ ಭಾವಚಿತ್ರಕ್ಕೆ ದೀಪ ಬೆಳಗಿ ಪುಪ್ಪನಮನ ಸಲ್ಲಿಸಿದರು.
ವಿವಿಧ ಕ್ಷೇತ್ರಗಳ ಸಾಧಕರ ಅಭಿನಂದನೆ : ಶ್ರೀನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ, ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ.ಗಫೂರ್ ಉಡುಪಿ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಪೊಲೀಸ್ ಅಧಿಕಾರಿ ಚಾರ ಹೆರ್ಗಲ್ಲು ಸುಜನ್ ಶೆಟ್ಟಿ, ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಿವಿಧ ಕ್ಷೇತ್ರಗಳ ಸಾಧಕರಾದ ಸಾಹಿತಿ ಬಿಪಿನ್ ಚಂದ್ರಪಾಲ್ ನಕ್ರೆ, ಚಾರ ಪ್ರದೀಪ್ ಹೆಬ್ಬಾರ್, ಪರೀಕ ಪ್ರಕೃತಿ ಚಿಕಿತ್ಸಾಲಯ ಡಾ. ಗೋಪಾಲ ಪೂಜಾರಿ ಶಿವಪುರ, ಹೆಬ್ರಿ ಅನಂತಪದ್ಮನಾಭ ಫ್ರೆಂಡ್ಸ್ ಅಧ್ಯಕ್ಷೆ ಸ್ಮೀತಾ ಶೇಖರ್ ಶೇರಿಗಾರ್ ಹೆಬ್ರಿ, ಮಾವಿನಕಟ್ಟೆ ಶಂಕರ ಶೆಟ್ಟಿ ಮುನಿಯಾಲು, ವೀಣಾ ಆರ್ ಭಟ್, ಸಮಾಜ ಸೇವಕರಾದ ಧಾರ್ಮಿಕ ಮುಂದಾಳು ಹೆಬ್ರಿ ಭಾಸ್ಕರ ಜೋಯಿಸ್, ಹೆಬ್ರಿ ಗ್ರಾಮ ಪಂಚಾಯಿತಿ ಸದಸ್ಯರಾದ ಸಮಾಜಸೇವಕ ಎಚ್.ಜನಾರ್ಧನ್ ಹೆಬ್ರಿ, ಮಹಾಬಲ ನಾಯ್ಕ್ ಬೇಳಂಜೆ, ಕ್ರೀಡಾ ಸಾಧಕ ದೈಹಿಕ ಶಿಕ್ಷಣ ಪರಿವೀಕ್ಷಕ ನಿತ್ಯಾನಂದ ಶೆಟ್ಟಿ, ಶಿಕ್ಷಕ ಪ್ರಸಂಗಕರ್ತ ಪಿ.ವಿ.ಆನಂದ ಸಾಲಿಗ್ರಾಮ, ನಿವೃತ್ತ ತಹಶೀಲ್ಧಾರ್ ಕಾರ್ಕಳ ಮಾಳದ ಶಾಂತಾರಾಮ ಚಿಪ್ಳೂಣಕರ್ ಸಹಿತ ಹಲವರನ್ನು ಗೌರವಿಸಲಾಯಿತು.
ಹೆಬ್ರಿಯ ಮುಖಂಡ ಉದ್ಯಮಿ ಪ್ರವೀಣ್ ಬಲ್ಲಾಳ್ ಹೆಬ್ರಿ, ಹೆಬ್ರಿ ಎಸ್.ಆರ್. ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನಾಗರಾಜ ಶೆಟ್ಟಿ, ಚಾರ ಗ್ರಾಮ ಪಂಚಾಯಿತಿ ಅಧ್ಯಕ್ಷ ದಿನೇಶ ಕುಮಾರ್ ಶೆಟ್ಟಿ, ಗೋಪಾಲ ಭಂಡಾರಿ ಅಭಿಮಾನಿ ವೇದಿಕೆ ಮತ್ತು ಸಾಮಾಜಿಕ ಸೇವಾ ಟ್ರಸ್ಟ್ ಕಾರ್ಯದರ್ಶಿ ದೀಪಾ ಭಂಡಾರಿ, ಕೋಶಾಧಿಕಾರಿ ಜನಾರ್ಧನ್, ಕಾರ್ಯಕಾರಿ ಸಮಿತಿಯ ಸದಸ್ಯರಾದ ರಾಜೇಶ ಭಂಡಾರಿ, ಎಚ್.ವಾದಿರಾಜ ಶೆಟ್ಟಿ, ನವೀನ್ ಕೆ ಅಡ್ಯಂತಾಯ, ಸುಕುಮಾರ್ ಮುನಿಯಾಲ್, ಮೋಹನದಾಸ ನಾಯಕ್ ಶಿವಪುರ, ಜಗದೀಶ ಹೆಗ್ಡೆ ಕಡ್ತಲ, ಜಗನ್ನಾಥ ಕುಲಾಲ್ ಶಿವಪುರ, ಬೈಕಾಡಿ ಮಂಜುನಾಥ ರಾವ್ ಶಿವಪುರ, ಪ್ರಕಾಶ ಪೂಜಾರಿ ಮಾತಿಬೆಟ್ಟು, ಜಾನ್ ಟೆಲ್ಲಿಸ್ ಅಜೆಕಾರು ಮುಂತಾದವರು ಉಪಸ್ಥಿತರಿದ್ದರು.
ಮಾತಿಬೆಟ್ಟು ಪ್ರಕಾಶ ಪೂಜಾರಿ ಮತ್ತು ಪ್ರಸಾದ್ ಶೆಟ್ಟಿ ಹೆಬ್ರಿ ನಿರೂಪಿಸಿ ಜನಾರ್ಧನ್ ಎಚ್ ವಂದಿಸಿದರು.

