ನ.29ರಂದು ನಡೆಯಲಿರುವ ತುಳುಕೂಟ ಗೋವಾ ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಎಸ್.ಎಂ. ಶೆಟ್ಟಿ ಕೈಟ್ ಅವರು ಬಿಡುಗಡೆಗೊಳಿಸಿದರು.
ಗೋವಾದ ಲೆಪ್ಪೋಲೆ ಪುಂಡಲೀಕ್ ದೇವಸ್ಥಾನದಲ್ಲಿ ದೇವರ ಸನ್ನಿಧಿಯಲ್ಲಿ ನಡೆದ ಈ ಕಾರ್ಯಕ್ರಮವು ಧಾರ್ಮಿಕ ಹಾಗೂ ಸಾಂಸ್ಕೃತಿಕ ವಾತಾವರಣದಲ್ಲಿ ನೆರವೇರಿತು. ಗೋವಾ ಬಂಟರ ಸಂಘದ ಅಧ್ಯಕ್ಷ ಶಶಿಧರ ರೈ, ಬಿಲ್ಲವ ಸಂಘದ ಅಧ್ಯಕ್ಷ ಕೃಷ್ಣ ಪೂಜಾರಿ, ಮಾಜಿ ಅಧ್ಯಕ್ಷ ನಾಗೇಶ್ ಪೂಜಾರಿ, ರಾಜೇಂದ್ರ ನಾಥ್, ಸುಬ್ರಹ್ಮಣ್ಯ ಶೆಟ್ಟಿ, ಜಗದೀಶ್ ಶೆಟ್ಟಿ, ರಾಘವೇಂದ್ರ ಉಡುಪ, ಶರತ್ ಶೆಟ್ಟಿ, ದಿನೇಶ್ ಮೊಗವೀರ, ಶರತ್ ರಾವ್, ಬಾಲಕೃಷ್ಣ ಶೆಟ್ಟಿ, ಪದ್ಮನಾಭ ಕುಂದರ್ ಹಾಗೂ ಮೋಹನ್ ದಾಸ್ ಶೆಟ್ಟಿ ಉಪಸ್ಥಿತರಿದ್ದರು.
ತುಳುಕೂಟದ ಅಧ್ಯಕ್ಷ ಗಣೇಶ್ ಶೆಟ್ಟಿ, ಕಾರ್ಯದರ್ಶಿ ಶಶಿಧರ್ ನಾಯ್ಕ್ ಹಾಗೂ ಪ್ರಶಾಂತ್ ಜೈನ್ ಸೇರಿದಂತೆ ಹಲವು ಗಣ್ಯರ ಸಮ್ಮುಖದಲ್ಲಿ ಆಹ್ವಾನ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು.

