ಆಮಂತ್ರಣ ಮೈಂಡ್ ಪ್ರೆಶ್ ಏಕಕಾಲದಲ್ಲಿ 7 ತಂಡಗಳ ಉದ್ಘಾಟನೆ

0
220

ಬೆಳ್ತಂಗಡಿ : ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ಕರ್ನಾಟಕದ ನೂತನ ಮೈಂಡ್ ಪ್ರೆಶ್ 7 ತಂಡಗಳ ಉದ್ಘಾಟನೆ ಮೇ 14 ರಂದು ನಡೆಯಲಿದೆ.

ಒಂದು ವರ್ಷದ ಅವಧಿಯಲ್ಲಿ ವೇದಿಕೆ ಹತ್ತು ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು ಇದೀಗ ಬಹುಮುಖ್ಯವಾಗಿ ಮೈಂಡ್ ಪ್ರೆಶ್ ಎನ್ನುವಂತ ಆಟಗಳನ್ನು ಮಾಡುತ್ತಿದೆ.
ಅದಕ್ಕಾಗಿ ನೂತನವಾಗಿ 7 ತಂಡಗಳನ್ನು ಸಿದ್ದ ಪಡಿಸಿದ್ದು ಇವುಗಳ ಉದ್ಘಾಟನೆ ಏಕಕಾಲದಲ್ಲಿ ವಿಭಿನ್ನವಾಗಿ ವಾಟ್ಸಪ್ ಗ್ರೂಪಿನಲ್ಲಿ ನಡೆಯಲಿರುವುದು.
ಸಿಂಧೂರ,ಚಕ್ರವ್ಯೂಹ, ರಾಜಧಾನಿ, ಒಲುಮೆ,ಕರಾವಳಿ,ಜನನಿ, ಸನ್ನಿಧಿ ಎಂಬ ಹೆಸರಿನಲ್ಲಿ ತಂಡ ರಚನೆಯಾಗಿದ್ದು 7 ತಂಡಗಳನ್ನು ಏಳು ಅತಿಥಿಗಳು ಉದ್ಘಾಟಿಸಲಿದ್ದಾರೆ.
ಈ ತಂಡಗಳಲ್ಲಿ ಪ್ರತಿ ದಿನ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ಪ್ರಮಾಣ ಪತ್ರವನ್ನು ನೀಡಲಾಗುತ್ತಿದೆ.
ಎಂದು ಆಮಂತ್ರಣ ಪರಿವಾರದ ವಿಜಯ ಕುಮಾರ್ ಜೈನ್, ರಾಜ್ಯ ಪ್ರತಿನಿಧಿಗಳಾದ ಆಶಾ ಅಡೂರು ಮತ್ತು ಉಮಾ ಹಾಸನ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here