ಮಲಾಡ್ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿಯಿಂದ 17 ನೇ ವಾರ್ಷಿಕ ಸಾಮೂಹಿಕ ವರಮಹಾಲಕ್ಷ್ಮೀ ಪೂಜೆಯ ಆಮಂತ್ರಣ ಪತ್ರಿಕೆ ಬಿಡುಗಡೆ

0
6

ಸಮಯಕ್ಕೆ ಮಹತ್ವ ನೀಡಿ ಪೂಜೆ ನಡೆಯಲಿದೆ : ನ್ಯಾಯವಾದಿ ಜಗನ್ನಾಥ್ ಶೆಟ್ಟಿ ಪಣಿಯೂರು

ಮುಂಬಯಿ: ಮಲಾಡ್ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ 17ನೇ ವಾರ್ಷಿಕ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆಯು ಆ. 30ರಂದು ಶ್ರೀ ಸ್ವಾಮಿ ನಾರಾಯಣ ಮಂದಿರ ಸಭಾಗೃಹ, ಶಾರದಾ ಗ್ಯಾನಪೀಠ ಇಂಟರ್ನ್ಯಾಷನಲ್ ಶಾಲೆಯ ಹತ್ತಿರ, ದತ್ತ ಮಂದಿರ ರೋಡ್, ಮಲಾಡ್ ಪೂರ್ವ ಇಲ್ಲಿ ಸಮಿತಿ ಇಲ್ಲಿ ಜರಗಲಿದ್ದು
ಇದರ ಆಮಂತ್ರಣ ಪತ್ರಿಕೆಯು ಆ. 3 ರಂದು ಮಲಾಡ್ ಪೂರ್ವದಲ್ಲಿ ಇರುವ ಪೂಜಾ ಸಮಿತಿಯ ಭಜನಾ ಅಭ್ಯಾಸ ಕೇಂದ್ರದಲ್ಲಿ ಸಮಿತಿಯ
ಅಧ್ಯಕ್ಶರಾದ ನ್ಯಾಯವಾದಿ ಜಗನ್ನಾಥ್ ಎನ್ ಶೆಟ್ಟಿ ಪಣಿಯೂರು ಮತ್ತು ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಕೆ. ಆಚಾರ್ಯ ಹಾಗು ಇತರ ಪದಾಧಿಕಾರಿಗಳು ಆಮಂತ್ರಣೆ ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ನ್ಯಾಯವಾದಿ ಜಗನ್ನಾಥ್ ಎನ್ ಶೆಟ್ಟಿ ಪಣಿಯೂರು ಕಾರ್ಯಕ್ರಮದಲ್ಲಿ ಪುತ್ತಿಗೆ ಮಠದ ಸ್ವಾಮೀಜಿ ಮತ್ತು ಗಣ್ಯರು ಪಾಲ್ಗೊಳ್ಳಲಿದ್ದು ಕಾರ್ಯಕ್ರಮ ಸಮಯದಲ್ಲಿ ನಡೆಯುವಂತೆ ಎಲ್ಲರೂ ಸಹಕರಿಸಬೇಕು ಸಂಜೆ 6:00ಗೆ ಪೂಜಾ ವಿಧಿ ಪ್ರಾರಂಭಗೊಳ್ಳಲಿದೆ ಮಹಿಳೆಯರೆಲ್ಲರೂ ಸೂಕ್ತ ಸಮಯಕ್ಕೆ ಆಗಮಿಸಿ ಪೂಜೆಯ ಯಶಸ್ಸಿಗೆ ಎಲ್ಲರೂ ಸಹಕರಿಸಿ ಪ್ತೋತ್ಸಾಹಿಸಬೇಕೆಂದರು ಎಂದು ನುಡಿದರು.

ಕೆ ಆಚಾರ್ಯ ಮಾತನಾಡಿ ಮಧ್ಯಾಹ್ನ 2:00ಗೆ ಭಜನಾ ಕಾರ್ಯಕ್ರಮ ಆರಂಭಗೊಳ್ಳುತ್ತದೆ . 4:00ಗೆ ಯುವ ವಿಭಾಗದ ಸದಸ್ಯರಿಂದ ವೈಭವದ ನೃತ್ಯರೂಪ ಕನ್ನಡಿಗರಿದೆ ಸಂಜೆ ಆರು ಗಂಟೆಗೆ ಪೂಜೆ ಪ್ರಾರಂಭಗೊಳ್ಳಲಿದೆ ಮಹಿಳಾ ಸದಸ್ಯರು ಮತ್ತು ಪೂಜೆಯಲ್ಲಿ ಕಾಣಬಹುದು ಎಲ್ಲಾ ಮಹಿಳೆಯರು ಸಮಯದಲ್ಲಿ ಆಗಮಿಸಿ ಎಂದರು.

ಗೌರವ ಕಾರ್ಯದರ್ಶಿ ಸನತ್ ಪೂಜಾರಿ ಕೆಲ್ಲಪುತ್ತಿಗೆ ಸ್ವಾಗತಿಸಿದರು. ಕೋಶಾಧಿಕಾರಿ ಸುರೇಂದ್ರ ಆಚಾರ್ಯ ಧನ್ಯವಾದ ಸಮರ್ಪಿಸಿದರು. ಸಮಿತಿಯ ಜೊತೆ ಕಾರ್ಯದರ್ಶಿ ಲಕ್ಷ್ಮಣ್ ರಾವ್ ಗಾಣಿಗ, ಮಹಿಳಾ ವಿಭಾಗದ ಕಾರ್ಯದರ್ಶಿ ಶೀಲಾ ಎಂ ಪೂಜಾರಿ, ಕೋಶಾಧಿಕಾರಿ ನಳಿನಿ ಪಿ ಕರ್ಕೆರ, ಉಪ ಕಾರ್ಯಾಧ್ಯಕ್ಷರುಗಳಾದ ಗೀತಾ ಜೆ ಮೆಂಡನ್, ಸಂಧ್ಯಾ ಎಸ್ ಪ್ರಭು, ಜೊತೆ ಕಾರ್ಯದರ್ಶಿ ಗಳಾದ ಭಾರತಿ ಎಸ್ ಆಚಾರ್ಯ ಮತ್ತು ವಿದ್ಯಾ ಡಿ ಆಚಾರ್ಯ, ಜೊತೆ ಕೋಶಾಧಿಕಾರಿಗಳಾದ ಶೋಭಾ ಎಲ್ ರಾವ್ ಗಾಣಿಗ , ಸಲಹಾ ಸಮಿತಿಯ ಸದಸ್ಯರುಗಳಾದ ರತ್ನ ಡಿ ಕುಲಾಲ್, ಕಾರ್ಯಕಾರಿ ಸಮಿತಿ ಮತ್ತು ಯುವ ವಿಭಾಗದ ಸದಸ್ಯರು ಉಪಸ್ಥಿತರಿದ್ದರು,