ಮಂಗಳೂರು : ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘ (ನಿ.) ಮಂಗಳೂರು ಇದರ ವತಿಯಿಂದ “ಜೀವನ್ ಫಾರ್ಮ್” ದೇವಿನಗರ, ಕಿನ್ಯಾ, ಉಳ್ಳಾಲದಲ್ಲಿ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ರವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮವು ಜರುಗಿತು. ತದನಂತರ ಮಾತನಾಡಿದ ಸಂಘದ ಅಧ್ಯಕ್ಷರು ಯೋಗ ದಿನಾಚರಣೆಯ ಮಹತ್ವದ ಬಗ್ಗೆ ಸಂಘದ ಸಿಬ್ಬಂದಿಗಳಿಗೆ ಮಾಹಿತಿ ನೀಡಿದರು.

ಯೋಗ ಶಿಕ್ಷಕರಾದ ಮೋನಪ್ಪ ಪೂಜಾರಿಯವರು ಸಂಘದ ಸಿಬ್ಬಂದಿಗಳಿಗೆ ಯೋಗದಿಂದ ಆಗುವ ಪ್ರಯೋಜನ ಹಾಗೂ ಯೋಗಾಸನ ಮಾಡಿಸುವುದರ ಮೂಲಕ ಯೋಗ ದಿನಾಚರಣೆಯನ್ನು ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಯೋಗ ಕಲಿಕೆಯಲ್ಲಿ 33 ವರ್ಷಕ್ಕೂ ಅಧಿಕ ಸೇವೆ ಸಲ್ಲಿಸಿರುವ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃ ತ ಮೋನಪ್ಪ ಪೂಜಾರಿ ರವರನ್ನು ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಸಂಘದ ಉಪಾಧ್ಯಕ್ಷರಾದ ನೇಮಿರಾಜ್. ಪಿ , ನಿರ್ದೇಶಕರಾದ ಜಿ. ಪರಮೇಶ್ವರ ಪೂಜಾರಿ ಆನಂದ್ ಎಸ್ ಕೊಂಡಾಣ, ರಮಾನಾಥ್ ಸನಿಲ್, ಬಿ.ಪಿ. ದಿವಾಕರ್, ಗೋಪಾಲ್ ಎಮ್. ಉಮಾವತಿ, ಮುಖ್ಯಕಾರ್ಯನಿರ್ವಹಣಾಧಿಕಾರಿ ಸೌಮ್ಯ ವಿಜಯ್, ಬ್ರಹ್ಮಶ್ರೀ ನಾರಾಯಣಗುರುಸ್ವಾಮಿ ಪ್ರಕಾಶನ ಮತ್ತು ಚಾರಿಟೆಬಲ್ ಟ್ರಸ್ಟ್ (ರಿ) ಇದರ ಗೌರವಾಧ್ಯಕ್ಷರಾದ ವಾಮನ್ ಕೆ., ಜೀವನ್ ಫಾರ್ಮ್ನ ಮಾಲಕರಾದ ಶ್ರೀ ಧರ್ಮರಾಜ್ ಹಾಗೂ ಸಂಘದ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

