ಛತ್ರಪತಿ ಶಿವಾಜಿ ಮಹಾರಾಜರು ಪ್ರಾರಂಭಿಸಿದ ಮತಾಂತರಿತರ ‘ಶುದ್ಧೀಕರಣ’ಕ್ಕೆ 350 ವರ್ಷಗಳು ಪೂರ್ಣ!

0
31

ಜೂನ್ 19 ಅನ್ನು ‘ರಾಷ್ಟ್ರೀಯ ಘರ್ ವಾಪ್ಸಿ ದಿನ’ ಎಂದು ಆಚರಿಸಿ! – ಸಮಸ್ತ ಹಿಂದೂ ಸಂಘಟನೆಗಳಿಗೆ ಹಿಂದೂ ಜನಜಾಗೃತಿ ಸಮಿತಿ ಕರೆ

ಹಿಂದವೀ ಸ್ವರಾಜ್ಯದ ಸಂಸ್ಥಾಪಕರಾದ ಛತ್ರಪತಿ ಶಿವಾಜಿ ಮಹಾರಾಜರು ಕೇವಲ ಒಬ್ಬ ಯೋಧನಾಗಿರಲಿಲ್ಲ, ಬದಲಿಗೆ ಅವರು ಒಬ್ಬ ಶ್ರೇಷ್ಠ ಧರ್ಮರಕ್ಷಕ ಮತ್ತು ದಾರ್ಶನಿಕ ಯುಗಪುರುಷರಾಗಿದ್ದರು. ಇಂದಿಗೆ ಸರಿಯಾಗಿ 350 ವರ್ಷಗಳ ಹಿಂದೆ, ಅಂದರೆ 19 ಜೂನ್ 1676 ರಂದು, ಛತ್ರಪತಿ ಶಿವಾಜಿ ಮಹಾರಾಜರು ಪರಾಕ್ರಮಿ ಸೇನಾಪತಿ ನೇತಾಜಿ ಪಾಲ್ಕರ್ ಅವರ ‘ಶುದ್ಧೀಕರಣ’ ಮಾಡಿ ಅವರನ್ನು ಮತ್ತೆ ಹಿಂದೂ ಧರ್ಮಕ್ಕೆ ಗೌರವಪೂರ್ವಕವಾಗಿ ಬರಮಾಡಿಕೊಂಡಿದ್ದರು. ಈ ಅಭೂತಪೂರ್ವ ಮತ್ತು ಐತಿಹಾಸಿಕ ಘಟನೆಗೆ 19 ಜೂನ್ 2026 ರಂದು ಬರೋಬ್ಬರಿ 350 ವರ್ಷಗಳು ಪೂರ್ಣಗೊಳ್ಳುತ್ತಿವೆ.

ಈ ಐತಿಹಾಸಿಕ ತ್ರೀಶತಮಾನೋತ್ಸವ ಸುವರ್ಣ ಮಹೋತ್ಸವ ವರ್ಷದ ಅಂಗವಾಗಿ ಈ ದಿನವನ್ನು ದೇಶಾದ್ಯಂತ ‘ರಾಷ್ಟ್ರೀಯ ಘರ್ ವಾಪ್ಸಿ ದಿನ’ ಎಂದು ಆಚರಿಸಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯು ಎಲ್ಲಾ ಹಿಂದೂ ಸಂಘಟನೆಗಳಿಗೆ ಕರೆ ನೀಡಿದೆ.

ಸ್ವರಾಜ್ಯದ ಮೊದಲ ಸೇನಾಪತಿ ನೇತಾಜಿ ಪಾಲ್ಕರ್ ಅವರನ್ನು ಮೊಘಲರು ಕಪಟತನದಿಂದ ಸೆರೆಮನೆಗೆ ತಳ್ಳಿದ್ದರು. ಅತ್ಯಂತ ಕ್ರೂರವಾದ ಚಿತ್ರಹಿಂಸೆ ನೀಡಿ ಅವರನ್ನು ಬಲವಂತವಾಗಿ ಮುಸ್ಲಿಂ ಧರ್ಮಕ್ಕೆ ಮತಾಂತರಿಸಲಾಯಿತು ಮತ್ತು ಅವರಿಗೆ ‘ಮುಹಮ್ಮದ್ ಕುಲಿ ಖಾನ್’ ಎಂದು ಹೆಸರಿಡಲಾಯಿತು. ಹಲವು ವರ್ಷಗಳ ಕಾಲ ಪರಧರ್ಮ ಮತ್ತು ಪರಕೀಯರ ಭೂಮಿಯಲ್ಲಿದ್ದರೂ ನೇತಾಜಿಯವರ ಮನಸ್ಸು ಸ್ವರಾಜ್ಯಕ್ಕಾಗಿ ಹಂಬಲಿಸುತ್ತಿತ್ತು. ಅವರು ಮೊಘಲರ ಹಿಡಿತದಿಂದ ತಪ್ಪಿಸಿಕೊಂಡು ಮತ್ತೆ ರಾಯಗಢದ ಛತ್ರಪತಿ ಶಿವರಾಯರ ಪಾದದಡಿಗೆ ಬಂದಾಗ, ಮಹಾರಾಜರು ಧರ್ಮಶಾಸ್ತ್ರದ ಪ್ರಕಾರ ವಿಧಿವಿಧಾನಗಳೊಂದಿಗೆ ಅವರ ‘ಶುದ್ಧೀಕರಣ’ ಮಾಡಿದರು. ಜೇಧೆ ಶಕಾವಳಿಯ ಪ್ರಕಾರ ಶಕೆ 1598, ಆಷಾಢ 4 (19 ಜೂನ್ 1676) ರಂದು ನೇತಾಜಿ ಪಾಲ್ಕರ್ ಅವರನ್ನು ಮತ್ತೆ ಹಿಂದೂ ಧರ್ಮಕ್ಕೆ ಸ್ವೀಕರಿಸಲಾಯಿತು.

