ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ಪೈರ್ ನಿಂದ ಜರ್ಸಿ ಕೊಡುಗೆ

0
149

ಮುಲ್ಕಿ: ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ಪೈರ್ ನಿಂದ ಮುಲ್ಕಿ ಸೈಂಟ್ ಆನ್ಸ್ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳ ಫುಟ್ಬಾಲ್ ಟೀಮ್ ಗೆ ಜರ್ಸಿ ಕೊಡುಗೆಯಾಗಿ ನೀಡಿ ಮಾತನಾಡಿದ ಅಧ್ಯಕ್ಷರಾದ ಲಯನ್ ಅನಿಲ್ ಕುಮಾರ್, ವಿದ್ಯಾರ್ಥಿಗಳು ಶಿಕ್ಷಣ ಅಲ್ಲದೆ ಕ್ರೀಡಾಕೂಟಗಳಲ್ಲಿ ಭಾಗಿಯಾಗಿ ದೈಹಿಕ ಶಿಕ್ಷಣ ಹಾಗೂ ಮನೋ ಧೈರ್ಯವನ್ನು ಹೊಂದಿ ಶಿಕ್ಷಣ ಹಾಗೂ ಕ್ರೀಡೆಯಲ್ಲಿ ಉತ್ತಮ ಹೆಸರನ್ನು ಪಡೆಯಂತಾಗಲಿ ಎಂದು ಹಾರೈಸಿದರು. ಕಾರ್ಯಕ್ರಮದಲ್ಲಿ ಕ್ಲಬ್ಬಿನ ಕೋಶಾಧಿಕಾರಿ ಸಂತೋಷ್ ಕುಮಾರ್ , ನಿಕಟಪೂರ್ವ ಅಧ್ಯಕ್ಷರಾದ ಬಿ ಶಿವಪ್ರಸಾದ್ , ಪೂರ್ವ ಅಧ್ಯಕ್ಷ ಸುಧೀರ್ ಬಾಳಿಗ, ಪ್ರಣವ್ ಶರ್ಮ, ಕಾಲೇಜಿನ ಪ್ರಾಂಶುಪಾಲರಾದ
ಮರಿಯ ಜೂಲಿಯೆಟ್ ಬರೆಟ್ಟೊ ಹಾಗೂ ಕಾಲೇಜಿನ ಪ್ರಾಧ್ಯಾಪಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here