ಅಂತರ್ ಘಟಕಗಳ ಮಾಧವ ಕೀರ್ತನೋತ್ಸವ -2026 ಭಜನಾ ಸ್ಪರ್ಧೆ

0
4

ಯುವವಾಹಿನಿ (ರಿ ) ಕೇಂದ್ರ ಸಮಿತಿ ಮಂಗಳೂರು ಆಶ್ರಯದಲ್ಲಿ, ಯುವವಾಹಿನಿ (ರಿ ) ಪಣಂಬೂರು ಕುಳಾಯಿ ಘಟಕದ ಆತಿಥ್ಯದಲ್ಲಿ ಅಂತರ್ ಘಟಕಗಳ ಮಾಧವ ಕೀರ್ತನೋತ್ಸವ -2026 ಭಜನಾ ಸ್ಪರ್ಧೆಯಲ್ಲಿ 22 ಘಟಕಗಳು ಸ್ಪರ್ಧಿಸಿದ್ದು ಇದರಲ್ಲಿ ಯುವವಾಹಿನಿ (ರಿ ) ಕಾರ್ಕಳ ಘಟಕವು, ಘಟಕದ ಅಧ್ಯಕ್ಷರಾದ ಪ್ರಕಾಶ್ ಪೂಜಾರಿಯವರ ಅಧ್ಯಕ್ಷತೆಯಲ್ಲಿ , ಕಲೆ ಮತ್ತು ಸಾಹಿತ್ಯ ನಿರ್ದೇಶಕರಾದ ಶ್ರೀನಿವಾಸ್ ಪೂಜಾರಿಯವರ ಸಾರಥ್ಯದಲ್ಲಿ, ಹರೀಶ್ ಹೆಗ್ಡೆ ಕಡ್ತಲ ಇವರ ತರಬೇತಿಯಲ್ಲಿ,ಮಂಡಳಿಯ ಸದಸ್ಯರಾದ ಹರ್ಷಲಾ, ವಿಕಾಸ್, ಸನ್ನಿಧಿ, ಸುಶ್ಮಿತಾ, ಅನುಷಾ, ಭವಿಷ್, ಭವ್ಯ, ಸರಿತಾ, ಹೃತಿಕಾ, ರೀಷ್ಮಾ ಹಾಗೂ ಘಟಕದ ಎಲ್ಲಾ ಸದಸ್ಯರ ಸಂಘಟಿತ ಶ್ರಮದ ಫಲವಾಗಿ ಪಂಚಮ ಸ್ಥಾನ (ನಗದು ಹಾಗೂ ಟ್ರೋಫಿ) ಮತ್ತು ಸಂಘಟಕರ ಶಿಸ್ತಿನ ತಂಡ ಪ್ರಶಸ್ತಿ (ನಗದು ಹಾಗೂ ಟ್ರೋಫಿ ) ಯೊಂದಿಗೆ, ಕಾರ್ಕಳ ಘಟಕವು ಎರಡು ಪ್ರಶಸ್ತಿಯನ್ನು ಪಡೆದು ಕೊಂಡಿದೆ.