ಈ ಕುರಿತು ಮಾತನಾಡಿದ ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ. ರಮೇಶ್ ಶಿಂದೆ ಅವರು, “ಇಂದು 350 ವರ್ಷಗಳ ನಂತರವೂ ಈ ಇತಿಹಾಸವು ನಮಗೆ ಅತ್ಯಂತ ಪ್ರಮುಖವಾದದ್ದು ಮತ್ತು ಮಾರ್ಗದರ್ಶಕವಾಗಿದೆ. ವಿವಿಧ ಆಮಿಷಗಳು, ಒತ್ತಡ ಅಥವಾ ಕಿರುಕುಳಕ್ಕೆ ಬಲಿಯಾಗಿ ನಮ್ಮ ಲಕ್ಷಾಂತರ ಹಿಂದೂ ಸಹೋದರ-ಸಹೋದರಿಯರು ಮತಾಂತರಗೊಂಡಿದ್ದಾರೆ. ಇಂದಿನ ದಿನಗಳಲ್ಲಿ ‘ಲವ್ ಜಿಹಾದ್’ ನಂತಹ ವ್ಯವಸ್ಥಿತ ಸಂಚಿಗೆ ಬಲಿಯಾಗಿ ನಮ್ಮ ಅನೇಕ ಹಿಂದೂ ಯುವತಿಯರು ಪರಧರ್ಮದತ್ತ ಸೆಳೆಯಲ್ಪಡುತ್ತಿದ್ದಾರೆ. ‘ಅವಳು ಹೋದರೆ ಹೋಗಲಿ, ಇನ್ಮುಂದೆ ಅವಳಿಗೂ ನಮಗೂ ಯಾವುದೇ ಸಂಬಂಧವಿಲ್ಲ’ ಎಂಬ ಮನಸ್ಥಿತಿಯನ್ನು ಹಿಂದೂ ಸಮಾಜವು ಈಗ ತ್ಯಜಿಸಬೇಕಾಗಿದೆ. ಪ್ರೀತಿಯ ಸುಳ್ಳು ಜಾಲದಲ್ಲಿ ಸಿಲುಕಿ ವಂಚನೆಗೊಳಗಾದ ನಮ್ಮ ಹೆಣ್ಣುಮಕ್ಕಳು ಮತ್ತು ಸಹೋದರಿಯರಿಗೆ ಮತ್ತೆ ಗೌರವಯುತವಾಗಿ ಹಿಂದೂ ಧರ್ಮ ಮತ್ತು ಸಮಾಜದಲ್ಲಿ ಸುರಕ್ಷಿತ ಸ್ಥಾನವನ್ನು ನೀಡಲು ಈ ಐತಿಹಾಸಿಕ ದಿನವನ್ನು ಸ್ಮರಿಸುವುದು ಅತ್ಯಂತ ಅಗತ್ಯವಾಗಿದೆ. ಛತ್ರಪತಿ ಶಿವಾಜಿ ಮಹಾರಾಜರ ಈ ಆದರ್ಶವನ್ನೇ ಕಣ್ಣೆದುರು ಇಟ್ಟುಕೊಂಡು ಇಡೀ ಹಿಂದೂ ಸಮಾಜ, ಸಂತರು ಮತ್ತು ಸಂಘಟನೆಗಳು ಮುಂದೆ ಬರಬೇಕಾದ ಅಗತ್ಯವಿದೆ. ಯಾವ ಸಹೋದರರು ಮತ್ತು ಮುಖ್ಯವಾಗಿ ಸಹೋದರಿಯರು ಮೂಲ ಪ್ರವಾಹಕ್ಕೆ (ಹಿಂದೂ ಧರ್ಮಕ್ಕೆ) ಮರಳಿ ಬರಲು ಬಯಸುತ್ತಾರೋ, ಅವರಿಗಾಗಿ ನಾವು ನಮ್ಮ ಬಾಗಿಲುಗಳನ್ನು ಮತ್ತು ಮನಸ್ಸುಗಳನ್ನು ಮುಕ್ತವಾಗಿಡಬೇಕು” ಎಂದರು.

ತಮ್ಮ ಸವಿನಯ ,
ಶ್ರೀ. ರಮೇಶ್ ಶಿಂದೆ,
ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ

LEAVE A REPLY

Please enter your comment!
Please enter your name here