ಜೇಸಿ ಸಪ್ತಾಹ – 2026 “ಸಂಚಲನ” ಸಮಾರೋಪ ಸಮಾರಂಭ 38 ಸಾಧಕರಿಗೆ ಏಕಕಾಲದಲ್ಲಿ ಸನ್ಮಾನ

0
5

ಜೇಸಿ ಸಪ್ತಾಹ 2026 “ಸಂಚಲನ” ಸಮಾರೋಪ ಸಮಾರಂಭದ ಪ್ರಯುಕ್ತ ಸಾಂಸ್ಕೃತಿಕ ಮತ್ತು ಮನೋರಂಜನಾ ಹಾಗೂ ಮೌನ ಸಾಧಕರ ಸನ್ಮಾನ ಕಾರ್ಯಕ್ರಮದ ಅಂಗವಾಗಿ ಸೆಪ್ಟೆಂಬರ್ 15ರ ಮಂಗಳವಾರ ಕಾಪು ವೀರಭದ್ರ ಸಭಾಭವನದಲ್ಲಿ ಕಾಪು ತಾಲೂಕಿನ ಶಾಲಾ ವಿದ್ಯಾರ್ಥಿಗಳಿಗೆ ಸಮೂಹ ನೃತ್ಯ ಸ್ಪರ್ಧೆ ಆಯೋಜಿಸಲಾಯಿತು, ಮಹಿಳೆಯರಿಗೆ ಮೆಹೆಂದಿ ಸ್ಪರ್ಧೆ, ಸೀರೆಯ ನಿಖರ ಬೆಲೆ ಹೇಳುವ ಸ್ಪರ್ಧೆ ಸೇರಿದಂತೆ ಅನೇಕ ಮನೋರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು, ವಿಜೇತರಿಗೆ ನಗದು ಬಹುಮಾನ, ಶಾಶ್ವತ ಫಲಕ, ಅಭಿನಂದನಾ ಪತ್ರ ಹಾಗೂ ಮನೋರಂಜನಾ ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ಬಹುಮಾನಗಳನ್ನು ನೀಡಲಾಯಿತು.

ಕಾಪು ಪುರಸಭಾ ವ್ಯಾಪ್ತಿಯ 20 ಜನ ಆಶಾ ಕಾರ್ಯಕರ್ತೆಯರಿಗೆ “ಆಶಾ ಸೇವಾ ಗೌರವ” ಮತ್ತು 5 ಜನ ಸಾಧಕ ಪುರುಷರಿಗೆ ಹಾಗೂ 11 ಜನ ಮಹಿಳಾ ಸಾಧಕರಿಗೆ “ಶ್ರೀಮಾತಾ ಗೌರವ ಪುರಸ್ಕಾರ” Salute The Slient Star ಗೌರವವನ್ನು ಮೌನ ಸಾಧಕರ ಸನ್ಮಾನದಡಿಯಲ್ಲಿ ಮಾಡಲಾಯಿತು.
ಶೈಕ್ಷಣಿಕವಾಗಿ ಸಾಧನೆಗೈದ ಸ್ವಾತಿ ಪೂಜಾರಿಯವರಿಗೆ ಸನ್ಮಾನಿಸಿ, ನಿಕಟ ಪೂರ್ವ ಅಧ್ಯಕ್ಷೆ ಅನಿತಾ ಹೆಗ್ಡೆಯವರಿಗೆ ಜೇಸಿ ಸಪ್ತಾಹದ ಅಂಗವಾಗಿ ನೀಡುವ ಅತ್ಯುನ್ನತ ಗೌರವ “ಕಮಲ ಪತ್ರ” ವನ್ನು ನೀಡಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಕಾಪು ವಿಧಾನಸಭಾ ಕ್ಷೇತ್ರದ ಶಾಸಕ
ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ಉಡುಪಿ ಜಿಲ್ಲಾ ಜಾತ್ಯತೀತ ಜನತಾದಳ ಜಿಲ್ಲಾಧ್ಯಕ್ಷ ಯೋಗೀಶ್ ವಿ. ಶೆಟ್ಟಿ ಬಾಲಾಜಿ, ಜೇಸಿಐ ಭಾರತದ ವಲಯ 15ರ ಪೂರ್ವ ವಲಯಾಧ್ಯಕ್ಷ ರಾಕೇಶ್ ಕುಂಜೂರು, ಗೌರವ ಉಪಸ್ಥಿತರಾಗಿ ಪೂರ್ವಾಧ್ಯಕ್ಷ ಸುಧಾಕರ ಸಾಲ್ಯಾನ್, ದೀಪಕ್ ಎರ್ಮಾಳ್, ರಮೇಶ್ ನಾಯ್ಕ್, ಜೇಸಿಐ ಉಡುಪಿ ಶಿವಳ್ಳಿ ಘಟಕದ ಅಧ್ಯಕ್ಷ ವಿನೋದ್ ಶೆಟ್ಟಿ, ಜೇಸಿ ಸಪ್ತಾಹ ಯೋಜನಾ ನಿರ್ದೇಶಕ ಕಾರ್ತಿಕ್ ಆಚಾರ್ಯ, ಸಹ ನಿರ್ದೇಶಕಿ ಸತ್ಯವತಿ ಬಂಗೇರ, ಮಹಿಳಾ ಜೇಸಿ ಸಂಯೋಜಕಿ ಕವಿತಾ ಕುಂದರ್, ಜೆಜೇಸಿ ಅಧ್ಯಕ್ಷ ಮನ್ವಿತ್ ಬಂಗೇರ, ಪೂರ್ವಾಧ್ಯಕ್ಷರುಗಳು, ಸದಸ್ಯರು ಹಾಗೂ ಕಾಪು ಭಾಗದ ವಿವಿಧ ಮಹಿಳಾ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.

ಅಧ್ಯಕ್ಷ ವಿಕ್ಕಿ ಪೂಜಾರಿ ಮಡುಂಬು ಸ್ವಾಗತಗೈದು ಕಾರ್ಯಕ್ರಮ ನಿರ್ವಹಿಸಿದರು, ಪೂರ್ವಾಧ್ಯಕ್ಷ ಶಿವಣ್ಣ ಬಾಯರ್ ಮತ್ತು ರಾಜೇಂದ್ರ ಬಿಕೆ ಸನ್ಮಾನ ಪತ್ರ ವಾಚಿಸಿದರು, ಕಾರ್ಯದರ್ಶಿ ಶ್ರುತಿ ಶೆಟ್ಟಿ ಧನ್ಯವಾದಗೈದರು.