ಶ್ರೀ ಸತ್ಯನಾರಾಯಣ ಪೂಜೆಯೊಂದಿಗೆ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಪದಗ್ರಹಣ

0
5

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ (ರಿ) ಕಾಸರಗೋಡು. ಪ್ರಗತಿ ಬಂದು ಸ್ವ ಸಹಾಯ ಸಂಘಗಳ ಒಕ್ಕೂಟ ಮೊಗ್ರಲ್. ಬೆದ್ರಡ್ಕ. ಕೋರುವೈಲು. ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಇದರ ಸಯುಕ್ತ ಆಶ್ರಯದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಒಕ್ಕೂಟ ಪದಗ್ರಹಣ ಕಾರ್ಯಕ್ರಮ.ಶ್ರೀ ದುರ್ಗಾಪರಮೇಶ್ವರಿ ಪ್ರಾರ್ಥನಾ ಮಂದಿರ ಕೋರುವೈಲಿನಲ್ಲಿ ನಡೆಯಿತು.

ಬ್ರಹ್ಮಶ್ರೀ ಪಟ್ಟೇರಿ ವಿಷ್ಣು ಪ್ರಕಾಶ್ ತಂತ್ರಿ ಕಾವು ಮಠ ರವರು ಕಾರ್ಯಕ್ರಮವನ್ನು ತೆಂಗಿನ ಹಿಂಗಾರ ಅರಳಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಯೋಜನೆಯಿಂದ ನಡೆಯುವಂತಹ ಕಾರ್ಯಕ್ರಮಗಳು ತುಂಬಾ ಉತ್ತಮವಾಗಿದೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಪದಾಧಿಕಾರಿಗಳು ಒಳ್ಳೆಯ ರೀತಿಯಿಂದ ಕೆಲಸವನ್ನು ಮಾಡಲು ಸ್ವಾಮಿ ಅನುಗ್ರಹನಿಮಗಿರಲಿ ಎಂದು ಶುಭ ಹಾರೈಸಿದರು. ದಕ್ಷಿಣ ಕನ್ನಡ -2 ಜಿಲ್ಲೆಯ ನಿರ್ದೇಶಕರಾದ ಬಾಬು ನಾಯ್ಕ ಅವರು ಯೋಜನೆಯ ನಡೆದು ಬಂದ ದಾರಿಯನ್ನು ತಿಳಿಸಿದರು. ಯೋಜನೆಯಿಂದ ಸಿಗುವಂತಹ ಸೌಲಭ್ಯಗಳ ಬಗ್ಗೆ ಸಮಗ್ರವಾದ ಮಾಹಿತಿಯನ್ನು ನೀಡಿದರು. ಬ್ಯಾಂಕಿನ ನಿಯಮದಂತೆ ಸಂಘದಲ್ಲಿ 10 ಜನ ಸದಸ್ಯರು ಕಡ್ಡಾಯವಾಗಿ ಇರಬೇಕು ಅದಕ್ಕೆ ಪದಾಧಿಕಾರಿಗಳು ಸದಸ್ಯರ ಸೇರ್ಪಡೆಗೆ ಸಹಕರಿಸಬೇಕೆಂದು ತಿಳಿಸಿದರು.

ವೇದಮೂರ್ತಿ ನಾಗೇಂದ್ರ ಭಟ್ ರವರು ಮಾತನಡುತ್ತಾ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಉತ್ತಮವಾದ ಕೆಲಸಗಳನ್ನು ಮಾಡುತ್ತಿದೆ ಎಂದು ಶುಭ ಹಾರೈಸಿದರು
ಕಾಸರಗೋಡು ವಲಯ ಜನಜಾಗ್ರತಿ ವಲಯ ಅಧ್ಯಕ್ಷರಾದ ಕಿರಣ್ ಪ್ರಸಾದ್ ಕೂಡ್ಲು ಅವರು ಮಾತನಾಡುತ್ತಾ ಸರಕಾರದಿಂದ ಮಾಡಲು ಸಾಧ್ಯವಾಗದ ಕೆಲಸವನ್ನು ಗ್ರಾಮ ಅಭಿವೃದ್ಧಿ ಯೋಜನೆ ಮಾಡಿಕೊಂಡು ಬಂದಿರುತ್ತದೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಪ್ರಧಾನ ಭಾಗವತದ ಧರ್ಮಸ್ಥಳ ಮೇಳದ ಪ್ರಧಾನ ಭಾಗವತರು ರಾಮಕೃಷ್ಣ ಮಯ್ಯರು. ಭಜನಾ ಪರಿಷತ್ತು ತಾಲೂಕ ಅಧ್ಯಕ್ಷರಾದ ಡಾl ಕೆ.ಎನ್.ವೆಂಕಟ್ರಮಣ ಹೊಳ್ಳ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ವೇದಿಕೆಯಲ್ಲಿ ಕೇಂದ್ರ ಒಕ್ಕೂಟ ಅಧ್ಯಕ್ಷರಾದ ಜ್ಞಾನೇಶ್ವರ ಆಚಾರ್ಯ. ಕಾಸರಗೋಡು ತಾಲೂಕಿನ ಯೋಜನಾಧಿಕಾರಿ ದಿನೇಶ್ ಬಿ. ಜನಜಾಗೃತಿ ಸದಸ್ಯರಾದ ರಾಮಕೃಷ್ಣ ಮಜಲು ಉಪಸ್ಥಿತರಿದ್ದರು.ಕಾರ್ಯಕ್ರಮ ಅಧ್ಯಕ್ಷತೆಯನ್ನು ಹರ್ಷವರ್ಧನ್ ಕೆ ಯವರು ವಹಿಸಿಕೊಂಡರು. ಒಕ್ಕೂಟದ ನಿಕಟಪೂರ್ವ ಅಧ್ಯಕ್ಷರು ಮತ್ತು ನೂತನ ಅಧ್ಯಕ್ಷರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಏರಿಯಲ್ ಕಾರ್ಯಕೇತ್ರ ಸೇವಾ ಪ್ರತಿನಿಧಿ ಶ್ರೀಮತಿ ಜ್ಯೋತಿಯವರು ಸ್ವಾಗತಿಸಿ ಸಮಿತಿ ಸದಸ್ಯರಾದ ಸವಿತಾ ರವರು ಧನ್ಯವಾದ ನೀಡಿದರು. ವರದಿಯನ್ನು ಶೋಭಾರವರು ಮಂಡನೆ ಮಾಡಿದರು ವಲಯದ ಮೇಲ್ವಿಚಾರಕರಾದ ಗೋಪಾಲಕೃಷ್ಣ ಕಾರ್ಯಕ್ರಮವನ್ನು ನಿರೂಪಿಸಿದರು.