
ದಕ್ಷಿಣ ಕನ್ನಡ ದೇಶದ ಮೆಡಿಕಲ್ ಮಾತ್ರವಲ್ಲ ಜಗತ್ತಿನ ಮೆಡಿಕಲ್ ಆಗುವ ತಾಕತ್ತನ್ನು ಹೊಂದಿದೆ. ಯುವಕರೇ ಮಂಚೂಣಿಯಲ್ಲಿರುವ ಭಾರತದ ಯುವಕ ಡಾಕ್ಟರ್ ಗಳು ಹಾಗೂ ನರ್ಸಗಳ ಬಗ್ಗೆ ಇಡೀ ಪ್ರಪಂಚವೇ ನಂಬಿಕೆ ಇಟ್ಟಿದೆ. 25 ವರ್ಷಗಳ ಪ್ರಧಾನಮಂತ್ರಿಯವರ ಸೇವಾ ಸಂಕಲ್ಪ ಇಂದಿನ ದಿನಗಳಲ್ಲಿ ವೈದ್ಯಕೀಯ ಸಂಶೋಧನೆಯಲ್ಲಿಯು ಮಾನವೀಯ ಸೇವೆ ಲಭ್ಯವಾಗುತ್ತಿದೆ.
ಇಂದಿನ ಮಕ್ಕಳಿಗೆ ಕಾಲೇಜು ಶಿಕ್ಷಣದೊಂದಿಗೆ ಸ್ಕಿಲ್, ಧೈರ್ಯ, ಮಾನವೀಯತೆ ಗುಣಗಳನ್ನು ತುಂಬಿಸಬೇಕಾಗಿದೆ. ಇತರ ದೇಶಗಳಲ್ಲಿ ಜನರು ಹೊರಬರಲು ಹೆದರುವ ಈ ಕಾಲದಲ್ಲಿ ನಾಲ್ಕು ಐದು ಸಾವಿರ ಜನ ಒಟ್ಟಾಗಿ ಕಾರ್ಯಕ್ರಮ ನಡೀತಾ ಇರುವುದು ತಮಗೆಲ್ಲ ಹೆಮ್ಮೆಯ ವಿಷಯ.

ಮೂಡುಬಿದರೆ ತಾಲೂಕಿನ ಮಿಜಾರು ಗ್ರಾಮದಲ್ಲಿ ತಲೆಯೆತ್ತಿರುವ ಆಳ್ವಾಸ್ ಮೆಡಿಕಲ್ ಕಾಲೇಜು ಕೆಲವೇ ತಿಂಗಳುಗಳಲ್ಲಿ ಡೀಮ್ಡ್ ವಿಶ್ವವಿದ್ಯಾಲಯವಾಗಿ ಹೊರ ಹೊಮ್ಮಲಿದೆ ಎಂದು ಕೇಂದ್ರದ ಶಿಕ್ಷಣ ಸಚಿವರೂ, ನವೀಕರಿಸಬಹುದಾದ ಇಂಧನ ಇಲಾಖೆಯ ಸಚಿವರು ಆದ ಪ್ರಹ್ಲಾದ್ ಜೋಶಿ ದೀಪ ಬೆಳಗಿ ಉದ್ಘಾಟಿಸಿ ಭರವಸೆ ನೀಡಿದರು.
ದೇಶದ ಅಭಿವೃದ್ಧಿ 7.8 ಶೇಕಡಕ್ಕೆ ವೃದ್ಧಿಯಾಗಿದೆ. ವಿದ್ಯುತ್ ನಲ್ಲಿ 552 ಗೀಗಾ ಬೈಟ್ ಉತ್ಪಾದಿಸಿ ಇತರ ದೇಶಗಳಿಗೆ ನೀಡುತ್ತಿದೆ.
2027ರ ವಿಕಸಿತ ಭಾರತದತ್ತ ಹೆಜ್ಜೆ ಇಡುತ್ತಿದ್ದೇವೆ. ಯುವಕರಲ್ಲಿ ದೈಹಿಕವಾಗಿ ಮಾನಸಿಕವಾಗಿ ಸ್ವಸ್ತತೆಯನ್ನು ಬೆಳೆಸಬೇಕಾಗಿದೆ. 843 ಬಿಲಿಯನ್ ಡಾಲರ್ ಗಳಷ್ಟು ಉತ್ಪಾದನೆಗಳು ರಫ್ತು ಆಗುತ್ತಿವೆ. ಉತ್ತಮ ಹಸಿರು ವಲಯ ಪರಿಸರವನ್ನು ನಿರ್ಮಿಸಿದ್ದಕ್ಕೆ ಆಳ್ವಾಸನ್ನು ತುಂಬು ಹೃದಯದಿಂದ ಅಭಿನಂದಿಸಿದರು. ದೇಶಾದ್ಯಂತ 700ಕ್ಕಿಂತ ಹೆಚ್ಚು ಮೆಡಿಕಲ್ ಕಾಲೇಜುಗಳು 1,40,000 ಮೆಡಿಕಲ್ ಸೀಟುಗಳು 2,30,000 ಸ್ಟಾರ್ಟ್ ಆಫ್ ಗಳು ಇಡೀ ದೇಶದಲ್ಲಿ ಕಾರ್ಯಾಚರಿಸುತ್ತ ಯುವ ಪಡೆಯನ್ನು ಸ್ವಸ್ಥ ಪರಿಸ್ಥಿತಿಗೆ ತಿಳಿಗೊಳಿಸುತ್ತಿದೆ ಎಂದು ಸಾರಿದರು.
ಜನರನ್ನು ಉದ್ದೇಶಿಸಿ ಮಾತನಾಡಿದ ಸಂಸದ ಬ್ರಿಜೇಶ್ ಚೌಟ ಸರಕಾರದ ಟಿಬಿ ಮುಕ್ತ ಕಾರ್ಯಕ್ಕೆ ಕೈಜೋಡಿಸಿ ಎಂದು ಕೇಳಿಕೊಂಡು, ದೇವರ ದೇವಾಲಯ ಮತ್ತು ಆರೋಗ್ಯದ ದೇವಾಲಯಗಳಲ್ಲಿ ಮಂಚೂಣಿಯಲ್ಲಿರುವ ಜಿಲ್ಲೆ ಉತ್ತಮವಾಗಿ ಅಭಿವೃದ್ಧಿ ಆಗಿರುವುದಕ್ಕೆ ಸಂತಸವನ್ನು ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಹಲವಾರು ವಿಶ್ವವಿದ್ಯಾಲಯದ ಕುಲಪತಿಗಳು, ವಿವಿಧ ಮೆಡಿಕಲ್ ಕಾಲೇಜುಗಳ ಅಧ್ಯಕ್ಷರು, ಕುಲಪತಿಗಳು, ಅಧಿಕಾರಿಗಳು ಹಾಜರಿದ್ದರು. ಎಲ್ಲರನ್ನೂ ಮುಕ್ತವಾಗಿ ಆಳ್ವಾಸ್ ಶಿಕ್ಷಣ ಫೌಂಡೇಶನ್ ಅಧ್ಯಕ್ಷ ಡಾ ಮೋಹನ್ ಆಳ್ವ ಸ್ವಾಗತಿಸಿದರು.
