ಮಂಗಳೂರು ಮಹಾನಗರ ಪಾಲಿಕೆಯ 54ನೇ ಜಪ್ಪಿನಮೊಗರು ವರ‍್ಡ್ ನಲ್ಲಿ ಕಳೆದ ರ‍್ಷ ಬಂದಂತಹ ವಿಪರೀತ ಮಳೆಗೆ ಎಕ್ಕೂರು-ತೋಚಿಲ-ರುಂಡೆ ತೋಟ ಎಂಬಲ್ಲಿ ಬೃಹತ್ ತೋಡಿನ ಬದಿಗೋಡೆಯ ಬಿರುಕು ಬಿದ್ದು, ಗಣೇಶ್ ನಗರ ಜೆಪ್ಪಿನಮೊಗರು ಶಾಲಾ ಬಳಿ, ಬೀದಿ ಮುಂತಾದ ಪ್ರದೇಶಗಳು ಜಲಾವೃತಗೊಂಡಿರುವ ಬಗ್ಗೆ ದಿನಾಂಕ: 29-04-2026 ರಂದು ಈ ಬಗ್ಗೆ ಸರ‍್ವಜನಿ ಶ್ರೀ ಗಣೇಶೋತ್ಸವ ಸಮಿತಿ ಜಪ್ಪಿನಮೊಗರು ಇದರ ನೇತೃತ್ವದಲ್ಲಿ ವಿಧಾನಸಭಾದ್ಯಕ್ಷರಾದ ಯು.ಟಿ. ಖಾದರ್ ಫರೀದ್, ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್, ವಿಧಾನ ಪರಿಷತ್ ಶಾಸಕರಾದ ಐವನ್ ಡಿʼಸೋಜಾರವರ ಶಿಫಾರಸ್ಸು ಪತ್ರದೊಂದಿಗೆ ದ.ಕ. ಜಿಲ್ಲಾಧಿಕಾರಿ ಹಾಗೂ ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿಯನ್ನು ಸಲ್ಲಿಸಿದ್ದು. ಅದರಂತೆ ಪ್ರಸ್ತುತ ತಡೆಗೊಡೆ ಕಾಮಗಾರಿಯು ಪ್ರಾರಂಭಗೊಂಡಿರುತ್ತದೆ.

ಈ ಕಾಮಗಾರಿಯನ್ನು ವೀಕ್ಷಿಸಲು ವಿಧಾನ ಪರಿಷತ್ ಶಾಸಕರಾದ ಐವನ್ ಡಿʼಸೋಜಾರವರು ಮನಪಾ ಅಧಿಕಾರಿಯಾದ ರೂಪಾ ರವರೊಂದಿಗೆ ಭೇಟಿ ನೀಡಿ ಕಾಮಗಾರಿ ವೀಕ್ಷಿಸಿದರು.
ಈ ಸಂದರ‍್ಭದಲ್ಲಿ ಜೆ.ನಾಗೇಂದ್ರ ಕುಮಾರ್, ಲ| ಶ್ರೀಧರ್ ರಾಜ್ ಶೆಟ್ಟಿ, ಉದಯ ಕೊಟ್ಟಾರಿ ಬಜಾಲ್, ರ‍್ಬರ‍್ಟ್ ಡಿಸೋಜಾ ಕಡೇಕಾರ್, ಶಿವಾನಂದ ರಾವ್ ಬಜೆಹಿತ್ಲು, ತಾರಾನಾಥ ಭಂಡಾರಿ ತರ‍್ದೋಲ್ಯ, ಜೆ. ಬಾಲಕೃಷ್ಣ ಶೆಟ್ಟಿ, ಜೆ. ಕೃಷ್ಣ ಶೆಟ್ಟಿ ಬಜೆಹಿತ್ಲು, ಕಿಶೋರ್ ಕೊಟ್ಟಾರಿ, ಐವನ್ ಡಿʼಸೋಜಾ ಕಡೇಕಾರ್, ದಾಮೋದರ ಕಡೇಕಾರ್, ಶಾಂತಿ ಶೆಟ್ಟಿ ತಂದೊಳಿಗೆ, ಪ್ರಶಾಂತ್ ಡಿʼಸೋಜಾ, ಭರತ್ ಶೆಟ್ಟಿ, ಪದ್ಮನಾಭ ಎ. ಅಮರನಾಥ ಭಂಡಾರಿ, ಕರ‍್ತನ್ ತಂದೊಳಿಗೆ ,ಸುಭಾಷ್ ವಿ ಅಡಪ ಫದ್ಮನಾಭ ಎ., ಶಾಲಿನಿ, ಗುಣವತಿ ಬಜೆಹಿತ್ಲು, ಪ್ರಭಾವತಿ ಬಜೆಹಿತ್ಲು ಮತ್ತಿತರರು ಉಪಸ್ಥಿತರಿದ್ದರು.

