ನೆಲ್ಲಿ, ಅತ್ತೂರು ನಿಟ್ಟೆ : ಶ್ರೀ ರಾಜರಾಜೇಶ್ವರಿ ಕ್ಷೇತ್ರದ ಅಂಗವಾದ ಶ್ರೀ ಸದ್ಗುರು ನಿತ್ಯಾನಂದ ಮಂದಿರ, ನೆಲ್ಲಿ (ಅತ್ತೂರು–ನಿಟ್ಟೆ) ಯಲ್ಲಿ ನಡೆಯುತ್ತಿರುವ ವಾರ್ಷಿಕ ಜಾತ್ರಮಹೋತ್ಸವದ ಅಂಗವಾಗಿ ಇಂದಿನ ದಿನದ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಭಕ್ತಿಭಾವದಿಂದ ನಡೆಯಲಿವೆ.
ಇಂದು ಸಂಜೆ 6.30 ಗಂಟೆಗೆ ಉತ್ಸವ ಬಲಿ, ವಾಲಗ ಮಂಟಪ ಪೂಜೆ ಹಾಗೂ ಮಹಾರಂಗಪೂಜೆಗಳು ನಡೆಯಲಿವೆ. ಈ ಸಂದರ್ಭದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀದೇವರ ಕೃಪಾಕಟಾಕ್ಷಕ್ಕೆ ಪಾತ್ರರಾಗಬೇಕೆಂದು ಕ್ಷೇತ್ರದ ಆಡಳಿತ ಮೊಕ್ತೇಸರರುಗಳು ವಿನಂತಿಸಿದ್ದಾರೆ.
