ಬೆಂಗಳೂರು : ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಎಸ್‌ಎಪಿ ಲ್ಯಾಬ್ಸ್ ಇಂಡಿಯಾ ವತಿಯಿಂದ ಮಾರ್ಚ್ 7ರಂದು ‘ಹರ್ ರನ್’ ಎಂಬ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮಹಿಳೆಯರು ಸೀರೆ ಧರಿಸಿ ಒಟ್ಟಾಗಿ ಓಡುವ ಮೂಲಕ ಮಹಿಳಾ ಶಕ್ತಿ, ಏಕತೆ ಹಾಗೂ ಸಾಧನೆಯನ್ನು ಸಂಭ್ರಮಿಸಿದರು.

ಸಂಪ್ರದಾಯದ ಪ್ರತೀಕವಾಗಿರುವ ಸೀರೆ ಧರಿಸಿಕೊಂಡು ಆತ್ಮವಿಶ್ವಾಸ ಮತ್ತು ಸ್ವಾತಂತ್ರ್ಯದೊಂದಿಗೆ ಮಹಿಳೆಯರು ಓಟದಲ್ಲಿ ಭಾಗವಹಿಸಿದ್ದು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು. ಮಹಿಳೆಯರು ಕೇವಲ ಓಟದಲ್ಲಿ ಭಾಗವಹಿಸುವುದಷ್ಟೇ ಅಲ್ಲದೆ, ತಮ್ಮ ಧೈರ್ಯ, ಸಹಕಾರ ಮತ್ತು ಪ್ರಗತಿಯ ಸಂದೇಶವನ್ನು ಈ ಕಾರ್ಯಕ್ರಮದ ಮೂಲಕ ಹಂಚಿಕೊಂಡರು.
ಈ ಕಾರ್ಯಕ್ರಮವನ್ನು ಎಸ್‌ಎಪಿ ಲ್ಯಾಬ್ಸ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕಿ ಸಿಂಧು ಗಂಗಾಧರನ್ ಉದ್ಘಾಟಿಸಿದರು. ಬೆಂಗಳೂರು ವೈಟ್‌ಫೀಲ್ಡ್‌ನಲ್ಲಿರುವ ಎಸ್‌ಎಪಿ ಲ್ಯಾಬ್ಸ್ ಇಂಡಿಯಾ ಕ್ಯಾಂಪಸ್‌ನಲ್ಲಿ ಕಾರ್ಯಕ್ರಮ ನಡೆಯಿತು.
ಮಹಿಳಾ ದಿನದ ಪ್ರಯುಕ್ತ ಆಯೋಜಿಸಲಾದ ಈ ವಿಶೇಷ ಓಟದಲ್ಲಿ ಹಲವಾರು ಮಹಿಳೆಯರು ಉತ್ಸಾಹದಿಂದ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

