ಮೂಡುಬಿದಿರೆ ಮುದ್ದುಕೃಷ್ಣ ವೇಷ ಸ್ಪರ್ಧೆ

0
8

ಮೂಡುಬಿದಿರೆ : ಶ್ರೀ ಕೃಷ್ಣ ಫ್ರೆಂಡ್ಸ್ ಸರ್ಕಲ್ ಅವರು ಆಗಸ್ಟ್ 23ರಂದು ಸಮಾಜ ಮಂದಿರದಲ್ಲಿ ಮುದ್ದುಕೃಷ್ಣವೇಷ ಸ್ಪರ್ಧೆಯನ್ನು ನಡೆಸಿದರು. ಸ್ಪರ್ಧೆಯನ್ನು ರೋಟರಿ ಅಸಿಸ್ಟೆಂಟ್ ಗವರ್ನರ್ ಬಿ ಶ್ರೀಕಾಂತ್ ಕಾಮತ್ ದೀಪ ಬೆಳಗಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಮಾಜಿ ಅಧ್ಯಕ್ಷ ಸುದರ್ಶನ್ ಎಂ, ಇಂಜಿನಿಯರ್ಗಳಾದ ರಾಧಾಕೃಷ್ಣ ಬೋರ್ಕರ್, ನಾಗೇಶ್, ಸಮಿತಿಯ ಅಧ್ಯಕ್ಷ ಸಂತೋಷ್ ಕುಮಾರ್, ಸಂಚಾಲಕ ಸುರೇಶ್ ರಾವ್, ಕಾರ್ಯದರ್ಶಿ ಸುಶಾಂತ್ ಕರ್ಕೇರ ಮಾರೂರು, ಹಾಗೂ ಇತರ ಪದಾಧಿಕಾರಿಗಳು, ಸದಸ್ಯರುಗಳು ಹಾಜರಿದ್ದರು.

ಸ್ಪರ್ಧೆಯ ವಿಜೇತರುಗಳು

1-2 ವಿಭಾಗ ಪ್ರಥಮ ರಿಷಾ ರೋಹಿತ್ ಹೆಗಡೆ, ದ್ವಿತೀಯ ಫ್ರಾಂಶುಲ್ ಪಿ ಪೂಜಾರಿ, ತೃತೀಯ ನಿಕ್ಷಿತ್ ಸಂತೋಷ್ ಅಳದಂಗಡಿ.
3-4 ವಿಭಾಗ ಪ್ರಥಮ ಧನಿಷ್ಠ ಎನ್ ಶೆಟ್ಟಿಗಾರ್, ದ್ವಿತೀಯ ಸಹನಾ ಪಿ ಪೂಜಾರಿ ಮತ್ತು ಸಾನಿಧ್ಯ ವಿಎನ್, ತೃತೀಯ ಲಹರಿ ಎಂ ಪೂಜಾರಿ.
5-6 ವಿಭಾಗ ಪ್ರಥಮ ಅರುಶಿ ಸಪ್ನಿಲ್ ಮತ್ತು ರೇಷ್ಮಾ ಎಚ್ ನಾಯಕ್, ದ್ವಿತೀಯ ಪಾಹಿ ಪಿ ಶೆಟ್ಟಿ ಮತ್ತು ಕಶ್ಚಿ ಎ ಶೆಟ್ಟಿ, ತೃತೀಯ ತ್ರಿಶಿಕಾ ಶೆಟ್ಟಿ ಮತ್ತು ಪ್ರತೀಕ್ಷಾ.
7-8 ವಿಭಾಗ ಪ್ರಥಮ ಆರಾಧ್ಯ ವೈ ಭಟ್, ದ್ವಿತೀಯ ಸಾನಿಧ್ಯ ಎಸ್ ಪೂಜಾರಿ, ತೃತೀಯ ಆದ್ಯ ಶ್ರೀ.
9-10 ವಿಭಾಗ ಆಧ್ಯ ವಿ ಕೋಟ್ಯಾನ್, ಮತ್ತು ಸಾಧ್ವಿ ಶೆಟ್ಟಿ, ದ್ವಿತೀಯ ಭುವನೇಶ್, ತೃತೀಯ ಅನ್ವಿಕ ಎ ದೇವಾಡಿಗ.