ಅಂತರ್ ಕಾಲೇಜು ಮಹಿಳೆಯರ ಹ್ಯಾಂಡ್ ಬಾಲ್ ಪಂದ್ಯಾಟ

0
77

ಉಜಿರೆ : ಕಾರ್ಕಳದ ಎಂ ಪಿ ಎಂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದಂತ ಮಂಗಳೂರು ವಿಶ್ವವಿದ್ಯಾನಿಲಯ ಅಂತರ್ ಕಾಲೇಜು ಮಹಿಳೆಯರ ಹ್ಯಾಂಡ್ ಬಾಲ್ ಪಂದ್ಯಾಟದಲ್ಲಿಉಜಿರೆಯ ಎಸ್.ಡಿ ಎಂ ಕಾಲೇಜಿನ ಮಹಿಳೆಯರ ತಂಡವು ಚಾಂಪಿಯನ್ ಗಳಾಗಿ ಹೊರಹೊಮ್ಮಿದ್ದಾರೆ.

ಸೆಮಿ ಫೈನಲ್ ಪಂದ್ಯದಲ್ಲಿ ಮಂಗಳೂರಿನ ಯುನಿವರ್ಸಿಟಿ ಕ್ಯಾಂಪಸ್ ತಂಡವನ್ನು ಸೋಲಿಸಿದ ಎಸ್.ಡಿ.ಎಂ ತಂಡವು ಫೈನಲ್ ಪಂದ್ಯಕ್ಕೆ ಪ್ರವೇಶ ಪಡೆಯಿತು. ಫೈನಲ್ ಪಂದ್ಯಟಾದಲ್ಲಿ ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ಮಹಿಳಾ ತಂಡವನ್ನು ಸುಮಾರು 11-8 ಅಂಕಗಳಿಂದ 3 ಗೋಲ್ ಗಳ ಅಂತರದಲ್ಲಿ ಮಣಿಸಿ ಭರ್ಜರಿ ಜಯ ಸಾಧಿಸಿತು. ಎಸ್.ಡಿ.ಎಂ ಮಹಿಳಾ ತಂಡದ ಆಟಗಾರ್ತಿಯರಾದ ತೃತೀಯ ಬಿಎ ವಿದ್ಯಾರ್ಥಿನಿ ಧನುಶ್ರೀ ಉತ್ತಮ ಗೋಲ್ ಕೀಪರ್, ಪ್ರಥಮ ಬಿ.ಬಿ.ಎ ವಿದ್ಯಾರ್ಥಿನಿ ಪೂಜ ಉತ್ತಮ ಆಟಗಾರ್ತಿ ವೈಯಕ್ತಿಕ ಪ್ರಶಸ್ತಿಯನ್ನು ಪಡೆದುಕೊಂಡರು.

ಈ ಗೆಲುವಿನ ಮೂಲಕ ಮಾರ್ಚ್ ತಿಂಗಳಲ್ಲಿ  ತಮಿಳುನಾಡಿನಲ್ಲಿ ನಡೆಯಲಿರುವ ದಕ್ಷಿಣ ವಲಯ ವಿಶ್ವವಿದ್ಯಾಲಯದ ಮಹಿಳೆಯರ ಹ್ಯಾಂಡ್ ಬಾಲ್ ಪಂದ್ಯಾಟಕ್ಕೆ ಆಯ್ಕೆಯನ್ನು ಪಡೆದುಕೊಂಡಿದೆ. ಪ್ರಶಸ್ತಿ ಪಡೆದುಕೊಂಡ ಸಂದರ್ಭದಲ್ಲಿ ತಂಡದ ಆಟಗಾರ್ತಿಯರಾದ ವರ್ಷಿತಾ,ಪೂಜ, ರಶ್ಮೀ, ಪಲ್ಲವಿ, ಮನಿಷಾ, ಭೂಮಿಕಾ,  ಧನುಶ್ರೀ ಮತ್ತು ಎಸ್.ಡಿ.ಎಂ ಮಹಿಳಾ ತಂಡದ ತರಬೇತುದಾರ ಎಸ್.ಡಿ.ಎಂ ಕಾಲೇಜಿನ ದೈಹಿಕ ಶಿಕ್ಷಣ ಉಪನ್ಯಾಸಕ ಸುದೀನ್ ಪೂಜಾರಿ ಉಪಸ್ಥಿತರಿದ್ದರು. ವಿಜೇತ ತಂಡಕ್ಕೆ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಹಾಗು ಕಾಲೇಜಿನ ಪ್ರಾಂಶುಪಾಲರಾದ ಪ್ರೋ.ವಿಶ್ವನಾಥ್ ಪಿ, ಎಸ್.ಡಿ.ಎಂ ಕ್ರೀಡಾ ಸಂಘದ ಕಾರ್ಯದರ್ಶಿ ರಮೇಶ್, ಉಪನ್ಯಾಸಕರು ಸೇರಿದಂತೆ ಸಿಬ್ಬಂದಿವರ್ಗದವರು ಅಭಿನಂದನೆಗಳನ್ನು ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here