ಯುವವಾಹಿನಿ (ರಿ.) ಮಾಣಿ ಘಟಕ ಯುವ ಯುವ ವೃಕ್ಷೋತ್ಸವದ ನಾಲ್ಕನೇ ಹಂತದ ಕಾರ್ಯಕ್ರಮ

0
24

ಮಾಣಿ: ನೆಡುವ ಗಿಡ ನಾಳೆಯ ಪೀಳಿಗೆಗೆ ನೀಡುವ ಅಮೂಲ್ಯ ಉಡುಗೊರೆಎಂದು ಯುವವಾಹಿನಿ ಮಾಣಿ ಘಟಕ ಅಧ್ಯಕ್ಷರಾದ
ಗಣೇಶ್ ಸಾಯಿ ಕೊಡಾಜೆ ಹೇಳಿದರು.
ಅವರು ಜೂನ್ 18 ಗುರುವಾರ ಯುವ ವೃಕ್ಷೋತ್ಸವದ ನಾಲ್ಕನೇ ಹಂತದ ಕಾರ್ಯಕ್ರಮದ ಅಂಗವಾಗಿ ಕೆದಿಲ ಗ್ರಾಮ ಪಂಚಾಯಿತಿಯ ರುದ್ರಭೂಮಿಯಲ್ಲಿ ವೃಕ್ಷೋತ್ಸವ ಕಾರ್ಯಕ್ರಮದ ನಿಮಿತ ಗಿಡ ನಾಟಿ ಮಾಡಿ ಮಾತನಾಡಿದರು.
ಅಂತಿಮ ಯಾತ್ರೆಯ ತಾಣವಾಗಿರುವ ರುದ್ರಭೂಮಿಯೂ ಹಸಿರಿನಿಂದ ಕಂಗೊಳಿಸಿದಾಗ, ಅದು ಜೀವನದ ನಿರಂತರತೆಯ ಸಂಕೇತವಾಗುತ್ತದೆ ಎಂಬ ಸಂದೇಶದೊಂದಿಗೆ ಗಿಡಗಳನ್ನು ನೆಟ್ಟು ಪರಿಸರ ಸಂರಕ್ಷಣೆಯ ಸಂಕಲ್ಪ ಕೈಗೊಳ್ಳಲಾಯಿತು.ನಂತರ ಪಾಟ್ರಕೋಡಿ ಅಂಗನವಾಡಿ ಕೇಂದ್ರದಲ್ಲಿ,ಗಿಡ ನಾಟಿ ಮಾಡಲಾಯಿತು.
ಈ ಸಂದರ್ಭದಲ್ಲಿ ಯುವವಾಹಿನಿ ಘಟಕದ ಅಧ್ಯಕ್ಷರಾದ ಗಣೇಶ್ ಸಾಯಿ ಕೊಡಾಜೆ, ಕೋಶಾಧಿಕಾರಿಯಾದ ತ್ರಿವೇಣಿ ರಮೇಶ್, ವ್ಯಕ್ತಿತ್ವ ವಿಕಸನ ನಿರ್ದೇಶಕರಾದ ಸತೀಶ್ ಪೂಜಾರಿ, ಸಂಘಟನಾ ಕಾರ್ಯದರ್ಶಿ ಬಾಲಕೃಷ್ಣ ಕೆರೆಕೋಡಿ, ನಿತೀನ್ ಅಂಗರಾಜೆ ಯಶೋಧ ಪೆರ್ನೆ ಕೆದಿಲ ಗ್ರಾಮ ಪಂಚಾಯಿತಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಸಿಬ್ಬಂದಿಗಳು   ಅಂಗನವಾಡಿ ಕೇಂದ್ರದ ಶಿಕ್ಷಕಿ ಸಹಾಯಕಿ ಉಪಸ್ಥಿತರಿದ್ದು.

LEAVE A REPLY

Please enter your comment!
Please enter your name here